ಶ್ರದ್ಧಾಭಕ್ತಿಯ ಚೆಲುವನಾರಾಯಣಸ್ವಾಮಿ ತೀರ್ಥಸ್ನಾನ ಮಹೋತ್ಸವ

| Published : Apr 13 2025, 02:07 AM IST

ಶ್ರದ್ಧಾಭಕ್ತಿಯ ಚೆಲುವನಾರಾಯಣಸ್ವಾಮಿ ತೀರ್ಥಸ್ನಾನ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

50 ಸಾವಿರಕ್ಕೂ ಹೆಚ್ಚಿದ್ದ ಭಕ್ತರ ಜಯಘೋಷಗಳ ನಡುವೆ ಸ್ನಪನಶೆಲ್ವರಿಗೆ ಭಕ್ತರ ಇಷ್ಠಾರ್ಥ ಈಡೇರಿಕೆ, ನಾಡಿನ ಸುಭೀಕ್ಷತೆ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ:

ಶ್ರೀನಾರಾಯಣಸ್ವಾಮಿ ಭೂಲೋಕಕ್ಕೆ ಅವಿರ್ಭವಿಸಿದ ಜಯಂತ್ಯುತ್ಸವ ಪವಿತ್ರ ದಿನವಾದ ಮೀನಮಾಸದ ಹಸ್ತನಕ್ಷತ್ರದ ಶುಭ ದಿನ ಶನಿವಾರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಲ್ಯಾಣಿ ನಾಲ್ಕು ಕಡೆಯ ಸೋಪಾನಗಳು, ಸಾಲುಮಂಟಪಗಳ ಮೇಲ್ಬಾಗ ಧಾರಾಮಂಟಪಗಳ ಮೇಲೆ ಕಿಕ್ಕಿರಿದು ತುಂಬಿದ್ದ 50 ಸಾವಿರಕ್ಕೂ ಹೆಚ್ಚಿದ್ದ ಭಕ್ತರ ಜಯಘೋಷಗಳ ನಡುವೆ ಸ್ನಪನಶೆಲ್ವರಿಗೆ ಭಕ್ತರ ಇಷ್ಠಾರ್ಥ ಈಡೇರಿಕೆ, ನಾಡಿನ ಸುಭೀಕ್ಷತೆ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕ ಮಾಡಲಾಯಿತು.

ಕಲ್ಯಾಣಿ ತಾಯಿಗೆ ಪೂಜೆನೆರವೇರಿಸಿ ಸ್ನಪನಶೆಲ್ವರನ್ನು ಕಲ್ಯಾಣಿಗೆ ಕೊಂಡೊಯ್ದು ತೀರ್ಥಸ್ನಾನ ನೆರವೇರಿಸಲಾಯಿತು. ಕಲ್ಯಾಣಿ ನಾಲ್ಕೂಕಡೆ ಸೇರಿದ್ದ ಭಕ್ತರು ಪವಿತ್ರಸ್ನಾನ ಮಾಡಿದರು. ಬೆಳಗ್ಗೆ ತಂಗಳನ್ನದ ಮಂಟಪಕ್ಕೆ ಚೆಲುವನಾರಾಯಣಸ್ವಾಮಿ ಉತ್ಸವ ನಡೆದ ನಂತರ ದೇವಾಲಯದ ಅಮ್ಮನವರ ಸನ್ನಿಧಿಯಲ್ಲಿ ಸಂಧಾನಸೇವೆ ನೆರವೇರಿತು.

ಮಧ್ಯಾಹ್ನ2-30 ಗಂಟೆ ವೇಳೆಗೆ ಸ್ವಾಮಿ ಉತ್ಸವಕಲ್ಯಾಣಿಗೆ ತಲುಪಿದ ತೀರ್ಥಸ್ನಾನದ ಪ್ರಕ್ರಿಯೆಗಳು ಆರಂಭವಾಗಿ 3.15ರವೇಳೆಗೆ ಮುಕ್ತಾಯವಾದವು. ಮಂಡ್ಯದ ಶೋಭಾಯಾತ್ರೆಗೆ ಪೊಲೀಸರನ್ನು ನಿಯೋಜಿಸಿದ್ದ ಕಾರಣ ಮೇಲುಕೋಟೆ ಠಾಣೆಯಲ್ಲಿ ನಾಲ್ಕೈದು ಮಂದಿ ಮಾತ್ರ ಕರ್ತವ್ಯದಲ್ಲಿದ್ದರು. ಪೋಲಿಸರ ಬದಲಿಗೆ ಪಾಂಡವಪುರ ವಿಜಯ ಪ್ರಥಮದ ರ್ಜೆಕಾಲೇಜಿನ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ 100 ಕ್ಕೂ ಹೆಚ್ಚು ಶಿಭಿರಾರ್ಥಿಗಳು ಪ್ರೊ.ವೆಂಕಟೇಗೌಡರ ಮಾರ್ಗದರ್ಶನದಲ್ಲಿ ಸ್ವಯಂಸೇವಕರಾಗಿ ತೀರ್ಥಸ್ನಾನವಾಗುವವರೆಗೆ ದೇವಾಲಯದ ಸಾಂಪ್ರದಾಯಿಕ ಪದ್ಧತಿಯಂತೆ ಯಾರೂ ಸಹ ಕಲ್ಯಾಣಿಯ ಪವಿತ್ರ ತೀರ್ಥ ಸ್ಪರ್ಶಿಸದಂತೆ ಕಟ್ಟೆಚ್ಚರ ವಹಿಸಿದ್ದರು.

ಜೊತೆಗೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲೂ ಸರತಿ ಸಾಲು ನಿರ್ವಹಿಸುವ ಕೆಲಸ ಮಾಡಿದರು. ಇನ್ಸ್‌ಪೆಕ್ಟರ್ ಅಶೋಕ್ ಕುಮರ್ ಮತ್ತು ಸಬ್‌ಇನ್ಸ್‌ಪೆಕ್ಟರ್ ಪ್ರಮೊದ್ ನೇತೃತ್ವದ ಮೇಲುಕೋಟೆ ಪೊಲೀಸರತಂಡ ಭದ್ರತೆ ಒದಗಿಸಿತ್ತು. ರಾಜಮುಡಿ ಕಿರೀಟಧಾರಣೆ ಮುಕ್ತಾಯ:

ಸಂಜೆ ಪರಕಾಲಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕೈಂಕರ್ಯಗಳು ನೆರವೇರಿದವು. ಏ.7ರ ರ ವೈರಮುಡಿ ಉತ್ಸವದ ರಾತ್ರಿಯಿಂದ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ್ದ ರಾಜಮುಡಿ ಕಿರೀಟ ಬ್ರಹ್ಮೋತ್ಸವದ ಕೊನೆ ಉತ್ಸವವಾದ ಪಟ್ಟಾಭಿಷೇಕ ಉತ್ಸವದಲ್ಲಿ ಕೊನೆಯಭಾರಿ ಅಲಂಕರಿಸಿತ್ತು. ರಾಜಮುಡಿ ಅಲಂಕಾರ ಮುಕ್ತಾಯವಾಗುತ್ತಿದ್ದಂತೆ ಸ್ವಾಮಿಗೆ ಸಮರಭೂಪಾಲವಾಹನೋತ್ಸವ ವೈಭವದಿಂದ ನೆರವೇರಿತು.ನಾರಾಯಣಪುರದಲ್ಲಿ ತೀರ್ಥೋದ್ಬವ:

ಕಲ್ಯಾಣಿಯಲ್ಲಿ ತೀರ್ಥಸ್ನಾನ ನಡೆಯುತ್ತಿದ್ದ ವೇಳೆ ಪ್ರತಿವರ್ಷದಂತೆ ಕಾಣಿಸಿಕೊಂಡ ಗರುಡ ಸ್ನಪನ ಶೆಲ್ವರಿಗೆ ಅಭಿಷೇಕವಾಗುತ್ತಿದ್ದ ವೇಳೆ ಕಲ್ಯಾಣಿಯಲ್ಲಿ ಪ್ರದಕ್ಷಿಣೆ ಹಾಕಿದಾಗ ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು.

ಬೆಳಗ್ಗೆಯಿಂದಲೂ ಕಲ್ಯಾಣಿಯತ್ತ ಸುಳಿಯದ ಗರುಡತೀರ್ಥ ಸ್ನಾನದ ವೇಳೆ ಆಗಮಿಸಿ ಭಕ್ತರ ಹರ್ಷೋದ್ಘಾರಕ್ಕೆಕಾರಣವಾಯಿತು. ಮತ್ತೊಂದೆಡೆ ಮೇಲುಕೋಟೆಯಿಂದ 12ಕಿಮೀ ದೂರಲ್ಲಿರುವ ನಾರಾಯಣಪುರದ ಬರಡು ಹೊಲದಲ್ಲಿ ಚೆಲುವನಾರಾಯಣಸ್ವಾಮಿಗೆ ತೀರ್ಥಸ್ನಾನವಾಗುತ್ತಿದ್ದಂತೆ ಅಲ್ಲಿನ ಬರಡು ಹೊಲದಲ್ಲಿ ತೆಗೆದ ಒಂದೆರಡು ಅಡಿ ಆಳದ ಗುಂಡಿಯಲ್ಲಿ ತೀರ್ಥ ಶೇಖರವಾಗುವುದರೊಂದಿಗೆ ಪ್ರತಿವರ್ಷದ ಪವಾಡ ಈ ವರ್ಷವೂ ಮುಂದುವರೆದು ಭಕ್ತರನ್ನು ನಿರಾಸೆ ಮಾಡಲಿಲ್ಲ. ತೀರ್ಥೋದ್ಬವದ ವೇಳೆ ಹೊಲದ ಮಾಲೀಕರಾದ ಶ್ರೀಧರ್ ಮತ್ತು ಕುಮಾರ್ ಪೂಜೆ ನೆರವೇರಿಸಿದರು.---------12ಕೆಎಂಎನ್ ಡಿ18,19,20

ಮೇಲುಕೋಟೆ ಕಲ್ಯಾಣಿಯಲ್ಲಿ ವೈರಮುಡಿ ಬ್ರಹ್ಮೋತ್ಸವ ತೀರ್ಥಸ್ನಾನದ ಪ್ರಯುಕ್ತ ಸೇರಿದ್ದ ಅಪಾರ ಭಕ್ತರು. ವೈರಮುಡಿ ತೀರ್ಥಸ್ನಾನದಂದು ರಾಜಮುಡಿ ಕಿರೀಟ ಧರಿಸಿ ಚಿನ್ನದ ಪ್ರಭಾವಳಿಯೊಂದಿಗೆ ಅಲಂಕೃತನಾದ ಚೆಲುವನಾರಾಯಣಸ್ವಾಮಿ ನಾರಾಯಣಪುರ ಗ್ರಾಮದ ಬರಡು ಹೊಲದಲ್ಲಿ ತೆಗೆದ ಒಂದೆರಡು ಅಡಿ ಆಳದ ಗುಂಡಿಯಲ್ಲಿ ತೀರ್ಥಸ್ನಾನದ ವೇಳೆ ತೀರ್ಥಶೇಖರವಾಗುವ ಪವಾಡ ನಡೆಯಿತು.