ಸಾರಾಂಶ
ಕೊತ್ತವಳ್ಳಿ ದೊಡ್ಡಮ್ಮ ತಾಯಿ ದೇವರನ್ನು ಯುಗಾದಿ ಹಬ್ಬದ ಹಿನ್ನೆಲೆ ಕಾವೇರಿ ನದಿಯಲ್ಲಿ ತೊಳೆಯಲು ಬಂದಾಗ ನದಿಯಲ್ಲಿ ಇಳಿದು ಪೋಟೋ ತೆಗೆದುಕೊಳ್ಳುವ ವೇಳೆ ಮುಳುಗಿ ಈ ಇಬ್ಬರು ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಸಾಲಿಗ್ರಾಮ
ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದಲ್ಲಿ ನಡೆದಿದೆ.ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಮೀಪದ ಕಳ್ಳಿಕೊಪ್ಪಲು ಗ್ರಾಮದ ರವಿಕುಮಾರ ಅವರ ಪುತ್ರ ಗಗನ್ (18) ಮತ್ತು ಸುರೇಶ್ ಅವರ ಪುತ್ರ ದರ್ಶನ್ (20) ಮೃತಪಟ್ಟವರು.
ಕೊತ್ತವಳ್ಳಿ ದೊಡ್ಡಮ್ಮ ತಾಯಿ ದೇವರನ್ನು ಯುಗಾದಿ ಹಬ್ಬದ ಹಿನ್ನೆಲೆ ಕಾವೇರಿ ನದಿಯಲ್ಲಿ ತೊಳೆಯಲು ಬಂದಾಗ ನದಿಯಲ್ಲಿ ಇಳಿದು ಪೋಟೋ ತೆಗೆದುಕೊಳ್ಳುವ ವೇಳೆ ಮುಳುಗಿ ಈ ಇಬ್ಬರು ಮೃತಪಟ್ಟಿದ್ದಾರೆ.ತಕ್ಷಣವ ಅಲ್ಲಿಯೇ ಪೋಟೋ ತೆಗೆಯುತ್ತಿದ್ದ ಬಾಲಕ ಇವರ ರಕ್ಷಣೆಗೆ ಕೂಗಿಕೊಂಡಿದ್ದ ಅಲ್ಲಿದ್ದವರು ಪಂಚೆ ನೀಡಿ ರಕ್ಷಿಸುವ ಕೆಲಸ ಮಾಡಿದರು ಪ್ರಯೋಜನವಾಗಲಿಲ್ಲ.
ಕೆ.ಆರ್. ನಗರ ಆಗ್ನಿಶಾಮಕ ದಳದಿಂದ ಪತ್ತೆ ಕಾರ್ಯಾಚರಣೆ ನಡೆಸಿ ದರ್ಶನ್ ನ ಶವವನ್ನು ಹೊರ ತೆಗೆದರು. ಗಗನ್ ಶವ ಪತ್ತೆಯಾಗದ ಕಾರಣ ಹಂಪಾಪುರ ನುರಿತ ಈಜುಗಾರ ವಿಜಯಕುಮಾರ್ ಅವರು ನದಿಯಲ್ಲಿ ಮುಳುಗಿ ಶವವನ್ನು ತೆಗೆಯುವಲ್ಲಿ ಯಶಸ್ವಿಯಾದರು.ಮುಗಿಲು ಮುಟ್ಟಿದ ಅಕ್ರಂದನ
ಯುಗಾದಿ ಹಬ್ಬದ ದಿನವೇ ಬಾಳಿ ಬದುಕ ಬೇಕಾಗಿದ್ದ ತಮ್ಮೂರಿನ ಇಬ್ಬರು ಬಾಲಕರ ಸಾವು ಗ್ರಾಮಸ್ಥರಲ್ಲಿ ದಿಗ್ಭ್ರಮೆ ಮೂಡಿಸಿತ್ತಿಲ್ಲದೆ, ಸಾವಿರಾರು ಮಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಅಲ್ಲದೇ ಮೃತರ ಬಾಲಕರ ತಂದೆ- ತಾಯಂದಿರ ಅಕ್ರಂದನ ಮುಗಿಲು ಮುಟ್ಟಿತ್ತು.ಸಾಲಿಗ್ರಾಮ ಠಾಣೆಯ ಇನ್‌ಸ್ಪೆಕ್ಟರ್ ಕೃಷ್ಣರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಆರ್.ನಗರ ಸಾರ್ವಜನಿಕ ಆಸ್ವತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು.ಫಸ್ಟ್ ಕ್ಲಾಸ್ ನಲ್ಲಿ ಪಿಯುಸಿ ಪಾಸು, ಅದರೆ ಅವನೇ ಇಲ್ಲ
ಹನಸೋಗೆ ಬಳಿ ದೇವರು ತೊಳೆಯಲು ಬಂದು ಕಾವೇರಿ ನದಿಯಲ್ಲಿ ಮೃತಪಟ್ಟ ಗಗನ್ ಎಂಬಾತ ಬೆಟ್ಟದಪುರದ ಡಿಟಿಎಂಎನ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಬುಧವಾರ ಪ್ರಕಟಗೊಂಡ ಫಲಿತಾಂಶದಲ್ಲಿ 424 ಅಂಕ ಪಡೆದು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದನು. ಅದರೆ ದುರ್ವಿದಿ ಅವನೇ ಇದೀಗ ಇಲ್ಲದಂತಾಗಿದೆ.18 ರಂದು ನಡೆಯುವ ಸಿಇಟಿ ಪರೀಕ್ಷೆಯನ್ನು ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಬರೆಯಲು ಸಿದ್ದತೆ ಮಾಡಿಕೊಂಡಿದ್ದ ಎಂದು ಮೃತನಸಂಬಂಧಿ ಶಿಕ್ಷಕ ದೊಡ್ಡಕೊಪ್ಪಲು ಡಿ.ಟಿ. ಕುಮಾರ್ ಮಾಹಿತಿ ನೀಡಿದರು.