ಗ್ರಾಮವು ಅಪ್ಪಟ ಉತ್ತರ ಕರ್ನಾಟಕದ ಗ್ರಾಮೀಣ ಸಂಸ್ಕೃತಿ, ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದೆ. ತೋಂಟದ ಲಿಂ.ಸಿದ್ದಲಿಂಗ ಸ್ವಾಮಿಗಳು ಕಲೆ, ಸಾಹಿತ್ಯ, ಸಂಗೀತಕ್ಕೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಆಧುನಿಕ ಕಾಲದ ಯುಗದಲ್ಲಿ ಗ್ರಾಮೀಣ ಕಲೆಗಳು ಕಣ್ಮರೆಯಾಗುತ್ತಿವೆ.

ಹಾಸ್ಯ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿದ ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ

ಕನ್ನಡಪ್ರಭ ವಾರ್ತೆ ಡಂಬಳ

ಗ್ರಾಮವು ಅಪ್ಪಟ ಉತ್ತರ ಕರ್ನಾಟಕದ ಗ್ರಾಮೀಣ ಸಂಸ್ಕೃತಿ, ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದೆ. ತೋಂಟದ ಲಿಂ.ಸಿದ್ದಲಿಂಗ ಸ್ವಾಮಿಗಳು ಕಲೆ, ಸಾಹಿತ್ಯ, ಸಂಗೀತಕ್ಕೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಆಧುನಿಕ ಕಾಲದ ಯುಗದಲ್ಲಿ ಗ್ರಾಮೀಣ ಕಲೆಗಳು ಕಣ್ಮರೆಯಾಗುತ್ತಿವೆ. ಗ್ರಾಮೀಣ ಕಲೆಗಳು ಉಳುವಿಗಾಗಿ ಸರ್ಕಾರ ಪ್ರೋತ್ಸಾಹ ನೀಡಬೇಕೆಂದು ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಅಭಿಪ್ರಾಯಪಟ್ಟರು.

ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್‌ ನಗರದ ಶ್ರೀ ಮೈಲಾರಲಿಂಗೇಶ್ವರನಿಗೆ ದೀಪಬೆಳಗುವ ಕಾರ್ಯಕ್ರಮ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜೆ.ಎಂ. ಫ್ರೆಂಡ್ಸ್ ಮೇಲೋಡಿಸ್ ಚಿಲವಾಡಗಿ ಇವರಿಂದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ನಡೆದ ಹಾಸ್ಯ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖಂಡರಾದ ಬಸವರಡ್ಡಿ ಬಂಡಿಹಾಳ, ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿದರು.

ಯುವ ಮುಖಂಡ ಮಲ್ಲಪ್ಪ ಮಠದ, ವೆ.ಮೂ.ಚಂದ್ರಶೇಖರಯ್ಯ ಗುರುವಿನ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಸೋಮಪ್ಪ ಹೈತಾಪೂರ, ಮುಖಂಡ ಬಾಬುಸಾಬ ಮೂಲಿಮನಿ, ರೇವಣಸಿದ್ದಪ್ಪ ಕರಿಗಾರ, ಖಾಜಾಹುಸೇನ ಹೊಸಪೇಟಿ, ಎಸ್.ಡಿಂ.ಎಂ.ಸಿ ಅಧ್ಯಕ್ಷ ಮಹೇಶ ರಾಯರಡ್ಡಿ, ಮುತ್ತಣ್ಣ ಕೊಂತಿಕಲ್ಲ, ಮಹೇಶ ಗುಡ್ಡದ, ನಿಂಗಪ್ಪ ಪಲ್ಲೇದ, ತೋಂಟದಾರ್ಯ ಕಾಲೇಜಿನ ಪ್ರಾಚಾರ್ಯ ಎಂ.ವಿ. ಮಡಿವಾಳರ, ಶಿಕ್ಷಕ ಆನಂದ ಸೇರಿದಂತೆ ದೇವಸ್ಥಾನದ ಕಮಿಟಿಯ ಎಲ್ಲಾ ಪದಾಧಿಕಾರಿಗಳು, ಹಿರಿಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮ್ಯೂಸಿಕ್ ಮೈಲಾರಿ ಹಾಗೂ ಕಲಾ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.