ಎಸ್ಸೆಸ್ಸೆಲ್ಸಿಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೆ ಹಾಸನ ಜಿಲ್ಲೆ 6ನೇ ಸ್ಥಾನ ಪಡೆದಿದೆ. ಇನ್ನು ನಗರದ ವಿಜಯ ಶಾಲೆಯ ವಿದ್ಯಾರ್ಥಿ ಉತ್ಸವ್ ಪಟೇಲ್ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ನಗರದ ಚಿಕ್ಕಹೊನ್ನೇನಹಳ್ಳಿ ಬಳಿ ಇರುವ ವಿಜಯ ಶಾಲೆಯ ವಿದ್ಯಾರ್ಥಿಗಳೇ ಬಹುಪಾಲು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಸ್ಥಾನದ ಉತ್ಸವ್‌ ಪಟೇಲ್‌ ಹಾಗೂ ಎರಡನೇ ಸ್ಥಾನದ ಚೇತನ್‌ ಅಷ್ಟೇ ಅಲ್ಲದೆ ಕಿರಣ್‌ ಗೌಡ ಕೂಡ 625ಕ್ಕೆ 624 ಅಂಕ ಪಡೆದಿದ್ದಾನೆ. ಹೇಮಶ್ರೀ 623 ಅಂಕ, ತ್ರಿಭುವನ್‌ ಎಸ್‌. ಗೌಡ 622 ಅಂಕ ಪಡೆದಿದ್ದಾನೆ. ಈ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಎಸ್ಸೆಸ್ಸೆಲ್ಸಿಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೆ ಹಾಸನ ಜಿಲ್ಲೆ 6ನೇ ಸ್ಥಾನ ಪಡೆದಿದೆ. ಇನ್ನು ನಗರದ ವಿಜಯ ಶಾಲೆಯ ವಿದ್ಯಾರ್ಥಿ ಉತ್ಸವ್ ಪಟೇಲ್ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ನಗರದ ಹೊರವಲಯದ ದೇವರಾಯಪಟ್ಟಣದ ಬಿಜೆಪಿ ಮುಖಂಡ ಡಿ.ಟಿ. ಪ್ರಕಾಶ್ ಮತ್ತು ಆಶಾರಾಣಿ ದಂಪತಿಯ ಪುತ್ರ ಉತ್ಸವ್ ಪಟೇಲ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಇನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಟಿ. ಪ್ರಸನ್ನ ಅವರ ಪುತ್ರ ಡಿ.ಪಿ. ಚೇತನ್ ಕೂಡ ವಿಜಯ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಇವರು ಕೂಡ ೬೨೫ ಕ್ಕೆ ೬೨೪ ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅದೇ ರೀತಿ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ೬೨೩ ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ. ರಾಜ್ಯದಲ್ಲಿ ಒಟ್ಟು ೨೨ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಯ ಶೇಕಡ ೬೬.೧೪ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜಯ ವಿದ್ಯಾರ್ಥಿಗಳ ಮೇಲುಗೈ:

ಈ ಬಾರಿಯ ಫಲಿತಾಂಶದಲ್ಲಿ ನಗರದ ಚಿಕ್ಕಹೊನ್ನೇನಹಳ್ಳಿ ಬಳಿ ಇರುವ ವಿಜಯ ಶಾಲೆಯ ವಿದ್ಯಾರ್ಥಿಗಳೇ ಬಹುಪಾಲು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಸ್ಥಾನದ ಉತ್ಸವ್‌ ಪಟೇಲ್‌ ಹಾಗೂ ಎರಡನೇ ಸ್ಥಾನದ ಚೇತನ್‌ ಅಷ್ಟೇ ಅಲ್ಲದೆ ಕಿರಣ್‌ ಗೌಡ ಕೂಡ 625ಕ್ಕೆ 624 ಅಂಕ ಪಡೆದಿದ್ದಾನೆ. ಹೇಮಶ್ರೀ 623 ಅಂಕ, ತ್ರಿಭುವನ್‌ ಎಸ್‌. ಗೌಡ 622 ಅಂಕ ಪಡೆದಿದ್ದಾನೆ. ಈ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.