ಪಿಎಂ ವಿಶ್ವಕರ್ಮ ಯೋಜನೆ ದೇಶದಲ್ಲೇ ನಂ.೧: ಮಣಿಕಂಠನ್ ಕಂದಸ್ವಾಮಿ

| Published : Aug 27 2025, 01:00 AM IST

ಪಿಎಂ ವಿಶ್ವಕರ್ಮ ಯೋಜನೆ ದೇಶದಲ್ಲೇ ನಂ.೧: ಮಣಿಕಂಠನ್ ಕಂದಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಪಿಎಮ್ ವಿಶ್ವಕರ್ಮ ಕಾರ್ಯಕ್ರಮದ ಮೂಲಕ ಬಡ ಜನರು ತಮ್ಮ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರದ ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಹೇಳಿದರು.

- ಜಯಪುರ ಅಂಚೆ ಕಚೇರಿ ಆವರಣದಲ್ಲಿ ವಿಶ್ವಕರ್ಮ ಯೋಜನೆ ಫಲಾನುಭವಿಗಳ ಕಿಟ್ ವಿತರಣೆ

ಕನ್ನಡಪ್ರಭ ವಾರ್ತೆ, ಕೊಪ್ಪ

ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಪಿಎಮ್ ವಿಶ್ವಕರ್ಮ ಕಾರ್ಯಕ್ರಮದ ಮೂಲಕ ಬಡ ಜನರು ತಮ್ಮ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರದ ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಹೇಳಿದರು.

ಜಯಪುರ ಅಂಚೆ ಕಚೇರಿ ಆವರಣದಲ್ಲಿ ಮಂಗಳವಾರ ವಿಶ್ವಕರ್ಮ ಯೋಜನೆ ಫಲಾನುಭವಿಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೈಗಳು ಮತ್ತು ಉಪಕರಣಗಳಿಂದ ಕೆಲಸ ಮಾಡುವ ಕುಶಲ ಕರ್ಮಿಗಳಿಗೆ ಸಂಪೂರ್ಣ ಬೆಂಬಲ ಒದಗಿಸುತ್ತದೆ. ಸಾಂಪ್ರದಾಯಿಕ ಕರಕುಶಲ ವಸ್ತುಗಳಲ್ಲಿ ತೊಡಗಿರುವ ಜನರನ್ನು ಬೆಂಬಲಿಸುವುದು ಈ ಯೋಜನೆ ಉದ್ದೇಶವಾಗಿದೆ. ಸ್ಥಳೀಯ ಉತ್ಪನ್ನಗಳು, ಕಲೆ ಮತ್ತು ಕರಕುಶಲ ವಸ್ತುಗಳ ಮೂಲಕ ಪ್ರಾಚೀನ ಸಂಪ್ರದಾಯ ಮತ್ತು ವೈವಿಧ್ಯಮಯ ಪರಂಪರೆ ಜೀವಂತ ವಾಗಿಡುವ ಜೊತೆಗೆ ಕುಶಲಕರ್ಮಿಗಳನ್ನು ಆರ್ಥಿಕ ಬೆಂಬಲಿಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಈ ಯೋಜನೆ ೧೮ ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳನ್ನು ಒಳಗೊಂಡಿದೆ. ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಬಯಕೆಯಂತೆ ಚಿಕ್ಕಮಗಳೂರು ಜಿಲ್ಲೆ ದೇಶದಲ್ಲಿಯೇ ಯೋಜನೆ ಜಾರಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಸುಮಾರು ೫೦ ಸಾವಿರಕ್ಕೂ ಅಧಿಕ ಅರ್ಜಿಗಳು ನಮ್ಮ ಜಿಲ್ಲೆಯಿಂದ ಬಂದಿದ್ದು ೭ ಸಾವಿರಕ್ಕೂ ಅಧಿಕ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿದೆ ಜೊತೆಗೆ ಕೇಂದ್ರ ಎಲ್ಲಾ ಜನಪರ ಯೋಜನೆ ಜನತೆ ಬಳಸಿಕೊಳ್ಳಬೇಕು ಎಂದರು. ವಿಶ್ವಕರ್ಮ ಜಿಲ್ಲಾ ಸಮಿತಿ ಸದಸ್ಯರಾದ ವೆನಿಲ್ಲಾ ಭಾಸ್ಕರ್ ಕಿಟ್ ವಿತರಿಸಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯನ್ನು ಪ್ರತಿ ದೇಶವಾಸಿಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅದಕ್ಕೆ ಪೂರಕ ವಾಗಿ ಯೋಜನೆಯವರು ಕಾರ್ಯಕ್ರಮ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಬೇಕು ಎಂದರು.ಯೋಜನೆ ಸಂಯೋಜಕಿ ಸಂಧ್ಯಾ ಮಾತನಾಡಿ ಕೇಂದ್ರ ವಲಯದ ಯೋಜನೆಯಾದ ಪಿಎಂ ವಿಶ್ವಕರ್ಮವನ್ನು ಸೆ. ೧೭, ೨೦೨೩ ರಂದು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದರು. ಈಗಾಗಲೇ ಅನೇಕ ಫಲಾನುಭವಿಗಳಿಗೆ ಕಿಟ್ ವಿತರಣೆ ಆಗಿದೆ. ಇನ್ನೂ ಅನೇಕ ಅರ್ಜಿದಾರರಿಗೆ ಯೋಜನೆ ತಲುಪಿಸುವ ಕಾರ್ಯಕ್ರಮಗಳಿದ್ದು ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಯಪುರ ಗ್ರಾಪಂ ಅಧ್ಯಕ್ಷ ಕರುಣಾಕರ, ಉಪಾಧ್ಯಕ್ಷೆ ಜಯ ಮುರುಗೇಶ್, ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಸಂತೋಷ್ ಅರನೂರ್, ಮೇಗುಂದಾ ಹೋಬಳಿ ಅಧ್ಯಕ್ಷ ಕಾರ್ತಿಕ್ ಕಾರಂತ್, ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೇಯಸ್, ಜಯಪುರ ಕರಾಟೆ ಅಸೋಸಿಯೇಷನ್‌ನ ಕಾರ್ಯದರ್ಶಿ ಮಣಿಕಂಠ ಆರ್, ಪತ್ರಕರ್ತ ಸಂಘದ ಜಿಲ್ಲಾ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ, ಅಂಚೆ ಕಚೇರಿ ಅರುಣ್ ಕುಮಾರ್, ಅಂಚೆ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.