ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಬೆಂಗಳೂರಿನಲ್ಲಿ ಪ್ರತಿಷ್ಠಾಪನೆಗೊಂಡಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರಥವಾಗಿದ್ದರೆ, ಎರಡನೆಯದ್ದು ಮುದ್ದೇಬಿಹಾಳದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ. ರಾಜ್ಯದಲ್ಲಿಯೇ ಎರಡನೆ ಪ್ರತಿಮೆ ಇದಾಗಿದೆ. ಅಷ್ಟೊಂದು ಸುಂದರವಾಗಿ ಕೋಲ್ಹಾಪೂರದ ಶಿಲ್ಪಿಗಳು ಮೂರ್ತಿ ಕೆತ್ತನೆ ಮಾಡಿದ್ದಾರೆ. ಇದರಿಂದಾಗಿ ಈ ಭಾಗದ ಬಹುತೇಕ ಕುರುಬ ಸಮಾಜ ಸೇರಿದಂತೆ ಇತರೇ ಸಮಾಜ ಬಾಂಧವರ ಕನಸು ಕನನಸಾಗುವುತ್ತಿರುವುದು ಸಂತಸ ತಂದಿದೆ ಎಂದು ತಾಲೂಕು ಹಾಲುಮತದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಬೆಂಗಳೂರಿನಲ್ಲಿ ಪ್ರತಿಷ್ಠಾಪನೆಗೊಂಡಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರಥವಾಗಿದ್ದರೆ, ಎರಡನೆಯದ್ದು ಮುದ್ದೇಬಿಹಾಳದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ. ರಾಜ್ಯದಲ್ಲಿಯೇ ಎರಡನೆ ಪ್ರತಿಮೆ ಇದಾಗಿದೆ. ಅಷ್ಟೊಂದು ಸುಂದರವಾಗಿ ಕೋಲ್ಹಾಪೂರದ ಶಿಲ್ಪಿಗಳು ಮೂರ್ತಿ ಕೆತ್ತನೆ ಮಾಡಿದ್ದಾರೆ. ಇದರಿಂದಾಗಿ ಈ ಭಾಗದ ಬಹುತೇಕ ಕುರುಬ ಸಮಾಜ ಸೇರಿದಂತೆ ಇತರೇ ಸಮಾಜ ಬಾಂಧವರ ಕನಸು ಕನನಸಾಗುವುತ್ತಿರುವುದು ಸಂತಸ ತಂದಿದೆ ಎಂದು ತಾಲೂಕು ಹಾಲುಮತದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.ಈ ವೇಳೆ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಳ ಬಲಗೈ ಬಂಟ, ಕಿತ್ತೂರ ಸಂಸ್ಥಾನದ ರಕ್ಷಣೆ ನಿಂತಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಬ್ರೀಟಿಷರೊಂದಿಗೆ ಹೋರಾಡಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ವೀರ ಪರಾಕ್ರಮಿಯಾಗಿದ್ದರು. ಇಂತಹ ಮಹಾ ಸ್ವಾತಂತ್ರ ಹೋರಾಟಗಾರನ ಪ್ರತಿಮೆಯೂ ಬಹುತೇಕ ಎಲ್ಲಡೆ ಅನಾವರಣಗೊಳಿಸಲಾಗಿತ್ತು. ಆದರೆ ಮುದ್ದೇಬಿಹಾಳದಲ್ಲಿ ಮಾತ್ರ ಪ್ರತಿಷ್ಠಾಪಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮುದ್ದೇಬಿಹಾಳ ಪಟ್ಟಣದ ಹೃದಯ ಭಾಗದಲ್ಲಿ ಪ್ರತಿಷ್ಠಾಪಿಸಬೇಕು ಎಂದು ತಿರ್ಮಾನಿಸಿ ಇಂದು ಪ್ರತಿಮೆಯನ್ನು ಪಟ್ಟಣಕ್ಕೆ ಅದ್ಧೂರಿ ಮೆರವಣಿಗೆ ಮೂಲಕ ಗೌರವದಿಂದ ಕರೆತರಲಾಗಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ರಾಜ್ಯದ ಹಾಗೂ ಜಿಲ್ಲೆಯ, ಮತಕ್ಷೇತ್ರದ ಎಲ್ಲ ಸಮಾಜ ಬಾಂಧವರು, ವಿವಿಧ ಗಣ್ಯರ ಮುಖಂಡರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಸಿ ಅದ್ಧೂರಿಯಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.ಈ ವೇಳೆ ಮುಖಂಡರಾದ ನಾಗಪ್ಪ ರೂಢಗಿ, ಬಸಪ್ಪ ಮೇಲಿನಮನಿ, ಸಾಬಣ್ಣ ನಡಿಗೇರಿ, ಸಂತೋಷ ನಾಯ್ಕೋಡಿ, ಅಯ್ಯಾಳಿಂಗ ಮೇಲಿನಮನಿ, ಮಹೇಶ ಪೂಜಾರಿ, ನಿಂಗಪ್ಪ ಬಪ್ಪರಗಿ, ಮಲ್ಲಣ್ಣ ಅಪರಾಧಿ, ಮಲ್ಲಣ್ಣ ಕೆಸರಟ್ಟಿ, ಸಂಗಣ್ಣ ಮೇಲಿನಮನಿ, ಎಸ್.ಜಿ.ಹರಿಂದ್ರಾಳ, ಬಿ.ಎಸ್.ಮೇಟಿ, ಎನ್.ಎಸ್.ತುರಡಗಿ, ವೈ.ಎಚ್.ವಿಜಯಕರ, ಯಲ್ಲಪ್ಪ ನಾಯಕಮಕ್ಕಳ, ಭಗವಂತ ಕಬಾಡೆ, ಸೋಮಗೌಡ ಪಾಟೀಲ (ನಡಹಳ್ಳಿ), ಬಿ.ಕೆ.ಬಿರಾದಾರ, ಸಿ.ಬಿ.ಅಸ್ಕಿ, ಕಾಮರಾಜ ಬಿರಾದಾರ, ಶ್ರೀಕಾಂತ ಚಲವಾದಿ, ಮೈಬೂಬ ಗೊಳಸಂಗಿ, ಕೆ.ಆರ್.ಬಿರಾದಾರ, ಮುತ್ತಣ್ಣ ಹುಗ್ಗಿ, ಮುತ್ತಣ್ಣ ಮುತ್ತಣ್ಣನವರ, ಭೀಮಶೇಪ್ಪ ಮದರಿ, ಎಸ್.ಎನ್.ಲಕ್ಕಣ್ಣವರ, ಸಂಗಮ್ಮ ದೇವರಳ್ಳಿ ಸೇರಿದಂತೆ ಹಲವರು ಇದ್ದರು.ಬಾಕ್ಸ್ರಾಯಣ್ಣಗೆ ಅದ್ಧೂರಿ ಸ್ವಾಗತ
ಕೋಲ್ಹಾಪುರದಲ್ಲಿ ನಿರ್ಮಾಣವಾಗಿರುವ ಬೃಹತ್ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಆಲಮಟ್ಟಿ ರಸ್ತೆ ಮಾರ್ಗದ ಮೂಲಕ ಪಟ್ಟಣಕ್ಕೆ ತರಲಾಯಿತು. ಪಟ್ಟಣದ ಶ್ರೀಬಸವೇಶ್ವರ ವೃತ್ತ ಹಾಗೂ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ, ಅಭ್ಯುದಯ ಪಿಯು ಸೈನ್ಸ್ ಕಾಲೇಜು ಆವರಣದವರೆಗೆ ಡೊಳ್ಳು ಕುಣಿತ, ವೀರಗಾಸೆ, ವಿವಿಧ ರೂಪಕ, ಗೊಂಬೆಗಳ ಸ್ಥಬ್ದ ಚಿತ್ರ, ಕುದುರೆ ಕುಣಿತ ಹಾಗೂ ಮಹಿಳೆಯರಿಂದ ಕುಂಭ ಕಳಶದೊಂದಿಗೆ ಬೃಹತ್ ಮೆರವಣಿಗೆ ಮೂಲಕ ಪಟ್ಟಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ತಾಲೂಕಾ ಹಾಲುಮತದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿಯ ನೇತೃತ್ವ ವಹಿಸಿದ್ದರು.