ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನಾತ್ಮಾಕವಾಗಿ ಎಲ್ಲ ಕ್ಷೇತ್ರಗಳಿಲ್ಲೂ ಸಮಾನರು. ಆದರೆ ದುರಾಸೆಯೆಂಬ ಪಿಡುಗಿನ ಮೂಲಕ ಸಮಾಜದಲ್ಲಿ ಅನೇಕ ಜನರು ಅವಕಾಶಗಳಿಂದ ಹಾಗೂ ಸರ್ಕಾರದಿಂದ ಜನರಿಗೆ ತಲುಪಬೇಕಾಗಿದ್ದ ಸವಲತ್ತುಗಳು ದೊರಕದಿರುವುದು ದುರದೃಷ್ಟ ಸಂಗತಿಯಾಗಿದೆ. ಮಾನವೀಯ ಮೌಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು
ಕನ್ನಡಪ್ರಭ ವಾರ್ತೆ ಕೋಲಾರದುರಾಸೆಯೇ ಎಲ್ಲ ಸಮಸ್ಯೆಗಳಿಗೂ ಕಾರಣ. ಇದರಿಂದ ಹೊರಬರಲು ವ್ಯಕ್ತಿಗಳು ತಮ್ಮ ಆಡಳಿತಾತ್ಮಕ ವಿಚಾರಗಳಲ್ಲಿ ಸೇವಾ ಮನೋಭಾವ ಅಳವಡಿಸಿಕೊಳ್ಳಬೇಕು. ಆಗ ಮಾನವೀಯ ಮೌಲ್ಯಗಳ ಅನುಕರಣೆ ಹಾಗೂ ಪಾಲನೆ ಸಾಧ್ಯವಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಗಡೆ ಅಭಿಪ್ರಾಯಪಟ್ಟರು.ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಸುರ್ವಣಗಂಗೆ ಆವರಣದಲ್ಲಿ ಪಿಎಂ ಉಷಾ ಕೋಶ ಹಾಗೂ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಆಯೋಜಿಸಲಾಗಿದ್ದ ಸಂವಿಧಾನ ದಿನ ಮತ್ತು ಜೀವನದ ಸರ್ವಾಂಗೀಣ ಅಭಿವೃದ್ದಿ ಅಂಗವಾಗಿ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.ಆಡಳಿತದಲ್ಲಿ ಭ್ರಷ್ಟಾಚಾರ
೨೦೨೫ ರ ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನ್ಮಾಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಎಂಬ ವಿಷಯದ ಕುರಿತು ತಮ್ಮದೇ ಆದ ಮೂರು ಪರಿಕಲ್ಪನೆಗಳ ಮೂಲಕ ತಮ್ಮ ವಿಚಾರಧಾರೆಗಳನ್ನು ಮಂಡಿಸಿದ ಅವರು, ದುರಾಸೆ, ತೃಪ್ತಿ, ಮಾನವೀಯತೆ. ಈ ವಿಚಾರಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಸಮಾಜದಲ್ಲಿನ ಅವ್ಯವಸ್ಧೆ ಹಾಗೂ ರಾಷ್ಟ್ರವನ್ನು ಆಳುತ್ತಿರುವ ನಾಯಕರ ಪ್ರವೃತ್ತಿಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನಾತ್ಮಾಕವಾಗಿ ಎಲ್ಲ ಕ್ಷೇತ್ರಗಳಿಲ್ಲೂ ಸಮಾನರು. ಆದರೆ ದುರಾಸೆಯೆಂಬ ಪಿಡುಗಿನ ಮೂಲಕ ಸಮಾಜದಲ್ಲಿ ಅನೇಕ ಜನರು ಅವಕಾಶಗಳಿಂದ ಹಾಗೂ ಸರ್ಕಾರದಿಂದ ಜನರಿಗೆ ತಲುಪಬೇಕಾಗಿದ್ದ ಸವಲತ್ತುಗಳು ದೊರಕದಿರುವುದು ದುರದೃಷ್ಟ ಸಂಗತಿಯಾಗಿದೆ. ಒಟ್ಟಾರೆ ತೃಪ್ತಿ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕೆ ಗೌರವ ನ್ಯಾಯ ಹಾಗೂ ಕೊಡುಗೆ ನೀಡಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಭ್ರಷ್ಟಾಚಾರಕ್ಕೆ ದುರಾಸೆ ಕಾರಣ
ಭ್ರಷ್ಟಾಚಾರಕ್ಕೂ ದುರಾಸೆಯೇ ಕಾರಣವಾಗಿದೆ, ಮಾನವೀಯ ಮೌಲ್ಯಗಳು ಉಳಿಯಲು ಜನರ, ಆಡಳಿತಾಂಗದಲ್ಲಿ ಕೆಲಸ ಮಾಡುವವರ ಮನಸ್ಥಿತಿ ಬದಲಾವಣೆಯಾಗಬೇಕು, ಸಮಾಜದಲ್ಲಿ ಸಿಗುವ ಸೌಲಭ್ಯಗಳು ಪಾರದರ್ಶಕವಾಗಿ ಅರ್ಹರಿಗೆ ತಲುಪಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಉತ್ತರ ವಿವಿ ಕುಲಪತಿಗಳಾದ ಪ್ರೋ. ನಿರಂಜನ ವಾನಳ್ಳಿ ಮಾತನಾಡಿ, ದೇಶದ ಅಭಿವೃದ್ದಿಗೆ ಯುವಜನತೆಯು ವರದಕ್ಷಣೆ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಮಾಡಲು ತಿಳಿಸಿದರು. ಯುವ ಜನತೆ ವರದಕ್ಷಿಣೆ ಪಿಡುಗು, ಸಮಾಜದಲ್ಲಿನ ಅಸಮಾನತೆ, ಅನ್ಯಾಯದ ವಿರುದ್ದ ಧ್ವನಿಯೆತ್ತಬೇಕು ಎಂದ ಅವರು, ಸಮಾಜ, ದೇಶ ಸರಿಹೋಗಲು ಯುವಕರ ಪಾತ್ರ ಅತಿ ಮುಖ್ಯವಾದುದು ಎಂದರು.ಈ ಸಮಾರಂಭದಲ್ಲಿ ಕೇಂದ್ರದ ನಿರ್ದೇಶಕರಾದಂತಹ ಪ್ರೋ. ಕುಮುದ ಹಾಜರಿದ್ದರು. ರಾಜ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಡಾ. ರಮೇಶ್ ಸ್ವಾಗತಿಸಿದರು. ಹರ್ಷ ವಂದಿಸಿದರು ಹಾಗೂ ಸುಮತಿ ನಿರೂಪಿಸಿದರು.