ಪು4...ಸ್ಟೋರಿ......ಶಿಥಿಲಗೊಂಡ ಹಳೆಯ ತಹಸೀಲ್ದಾರ ಕಚೇರಿ ಕಟ್ಟಡ

| Published : Nov 21 2025, 03:15 AM IST

ಪು4...ಸ್ಟೋರಿ......ಶಿಥಿಲಗೊಂಡ ಹಳೆಯ ತಹಸೀಲ್ದಾರ ಕಚೇರಿ ಕಟ್ಟಡ
Share this Article
  • FB
  • TW
  • Linkdin
  • Email

ಸಾರಾಂಶ

ಜಮಖಂಡಿ ನಗರದ ಹಳೆಯ ತಹಸೀಲ್ದಾರ ಕಚೇರಿ ಕಟ್ಟಡ ಸಿಥಿಲಗೊಂಡಿದ್ದು, ಈ ಕಟ್ಟಡದಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ನಗರ ಯೋಜನಾ ಪ್ರಾಧಿಕಾರ, ಅಲ್ಪಸಂಖ್ಯಾತರ ಇಲಾಖೆ, ಭೂಮಾಪನ ಇಲಾಖೆ, ಹಿಂದುಳಿದ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಕಚೇರಿಗಳು ಕಾರ್ಯನಿರ್ಸುತ್ತಿವೆ.ಈ ಎಲ್ಲ ಇಲಾಖೆಗಳಲ್ಲಿ ಕೆಲಸಕ್ಕೆ ಬರುವ ನೌಕರರು ಆತಂಕದಲ್ಲೇ ಕೆಲಸ ಮಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಹಳೆಯ ತಹಸೀಲ್ದಾರ ಕಚೇರಿ ಕಟ್ಟಡ ಸಿಥಿಲಗೊಂಡಿದ್ದು, ಈ ಕಟ್ಟಡದಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ನಗರ ಯೋಜನಾ ಪ್ರಾಧಿಕಾರ, ಅಲ್ಪಸಂಖ್ಯಾತರ ಇಲಾಖೆ, ಭೂಮಾಪನ ಇಲಾಖೆ, ಹಿಂದುಳಿದ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಕಚೇರಿಗಳು ಕಾರ್ಯನಿರ್ಸುತ್ತಿವೆ.ಈ ಎಲ್ಲ ಇಲಾಖೆಗಳಲ್ಲಿ ಕೆಲಸಕ್ಕೆ ಬರುವ ನೌಕರರು ಆತಂಕದಲ್ಲೇ ಕೆಲಸ ಮಾಡುವಂತಾಗಿದೆ. ಸಿಥಿಲಗೊಂಡ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್‌ ಉದುರಿ ಬೀಳುತ್ತಿದೆ. ಪ್ರತಿದಿನ ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಬರುವ ಸಾರ್ವಜನಿಕರು ಭಯದಿಂದಲೇ ಒಳಪ್ರವೇಶಿಸಬೇಕಾಗಿದೆ. ಕಟ್ಟಡದ ಪ್ರವೇಶ ದ್ವಾರದ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡು, ಕಬ್ಬಿಣದ ಸಲಾಕೆಗಳು ಜೋತು ಬಿದ್ದಿದ್ದು, ಅವು ತುಂಡಾಗಿ ಯಾವುದೇ ಸಮಯದಲ್ಲಿ ಬೀಳುವ ಸಾಧ್ಯತೆ ಇದೆ. ಕಟ್ಟಡಕ್ಕೆ ಆಧಾರ ಸ್ತಂಭವಾಗಿರುವ ಪಿಲ್ಲರ್ ಗಳು ಯಾವಾಗ ಬೇಕಾದರೂ ಕುಸಿದು ಬೀಳಬಹುದು. ಪಿಲ್ಲರ್‌ದಲ್ಲಿನ ಕಾಂಕ್ರೀಟ್ ಉದುರಿ ಬಿದ್ದು ಕಬ್ಬಿಣದ ಸಲಾಕೆಗಳು ಹೊರಬಂದಿವೆ. ಅಧಿಕಾರಿಗಳು ಮತ್ತು ಸಾರ್ವಜನಿಕರು ಅನಿವಾರ್ಯವಾಗಿ ದೈನಂದಿನ ಕಾರ್ಯದಲ್ಲಿ ತೊಡಗಿದ್ದಾರೆ.

ಹಳೆ ತಹಸೀಲ್ದಾರ್ ಕಚೇರಿಯ ಮೇಲ್ಚಾವಣಿಯ ಸಿಮೆಂಟ್ ಸುಮಾರು 15 ತಿಂಗಳಿನಿಂದಲೂ ಕುಸಿಯುತ್ತಿದ್ದು, ಅಧಿಕಾರಿಗಳು ಕನಿಷ್ಠ ದುರಸ್ತಿ ಕಾರ್ಯ ಮಾಡಿಸದೇ ಇರುವುದು ದುರ್ಭಾಗ್ಯ.

- ಭೀಮು ಮೀಶಿ ಜಿಲ್ಲಾಧ್ಯಕ್ಷರು ದಲಿತ ಸೇನೆ ಕರ್ನಾಟಕ

ನಗರದ ಹೃದಯ ಭಾಗದಲ್ಲಿರುವ ಹಳೆ ತಹಸೀಲ್ದಾರ್ ಕಚೇರಿ ಕತ್ತಲಾದರೆ ಭೂತ ಬಂಗಲೆಯಂತೆ ಕಾಣುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಮಾಡಬೇಕು. ಸಿಥಿಲಗೊಂಡಿರುವ ಕಟ್ಟಡದ ನವೀಕರಣಕ್ಕೆ ಮುಂದಾಗಬೇಕು.

- ಲಿಂಗರಾಜ ಬೆಳ್ಳೆನ್ನವರ ತಾಲೂಕಾಧ್ಯಕ್ಷರು ದಲಿತ ಸೇನೆ ಕರ್ನಾಟಕ