ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ನುರಿಸಿದ ಹಿರಿಮೆ: ಬಿ.ಆರ್. ಭಕ್ಷಿ

| Published : Apr 06 2025, 01:46 AM IST

ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ನುರಿಸಿದ ಹಿರಿಮೆ: ಬಿ.ಆರ್. ಭಕ್ಷಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಿಂಗಪುರ ಸಮೀಪದ ಗೋದಾವರಿ ಬಯೋರಿಫೈನರೀಜ್‌ ಸಮೀರವಾಡಿ ಸಕ್ಕರೆ ಕಾರ್ಖಾನೆ ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ಅರೆದು ಇತಿಹಾಸ ನಿರ್ಮಿಸಿದೆ. ಇದಕ್ಕೆ ಕಾರ್ಖಾನೆಯ ಕಬ್ಬು ಬೆಳೆಗಾರರು ಕಾರಣವಾಗಿದ್ದಾರೆ ಎಂದು ಕಾರ್ಖಾನೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಭಕ್ಷಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸಮೀಪದ ಗೋದಾವರಿ ಬಯೋರಿಫೈನರೀಜ್‌ ಸಮೀರವಾಡಿ ಸಕ್ಕರೆ ಕಾರ್ಖಾನೆ ದೇಶದಲ್ಲಿಯೇ ಅತಿ ಹೆಚ್ಚು ಕಬ್ಬು ಅರೆದು ಇತಿಹಾಸ ನಿರ್ಮಿಸಿದೆ. ಇದಕ್ಕೆ ಕಾರ್ಖಾನೆಯ ಕಬ್ಬು ಬೆಳೆಗಾರರು ಕಾರಣವಾಗಿದ್ದಾರೆ ಎಂದು ಕಾರ್ಖಾನೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಭಕ್ಷಿ ಹೇಳಿದರು.

ಶುಕ್ರವಾರ ಮಧ್ಯಾಹ್ನ ಕಾರ್ಖಾನೆ ಆವರಣದಲ್ಲಿ ನಡೆದ ೨೦೨೪-೨೫ ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವಿವಿಧ ಸರ್ಕಲ್ ಗಳಿಂದ ರೈತರಿಂದ ೨೪.೬೪ ಲಕ್ಷ ಮೆಟ್ರಿಕ್ ಟನ್ ಕಬ್ಬು ಕಾರ್ಖಾನೆಗೆ ಬಂದಿದೆ. ಈ ರೀತಿಯ ಸಹಾಯ ಸಹಕಾರ ಭವಿಷ್ಯದಲ್ಲಿಯೂ ಮುಂದುವರಿಯಬೇಕೆಂದು ರೈತರಲ್ಲಿ ವಿನಂತಿಸಿದರು.

ಸಮಾರೋಪ ಸಮಾರಂಭದಲ್ಲಿ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಕಬ್ಬು ಬೆಳೆದ ಹಾಗೂ ಕಾರ್ಖಾನೆಗೆ ಸಾಗಿಸಿದ ರೈತರಿಗೆ ಮತ್ತು ಇನ್ನಿತರ ಸುಮಾರು ೪೦ ಜನರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯ ಹೆದ್ದಾರಿ ಸಮೀರವಾಡಿ ಕ್ರಾಸ್ ನಿಂದ ಮಹಿಳೆಯರ ಝಾಂಜ್ ಪಥಕ್‌ ಮತ್ತು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಕಾರ್ಖಾನೆಯ ಆವರಣದಲ್ಲಿ ನಿರ್ಮಿಸಿದ ಭವ್ಯ ವೇದಿಕೆಗೆ ಆಗಮಿಸಿತು.

ಈ ಸಂದರ್ಭದಲ್ಲಿ ರಾಮನಗೌಡ ಪಾಟೀಲ, ರಂಗನಗೌಡ ಪಾಟೀಲ, ಮಹಾಲಿಂಗಪ್ಪ ಸನದಿ, ಸುಭಾಸ ಶಿರಬೂರ, ಭೀಮಶಿ ಮಗದುಮ್‌, ಲಕ್ಷ್ಮಣ ಹುಚರಡ್ಡಿ, ಮಹಾದೇವ ಮಾರಾಪೂರ, ವಿ.ಎಸ್. ಕಣಬೂರ, ಬಸವರಾಜ ಪೂಜಾರಿ, ಬಸವರಾಜ ಭದ್ರಶೆಟ್ಟಿ, ಬುಜಬಲಿ ಕೆಂಗಾಲಿ, ಮಲ್ಲಿಕಾರ್ಜುನ ಕಾನಗೌಡರ, ಈರಣ್ಣ ಕಣಕರಡ್ಡಿ, ಬಿ.ಜಿ. ಹೊಸೂರ, ಮಲ್ಲಪ್ಪ ಅಂಗಡಿ, ಮಲ್ಲಿಕಾರ್ಜುನ ತೇಲಿ, ವಿಠ್ಠಲ ಹೊಸಮನಿ, ರಮೇಶ ಕುಮಾರ್, ಆರ್.ವಿ. ಸೋನವಾಲ್ಕರ್, ಅಧಿಕಾರಿಗಳಾದ ವಿ.ಎಸ್. ಕಣಬೂರ, ವಿಜಯಕುಮಾರ ಕಣವಿ ಇತರರಿದ್ದರು.