ಅಭಿವೃದ್ಧಿ ಹಿನ್ನಡೆಯಿಂದ ಗ್ರಾಪಂಗಳ ಬಗ್ಗೆ ಜನತೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮಗಳ ಪ್ರಗತಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಡಿಸಿಸಿ ಬ್ಯಾಂಕ್‌ ನಿರ್ದೇಶಕ,ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಕನ್ನಡಪ್ರಭವಾರ್ತೆ ಪಾವಗಡ

ಅಭಿವೃದ್ಧಿ ಹಿನ್ನಡೆಯಿಂದ ಗ್ರಾಪಂಗಳ ಬಗ್ಗೆ ಜನತೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮಗಳ ಪ್ರಗತಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಡಿಸಿಸಿ ಬ್ಯಾಂಕ್‌ ನಿರ್ದೇಶಕ,ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಅವರು ಶುಕ್ರವಾರ ತಾಲೂಕಿನ ತಿರುಮಣಿ ಗ್ರಾಮದಲ್ಲಿ 75ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ನೂತನ ಗ್ರಾಪಂ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸೋಲಾರ್‌ ಮೀಸಲು ನಿಧಿಯ 50ಲಕ್ಷ ಹಾಗೂ ನರೇಗಾದ 25ಲಕ್ಷ ಸೇರಿ ಒಟ್ಟು 75ಲಕ್ಷ ವೆಚ್ಚದಲ್ಲಿ ಗ್ರಾಪಂ ನೂತನ ಕಟ್ಟಡ ನಿರ್ಮಿಸಿದ್ದು ಜಿಲ್ಲೆಯಲ್ಲಿಯೇ ಮಾದರಿ ಗ್ರಾಪಂ ಕಟ್ಟಡ ಇದಾಗಿದೆ. ಇದಕ್ಕೆ ಶ್ರಮಿಸಿದ ಗ್ರಾಪಂ ಸದಸ್ಯರು ಹಾಗೂ ಅನುದಾನ ಕಲ್ಪಿಸಿದ ಸೋಲಾರ್‌ ನಿಗಮದ ಅಧಿಕಾರಿ ಮತ್ತು ನಿರ್ಮಿತಿ ಕೇಂದ್ರದವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಈ ಹಿಂದೆ ತಂದೆ ವೆಂಕಟರಮಣಪ್ಪ ಶಾಸಕರಾಗಿದ್ದ ವೇಳೆ ಕೆಲ ಕಾಮಗಾರಿಗಳಿಗೆ ಅನುದಾನ ಕಲ್ಪಿಸಿದ್ದು, ಪ್ರಗತಿ ವಿಳಂಬವಾಗುತ್ತಿದೆ. ವೇಗವಾಗಿ ಕೆಲಸ ಮಾಡುವಂತೆ ನಿರ್ವಹಣೆ ಹೊತ್ತ ನಿರ್ಮಿತಿ ಕೇಂದ್ರದ ಮೇಲಧಿಕಾರಿಗೆ ಆದೇಶಿಸಿದರು. 2000ಮೆಗಾ ವ್ಯಾಟ್ ವಿದ್ಯುತ್‌ ಉತ್ಪಾದಿಸುವ ಹಿನ್ನಲೆಯಲ್ಲಿ ರಾಷ್ಟೆ ಗ್ರಾಪಂ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ರೈತರ ಜಮೀನು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರ ಜಮೀನು ನೀಡಿದರೆ ಅನುಕೂಲವಾಗಲಿದೆ. ಬೇಡಿಕೆ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಮುರಾರ್ಜಿ ವಸತಿ ಶಾಲೆ ಶೀಘ್ರ ಮಂಜೂರಾತಿ ಕಲ್ಪಿಸಿಕೊಡುವುದಾಗಿ ತಿಳಿಸಿದರು ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ,1 989ರಲ್ಲಿ ಇಲ್ಲಿ ಹಾಸ್ಟಲ್ ಹಾಗೂ ಜೂನಿಯರ್ ಕಾಲೇಜು ನಿರ್ಮಿಸಿದ್ದೇವು .ಗ್ರಾಮದ ಪ್ರಗತಿಗೆ ಸ್ಥಳೀಯರ ಸಹಕಾರ ಮುಖ್ಯ. ಸ್ವಾರ್ಥ ಬಿಡಬೇಕು .ಬರೀ ಅಧಿಕಾರದ ಹಂಬಲವಿದ್ದರೆ ಸಾಲದು. ಅಭಿವೃದ್ದಿಯತ್ತ ಹೆಚ್ಚು ಒತ್ತು ನೀಡುವಂತೆ ಗ್ರಾಪಂ ಸದಸ್ಯರಿಗೆ ಎಚ್ಚರಿಸಿ ಸರ್ಕಾರದ ಸೌಲಭ್ಯ ಸದ್ಭಳಿಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ಶಿವಪ್ರಸಾದ್‌ ಮಾತನಾಡಿ, ಇಲ್ಲಿನ ಸೋಲಾರ್‌ ವಿಶೇಷ ಅನುದಾನದಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಮೂಲಭೂತ ಸಮಸ್ಯೆ ನಿವಾರಣೆಗೆ ಬಳಕೆಯಾಗಬೇಕು. ಗ್ರಾಪಂ ಕಟ್ಟಡ ಅತ್ಯುತ್ತಮವಾಗಿದ್ದು, ರೈಲ್ವೆ ಕಾಮಗಾರಿ ವೇಗದ ಪ್ರಗತಿಯಲ್ಲಿದೆ ಎಂದು ಕೇಂದ್ರದ ಹಲವು ಯೋಜನೆಗಳ ಬಗ್ಗೆ ವಿವರಿಸಿದರು.

ಕೆಎಸ್‌ಪಿಟಿಸಿಎಲ್‌ನ ಪ್ರಧಾನ ವ್ಯವಸ್ಥಾಪಕರಾದ ಎನ್‌.ಅಮರ್‌ನಾಥ್‌, ತಾಪಂ ಇಒ ಬಿ.ಕೆ.ಉತ್ತಮ್‌, ತಿರುಮಣಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿದೇವಿ ತಿರುಪತಯ್ಯ ಉಪಾಧ್ಯಕ್ಷ ಚಂದನ, ಹಿರಿಯ ಮುಖಂಡರಾದ ರಾಮಚಂದ್ರರೆಡ್ಡಿ,ಲಕ್ಷ್ಮಿ ನಾರಾಯಣಪ್ಪ, ಬತ್ತಿನೇನಿ ನಾಗೇಂದ್ರ ರಾವ್, ಚಲಪತಿ,ಮಲಿನೇನಿ ಕೋಟಗುಡ್ಡ ಸುರೇಶ್‌ಸ್ವಾಮಿ, ಜಯರಾಮ್‌, ಸಾಂಬಸದಾಶಿವರೆಡ್ಡಿ, ಸುರೇಂದ್ರ, ರಾಜಶೇಖರ್, ವೆಂಕಟರಾಮಯ್ಯ, ಶಂಕರ್ ರೆಡ್ಡಿ, ತೆಂಗಿನಕಾಯಿ ರವಿ,ಆರ್.ಎ.ಹನುಮಂತರಾಯಪ್ಪ,ಪರಿಟಾಲ ರವಿ, ಸಂಜೀವ್ ರೆಡ್ಡಿ,ಅಶೋಕ್,ರಾಜಪ್ಪ,ಗ್ರಾಪಂ ಪಿಡಿಒ ಸುದರ್ಶನ್‌ , ಚಿನ್ನಪ್ಪ, ಮಂಜುನಾಥ್‌, ಮುತ್ಯಾಲಪ್ಪ, ಕೆ.ವಿ.ನರಸರೆಡ್ಡಿ , ಶ್ರೀಧರ್ ಇತರರಿದ್ದರು.