ಸಾರಾಂಶ
ಬೆಳೆ ಕಾಯಲು ಹೋಗಿದ್ದ ಇಬ್ಬರ ಸಾವು
ಪಾವಗಡ : ಶೇಂಗಾ ಬೆಳೆಗೆ ಕಾವಲು ಕಾಯಲು ಹೋಗಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಟಿ. ಎನ್. ಬೆಟ್ಟ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತರನ್ನು ಅನಿಲ್ ಕುಮಾರ (29) ಹಾಗೂ ಪುಟ್ಟರಾಜು (35) ಎಂದು ಗುರುತಿಸಲಾಗಿದೆ. ವನ್ಯ ಜೀವಿಗಳ ಹಾವಳಿ ಹಿನ್ನಲೆಯಲ್ಲಿ ಶೇಂಗಾ ಬೆಳೆ ಕಾವಲಿಗೆ ಹೋಗಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅರಸೀಕೆರೆ ಪೊಲೀಸ್ ಠಾಣೆ ಪಿಎಸ್‌ಐ ತಾರಾಸಿಂಗ್ ಮತ್ತು ಮುಖ್ಯಪೇದೆ ಸಿದ್ದೇಶ್ ಪರಿಶೀಲನೆ ನಡೆಸಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಇಬ್ಬರು ಮೃತರು ಬಡ ರೈತರಾಗಿದ್ದು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.