ತಂದೆ, ತಾಯಿ, ಬಂಧು, ಬಳಗದ ಋಣ ಅಪಾರ: ಡಾ.ಶಾಲಿನಿ

| Published : May 14 2024, 01:04 AM IST

ಸಾರಾಂಶ

ಜನರ ದೈಹಿಕ ನೋವುಗಳನ್ನು ಶಮನಗೊಳಿಸಿ, ರೋಗಿಗಳಿಗೆ ಸಂತೋಷ ಮೂಡಿಸುವಲ್ಲಿ ಸಾಧ್ಯವಿರುವ ವೈದ್ಯಕೀಯ ಶಿಕ್ಷಣ ಪೂರೈಸಿರುವುದು ನನ್ನಲ್ಲಿ ಸಾರ್ಥಕ ಭಾವ ತಂದಿದೆ ಎಂದು ಡಾ.ಶಾಲಿನಿ ಯ.ಕುಂದರಗಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗಜನರ ದೈಹಿಕ ನೋವುಗಳನ್ನು ಶಮನಗೊಳಿಸಿ, ರೋಗಿಗಳಿಗೆ ಸಂತೋಷ ಮೂಡಿಸುವಲ್ಲಿ ಸಾಧ್ಯವಿರುವ ವೈದ್ಯಕೀಯ ಶಿಕ್ಷಣ ಪೂರೈಸಿರುವುದು ನನ್ನಲ್ಲಿ ಸಾರ್ಥಕ ಭಾವ ತಂದಿದೆ ಎಂದು ಡಾ.ಶಾಲಿನಿ ಯ.ಕುಂದರಗಿ ಎಂದು ಹೇಳಿದರು.

ಸಮಗಾರ ಹರಳಯ್ಯ ಸಮಾಜದಿಂದ ಸನ್ಮಾನ ಸೀಕರಿಸಿ ಮಾತನಾಡಿದ ಅವರು, ತಂದೆ, ತಾಯಿ, ಬಂಧು, ಬಳಗದ ಋಣ ಅಪಾರ ಮತ್ತು ಶ್ರಮವನ್ನು ಅತ್ಯಂತ್ಯ ಮಹತ್ವದಾಗಿದೆ. ಶ್ರದ್ಧೆಯಿಂದ ರೋಗಿಗಳ ಚಿಕಿತ್ಸೆ ನೀಡಿ ಅವರ ಋಣ ಸಂದಾಯ ಮಾಡುವೆ ಎಂದರು.

ಹರಳಯ್ಯ ಸಮಾಜದ ಅಧ್ಯಕ್ಷ ಭರಮರಡ್ಡಿ ಆರ್.ದೊಡಮನಿ(ರಡ್ಡಿ) ಮಾತನಾಡಿ, ವೈದ್ಯ ವೃತ್ತಿ ಪವಿತ್ರವಾಗಿದೆ. ಅದರ ಮೌಲ್ಯಗಳನ್ನು ಕಾಪಾಡಿಕೊಂಡು ಮುಂದಿನ ಪಿಳಿಗೆಗೆ ಬಳುವಳಿಯಾಗಿ ನೀಡಿಬೇಕಾಗಿರುವುದು ಅವಶ್ಯವಿದೆ. ಯುವ ವೈದ್ಯರು ಹಣ ಸಂಪಾದನೆಯನ್ನೇ ಗುರಿಯನ್ನಾಗಿಸದೆ ಬಡರೋಗಿಗಳಿಗೂ ಉತ್ಮಮ ಚಿಕಿತ್ಸೆ ಲಭ್ಯವಾಗಲು ವೈದ್ಯರು ಶ್ರಮಸಬೇಕು ಎಂದು ಸಲಹೆ ನೀಡಿದರು.

ಪಟ್ಟಣದ ಹಿರಿಯ ವೈದ್ಯ ಡಾ.ವೈ.ಬಿ.ಕುಲಗೋಡ ಮಾತನಾಡಿ, ರೋಗಿಗಳ ಚಿಕಿತ್ಸೆ ಮಾಡುವುದು ತನ್ನ ಧರ್ಮ. ಆದರೆ, ಪ್ರಕೃತಿ ಮಾತ್ರ ಆರೋಗ್ಯ ನೀಡುವ ಪರಮಶಕ್ತಿ ಹೊಂದಿದೆಂಬ ಅರಿವು ವೈದ್ಯರು ಹೊಂದಬೇಕು ಎಂದು ಕಿವಿಮಾತು ಹೇಳಿದರು. ಡಾ.ಪರಶುರಾಮ ಪ.ರಾಯಬಾಗ, ಚಿದಾನಂದ ದೊಡಮನಿ, ರಾಜಶೇಖರ ಶಲವಡಿ, ಪ್ರಶಾಂತ ಕಲಾದಗಿ ಹಾಗೂ ಇತರರು ಇದ್ದರು.