ಹೊಸಕೋಟೆ: ಗ್ರಾಮಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಗ್ರಾಪಂ ಸದಸ್ಯರ ಶ್ರಮವಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ಗ್ರಾಮಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಗ್ರಾಪಂ ಸದಸ್ಯರ ಶ್ರಮವಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಮಲ್ಲಿಮಾಕನಪುರ ಗ್ರಾಮದಲ್ಲಿ ನರೇಗಾ, ವರ್ಗ ೧ರಲ್ಲಿ ಮಾಡಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ೨೦ ಲಕ್ಷ ವೆಚ್ಚದ ಸಿಸಿ ರಸ್ತೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಪಂ ಚುನಾವಣೆಯಲ್ಲಿ ಗೆಲ್ಲುವ ಸದಸ್ಯರು ಗ್ರಾಮಗಳ ಬೀದಿಗಳಲ್ಲಿ ಓಡಾಡಿ ಸಮಸ್ಯೆಗಳನ್ನು ಹುಡುಕಿ ಸಮಸ್ಯೆಗೆ ಅಭಿವೃದ್ಧಿ ಮೂಲಕ ಪರಿಹಾರ ಕೊಡುತ್ತಾರೆ. ಇದರಿಂದ ನಾಗರಿಕರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಇದರ ನಡುವೆ ಶಾಸಕರ ಅನುದಾನ ಕೊಟ್ಟು ರಸ್ತೆಗಳ ಕಾಮಗಾರಿ ಮಾಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿ ಖಾಸಗಿ ಕಂಪನಿ ಸಹಯೋಗದಲ್ಲಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.ಗ್ರಾಪಂ ಸದಸ್ಯ ತಮ್ಮಯ್ಯಗೌಡ ಮಾತನಾಡಿ, ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮಲ್ಲಿಮಾಕನಪುರವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗಿದ್ದು, ಗ್ರಾಮಕ್ಕೆ ಅಗತ್ಯವಾದ ಸಿಸಿ ರಸ್ತೆ, ಚರಂಡಿ ನಿಮಾಣ, ಬೀದಿ ದೀಪಗಳ ವ್ಯವಸ್ಥೆ ಸೇರಿದಂತೆ ಶಾಲೆ, ದೇವಾಲಯಗಳವೂ ನೀಡಲಾಗಿದೆ. ಗ್ರಾಪಂ ಅನುದಾನದ ಜೊತೆಜೊತೆಗೆ ಶಾಸಕರ ಅನುದಾನದಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ದಿ ಮಾಡಲಾಗಿದೆ ಎಂದರು.
ಬಮುಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಚ್ಚೇಗೌಡ, ಎಸ್‌ಎಫ್‌ಸಿಎಸ್ ಅಧ್ಯಕ್ಷ ಸತೀಶ್, ಟಿಎಪಿಸಿಎಂಸ್ ನಿರ್ದೇಶಕ ರಾಜ್‌ಗೋಪಾಲ್, ಗ್ರಾಪಂ ಸದಸ್ಯರಾದ ವೇದವತಿ ರಾಮು, ಮಂಜುಳ ನಾಗಾರ್ಜುನ, ಮುಖಂಡರಾದ ಮಂಡೂರಪ್ಪ, ಬಚ್ಚೇಗೌಡ, ಮುನಿರಾಜು, ಎಸಿಸಿ ಮುನಿರಾಜು, ಲಕ್ಷಮ್ಣ್, ತಮ್ಮೇಗೌಡ, ಅರುಣ್, ಮಿಥುನ್, ಉದಯ್ ಕುಮಾರ್, ವರುಣ್‌ಗೌಡ, ವಿಜಯ್ ಕುಮಾರ್, ಮಲ್ಲಿಕಾರ್ಜುನ, ತಿಮ್ಮರಾಯಪ್ಪ, ನಾರಾಯಣಸ್ವಾಮಿ, ನಾಗರಾಜ್, ಪ್ರಕಾಶ್, ಚಂದ್ರಮೂರ್ತಿ, ಮುನಿವೆಂಕಟಪ್ಪ, ವೆಂಕಟಸ್ವಾಮಿ, ನಾರಾಯಣಪ್ಪ, ಅಚ್ಚಪ್ಪ, ಆಂಜಿನಪ್ಪ, ವೆಂಕಟೇಶ್, ಸಂತೋಷ್, ಮುನಿಆಂಜಿನಪ್ಪ, ಸತೀಶ್, ಅನ್ವರ್ ಸಾಬ್, ಮೆಹಬೂಬ್ ಪಾಷ, ಫೈರೋಜ್, ರಮೇಶ್, ಶೋಬಾ ಲಕ್ಷö್ಮಣ್, ರಾಜಣ್ಣ, ಅನಿಲ್, ನವೀನ್, ನಾಗೇಶ್ ಹಾಜರಿದ್ದರು.ಫೋಟೋ: 4 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಿಮಾಕನಪುರದಲ್ಲಿ ವಿವಿಧ ಅಬಿವೃದ್ದಿ ಕಾಮಗಾರಿಗಳನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.