ಈ ವರ್ಷ ಜಿಲ್ಲೆಯಲ್ಲಿ ಒಟ್ಟು 19041 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 18566 ಮಂದಿ ಉತ್ತೀರ್ಣರಾಗಿದ್ದಾರೆ. ಇದರಿಂದಾಗಿ ಜಿಲ್ಲೆ 97.51 ಶೇಕಡಾ ಫಲಿತಾಂಶ ದಾಖಲಿಸಿದೆ. ಪರೀಕೆ ಬರೆದ 9424 ವಿದ್ಯಾರ್ಥಿಗಳಲ್ಲಿ 9086 ವಿದ್ಯಾರ್ಥಿಗಳು ಪಾಸಾಗಿದ್ದು, 9618 ವಿದ್ಯಾರ್ಥಿನಿಯರ ಪೈಕಿ 9481 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ನಗರ ಮತ್ತು ಗ್ರಾಮೀಣ ವಿಷಯ ಬಂದಾಗ ಈ ಬಾರಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ 6712 ವಿದ್ಯಾರ್ಥಿಗಳ ಪೈಕಿ 6488 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ನಗರ ಪ್ರದೇಶದ ವಿದ್ಯಾರ್ಥಿಗಳು ಶೇ. 96.66 ಫಲಿತಾಂಶ ದಾಖಲಿಸಿದರೆ, ಗ್ರಾಮೀಣ ಪ್ರದೇಶದ 12330 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 12078 ವಿದ್ಯಾರ್ಥಿಗಳು ಪಾಸಾಗಿ ಶೇ.97.96 ಫಲಿತಾಂಶ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ವರ್ಷ 6ನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ ರಾಜ್ಯ ಮಟ್ಟದಲ್ಲಿ 4 ನೇ ಸ್ಥಾನ ಪಡೆದು ಶೈಕ್ಷಣಿಕ ಪ್ರಗತಿ ಸಾಬೀತು ಮಾಡಿದೆ.ಮೀ ಫಲಿತಾಂಶದಲ್ಲಿ ಆಲೂರು ತಾಲೂಕಿನ ಭೈರಾಪುರದಲ್ಲಿರುವ ಬೆಥೆಸ್ದ ಶಾಲೆಯ ಸುಮೇದ ಮೌರ್ಯ 623 ಅಂಕ ಪಡೆದು ಜಿಲ್ಲೆಗೆ ಮೊದಲಿಗಳಾಗಿದ್ದಾಳೆ.

ಈ ವರ್ಷ ಜಿಲ್ಲೆಯಲ್ಲಿ ಒಟ್ಟು 19041 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 18566 ಮಂದಿ ಉತ್ತೀರ್ಣರಾಗಿದ್ದಾರೆ. ಇದರಿಂದಾಗಿ ಜಿಲ್ಲೆ 97.51 ಶೇಕಡಾ ಫಲಿತಾಂಶ ದಾಖಲಿಸಿದೆ. ಪರೀಕೆ ಬರೆದ 9424 ವಿದ್ಯಾರ್ಥಿಗಳಲ್ಲಿ 9086 ವಿದ್ಯಾರ್ಥಿಗಳು ಪಾಸಾಗಿದ್ದು, 9618 ವಿದ್ಯಾರ್ಥಿನಿಯರ ಪೈಕಿ 9481 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ನಗರ ಮತ್ತು ಗ್ರಾಮೀಣ ವಿಷಯ ಬಂದಾಗ ಈ ಬಾರಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದಲ್ಲಿ ಪರೀಕ್ಷೆಗೆ ಹಾಜರಾದ 6712 ವಿದ್ಯಾರ್ಥಿಗಳ ಪೈಕಿ 6488 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ನಗರ ಪ್ರದೇಶದ ವಿದ್ಯಾರ್ಥಿಗಳು ಶೇ. 96.66 ಫಲಿತಾಂಶ ದಾಖಲಿಸಿದರೆ, ಗ್ರಾಮೀಣ ಪ್ರದೇಶದ 12330 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 12078 ವಿದ್ಯಾರ್ಥಿಗಳು ಪಾಸಾಗಿ ಶೇ.97.96 ಫಲಿತಾಂಶ ಪಡೆದಿದ್ದಾರೆ.

ಇನ್ನು ಜಿಲ್ಲೆಯ ಖಾಸಗಿ ಶಾಲೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದು, ಶೇ99.46 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶೇ. 97.62ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಶೇ. 94.68 ಫಲಿತಾಂಶ ಪಡೆದಿದ್ದಾರೆ. ಜಿಲ್ಲೆಗೆ ಸಕಲೇಶಪುರ ಮೊದಲು:

ರಾಜ್ಯಕ್ಕೆ ಹಾಸನ ಜಿಲ್ಲೆ 4ನೇ ಸ್ಥಾನದಲ್ಲಿದ್ದರೆ, ಜಿಲ್ಲೆ ಪೈಕಿ ಸಕಲೇಶಪುರ ತಾಲೂಕು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಚನ್ನರಾಯಪಟ್ಟಣ, ಆಲೂರು, ಅರಕಲಗೂಡು, ಅರಸೀಕೆರೆ, ಹೊಳೆನರಸೀಪುರ, ಹಾಸನ ಹಾಗೂ ಬೇಲೂರು ತಾಲೂಕುಗಳಿವೆ. ಜಿಲ್ಲೆಯ ಟಾಪ್‌ ಟೆನ್‌ ವಿದ್ಯಾರ್ಥಿಗಳು:

- ಸುಮೇದ ಮೌರ್ಯ-623 ಅಂಕ- ಆಲೂರು ತಾಲೂಕಿನ ಭೈರಾಪುರ ಗ್ರಾಮದ ಬೆಥೆಸ್ದ ಶಾಲೆ

- ಸನ ಕೆ.ಆರ್‌- 622 ಅಂಕ - ಅರಕಲಗೂಡು ತಾಲೂಕಿನ ಕೊಣನೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ

- ಚರಿತ - 622 ಅಂಕ - ಹಾಸನ ನಗರದ ಬ್ರಿಲಿಯಂಟ್‌ ಶಾಲೆ

- ನಿರೂಪ್‌ ಬಾಬು- 622 ಅಂಕ - ಹಾನ ನಗರದ ಯುನೈಟೆಡ್‌ ಶಾಲೆ

- ಪುಣ್ಯ - 622 ಅಂಕ - ಹಾಸನ ನಗರದ ವಿಜಯ ಶಾಲೆ

- ಆದಿತ್ಯ ಗೌಡ - 621 ಅಂಕ - ಬೇಲೂರಿನ ಸರ್ವೋದಯ ಕಾನ್ವೆಂಟ್‌

- ಭೂಮಿಕ ವಿ.ಎನ್‌ - 621 ಅಂಕ- ರಾಧಾಕೃಷ್ಣ ಶಾಲೆ, ಹೊಳೆನರಸೀಪುರ

- ದವನ್‌ ಗೌಡ- 621 ಅಂಕ- ಚನ್ನರಾಯಪಟ್ಟಣದ ಪೂರ್ಣಪ್ರಜ್ಞ ಶಾಲೆ

- ಲಿಖಿತ ಡಿ - 621 ಅಂಕ- ಸಂತ ತೆರೇಸಾ ಶಾಲೆ- ಅರಸೀಕೆರೆ

- ಇಂಚರ ಎಸ್‌- 621 ಅಂಕ- ಅರಸೀಕೆರೆ ತಾಲೂಕಿನ ಗಂಡಸಿಯ ಪುಷ್ಪರವಿ ನ್ಯಾಷಿನಲ್‌ ಸ್ಕೂಲ್‌

ಇದೇ ವೇಳೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಮುಂದಿನ ಪೂರಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡು ಉತ್ತಮ ಸಾಧನೆ ಮಾಡಲು ಅವಕಾಶವಿದೆ ಎಂದು ಶಿಕ್ಷಣ ಇಲಾಖೆ ಮನವಿ ಮಾಡಿದೆ. ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ನೀಡಬೇಕು ಎಂಬ ಸಲಹೆಯನ್ನೂ ನೀಡಲಾಗಿದೆ. ಹಾಸನ ಜಿಲ್ಲೆ ರಾಜಕೀಯ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದು, ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶವೂ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣೆ ಮತ್ತು ಪೋಷಕರ ಸಹಕಾರದಿಂದ ಜಿಲ್ಲೆ ಶೈಕ್ಷಣಿಕವಾಗಿ ಮತ್ತಷ್ಟು ಎತ್ತರಕ್ಕೆ ಏರಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.

===*ಲೀಡ್‌ ಬಾಕ್ಸ್: ಬಾವಸವಳ್ಳಿಯ ಹಳ್ಳಿ ವಿದ್ಯಾರ್ಥಿ ಸುಮೇದ್‌ ಮೌರ್ಯ ಜಿಲ್ಲೆಗೆ ಪ್ರಥಮಆಲೂರು ತಾಲೂಕಿನ ಕಸಬಾ ಹೋಬಳಿ ಭೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬೈರಾಪುರ ಗ್ರಾಮದ ಬೆತಸ್ಥ ಶಾಲೆ ವಿದ್ಯಾರ್ಥಿ ಸುಮೇದ್‌ ಮೌರ್ಯ ಎಸ್ಸೆಎಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವಲ್ಲಿ ತಾಲೂಕಿಗೆ ಕೀರ್ತಿ ತಂದಿದ್ದಾನೆ.625ಕ್ಕೆ 623 ಅಂಕಗಳಿಸಿ ಗಮನ ಸೆಳೆದ ಗ್ರಾಮೀಣ ಪ್ರತಿಭೆ, ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಹಾಸನ ಜಿಲ್ಲೆಯ ಆಲೂರು ತಾಲೂಕಿನ ಭಾವಸವಳ್ಳಿ ಗ್ರಾಮದ ಸುಮೇದ್‌ ಮೌರ್ಯ ಎಂಬ ವಿದ್ಯಾರ್ಥಿ ಬೆಥೇಸ್ಥ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ 625ಕ್ಕೆ 623 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಐಎಎಸ್​ ಅಧಿಕಾರಿ ಆಗುವ ಕನಸು ಕಟ್ಟಿಕೊಂಡಿದ್ದಾರೆ ಸುಮೇದ್ . ಜಿಲ್ಲೆಗೆ ಪ್ರಥಮ ಸ್ಥಾನ ಬಂದ ಖುಷಿಯಲ್ಲೇ ಪ್ರತಿಕ್ರಿಯಿಸಿರುವ ಸುಮೇದ್‌ "ನನಗಿಂತ ನನ್ನ ಶಿಕ್ಷಕರು​ ಹಾಗೂ ತಂದೆತಾಯಿಗೆ ಹೆಚ್ಚಿನ ಸಂತೋಷವಾಗಿದೆ. ನನಗೆ ಓಬ್ಬಳು ಅಕ್ಕ ಇದ್ದು ಅವಳು ಕೂಡ ವಿಜ್ಞಾನ ವಿಭಾಗದಲ್ಲಿ ಹಾಸನದಲ್ಲಿ ಓದುತ್ತಿರುವುದಾಗಿ ತಿಳಿಸಿ ತಂದೆ ಶಿವಣ್ಣ ಹಾಗೂ ತಾಯಿ ಜಯಂತಿ ಎಂದು ಹೆಮ್ಮೆಯಿಂದ ಹೇಳಿಕೊಂಡರು.ವಿದ್ಯಾರ್ಥಿ ಸುಮೇದ್‌ ಮೌರ್ಯಗೆ ಶುಭಾಶಯ ಕೋರಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೆಗೌಡ ಅವರು, ಅವನ ಸಾಧನೆ ಬೇರೆಯವರಿಗೂ ಸ್ಫೂರ್ತಿ ಆಗಿದ್ದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.ಶಾಲೆಯ ಪ್ರಾಂಶುಪಾಲರಾದ ರೀನಾ ಮ್ಯಾಥಿವ್, ಕ್ಷೇತ್ರದ ಶಾಸಕರ ಪತ್ನಿ ಪ್ರತಿಭಾ ಅವರು, ವಿದ್ಯಾರ್ಥಿ ಸುಮೇದ ಮೌರ್ಯ ಅವರಿಗೆ ಶುಭಕೋರಿ ಶಾಲೆಯ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.