ಶರಣರ ವಚನಗಳಿಗೆ ಸಾರ್ವಕಾಲಿಕ ಮಹತ್ವ

| Published : May 01 2025, 12:45 AM IST

ಸಾರಾಂಶ

ತಾಲೂಕು ಆಡಳಿತ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಬಸವ ಜಯಂತಿಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತುರುವೇಕೆರೆ ತಾಲೂಕು ಆಡಳಿತ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಬಸವ ಜಯಂತಿಯನ್ನು ಆಚರಿಸಲಾಯಿತು.ಈ ವೇಳೆ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಸಮಾಜದ ವಿವಿಧ ಸ್ತರದ ಜನರು ತಮ್ಮ ಕಾಯಕವನ್ನು ನಿಷ್ಟೆಯಿಂದ ಮಾಡುವ ಮೂಲಕ ಅದರಲ್ಲೇ ಆಧ್ಯಾತ್ಮಿಕ ನೆಲೆಯನ್ನು ಕಂಡುಕೊಳ್ಳುವಂತೆ ಮಾಡಿದ ಮಹಾನ್ ಜ್ಞಾನಿಯಾಗಿದ್ದರು. ನಡೆ ನುಡಿಗಳು ಒಂದಾದಾಗ ಮಾತ್ರ ವ್ಯಕ್ತಿತ್ವ ಪರಿಪೂರ್ಣಗೊಳ್ಳಲು ಸಾಧ್ಯವಿದೆಇವನಾರವ ಇವನಾರವ ಎನ್ನದೆ, ಇವ ನಮ್ಮವ ಎನ್ನುವ ಮೂಲಕ ಸಮಾಜದಲ್ಲಿ ಮೇಲು ಕೀಳು ಎಂಬ ಭೇದಬಾವ ಬಿಡಬೇಕು. ಸಾಮಾಜಿಕ, ಧಾರ್ಮಿಕವಾಗಿ ಎಲ್ಲರೂ ಸಮಾಜದಲ್ಲಿ ಸರಿಸಮಾನತೆ ಜೀವನ ನಡೆಸಬೇಕು. ಢಾಂಬಿಕತೆ ತೊರೆದು ನಿಷ್ಕಲ್ಮಶ ಭಕ್ತಿಯನ್ನು ಹೊಂದಬೇಕು. ಹೆಣ್ಣು, ಗಂಡಿನ ನಡುವೆ ಯಾವುದೇ ಭೇದ ತೊರಬಾರದು ಇಬ್ಬರ ಸಮಾನರು. ಮಹಿಳೆಗೆ ಶಿಕ್ಷಣದ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಬೇಕು ಎಂದು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ ಎಂದರು.ತಹಸೀಲ್ದಾರ್ ಎನ್.ಎ.ಕುಂಞಅಹಮದ್ ಮಾತನಾಡಿ, ಬಸವಾದಿ ಶರಣರ ವಚನಗಳು ಮನುಷ್ಯನ ಜೀವನಕ್ಕೆ ಕೈಗನ್ನಡಿ ಇದ್ದಂತೆ ಹಾಗಾಗಿ ವಚನಗಳಲ್ಲಿನ ಮೌಲ್ಯವು ಎಲ್ಲ ಕಾಲಕ್ಕೂ ಸಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ಅಖಿಲಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕುಮಾರ ಸ್ವಾಮಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಶಿರಸ್ತೇದಾರ್ ಸುನಿಲ್ ಕುಮಾರ್, ಸಮುದಾಯದ ಮುಖಂಡರಾದ ವೆಂಕಟಾಪುರ ಯೋಗೀಶ್, ದೇವಮ್ಮ, ದಸಂಸ ಮುಖಂಡರುಗಳಾದ ದಂಡಿನಶಿವರ ಕುಮಾರ್, ಮಲ್ಲೂರ್ ತಿಮ್ಮೇಶ್, ಬೋರಪ್ಪ, ಕಸಬಾ ಕಂದಾಯ ಅಧಿಕಾರಿ ಶಿವಕುಮಾರ್, ಸಿಬ್ಬಂದಿ ವತ್ಸಲಾ, ಇನ್ನಿತರರು ಪಾಲ್ಗೊಂಡಿದ್ದರು.