ರಾಮನಗರ: ಬಿಡದಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಸದಸ್ಯರಿಗೆ ರೈತ ಸ್ನೇಹಿ ಆಡಳಿತ ನೀಡುವ ಜೊತೆಗೆ ಸಾಲ ಸೌಲಭ್ಯ ಕಲ್ಪಿಸಿ, ಸ್ವಾವಲಂಬಿ ಜೀವನ ನಡೆಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು
ರಾಮನಗರ: ಬಿಡದಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಸದಸ್ಯರಿಗೆ ರೈತ ಸ್ನೇಹಿ ಆಡಳಿತ ನೀಡುವ ಜೊತೆಗೆ ಸಾಲ ಸೌಲಭ್ಯ ಕಲ್ಪಿಸಿ, ಸ್ವಾವಲಂಬಿ ಜೀವನ ನಡೆಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಡಿಸಿಸಿ ಬ್ಯಾಂಕಿನ ಆರ್ಥಿಕ ನೆರವಿನೊಂದಿಗೆ 58 ರೈತರಿಗೆ 72.85 ಲಕ್ಷ ರು. ಕೆಸಿಸಿ ಬೆಳೆ ಸಾಲದ ಚೆಕ್ ಮತ್ತು ಸ್ಮಾರ್ಟ್ ಕಾರ್ಡ್‌ಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ಸಹಕಾರಿ ತತ್ವದಡಿ ರಚನೆಯಾದ ಸಂಘವು ಬಿಡದಿ ಭಾಗದ ಜನರಿಗೆ ಸೇವೆ ಒದಗಿಸುತ್ತಿದೆ. ಸರಿ ಸುಮಾರು ಇದುವರೆಗೆ 406 ರೈತರಿಗೆ 4.25 ಕೋಟಿ ರು. ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ ವಿತರಣೆ ವಿತರಿಸಿದೆ. ಇದರ ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರುಪಾವತಿಯೊಂದಿಗೆ ಸಂಘದ ಜೊತೆ ಉತ್ತಮ ವ್ಯವಹಾರ ನಡೆಸಿ ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಮಾತನಾಡಿ, ಸಂಘ 1.12 ಕೋಟಿ ಷೇರು ಬಂಡವಾಳ ಮತ್ತು 4.34 ಕೋಟಿ ಠೇವಣಿ ಹೊಂದಿದೆ. ಕೆಸಿಸಿ ಬೆಳೆ ಸಾಲದ ಜೊತೆಗೆ ಕೃಷಿಯೇತರ, ಮಹಿಳಾ ಸ್ವಸಹಾಯ ಸಾಲ, ಚಿನ್ನಾಭರಣ ಸಾಲ ಪಡೆದು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಿ, ಸಕಾಲದಲ್ಲಿ ಸಾಲ ಮರುಪಾವತಿಸಿ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಿರಿ.
ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೃಷಿ ಉಪ ಕಸುಬುಗಳ ಉತ್ತೇಜನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿದ್ದು, ತೆಂಗು ಅಭಿವೃದ್ಧಿ ಹೊಸ ಸಾಲ ಯೋಜನೆ ಜಾರಿಗೆ ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಸಾಧಕ-ಭಾದಕಗಳ ಬಗ್ಗೆ ಚರ್ಚೆ ನಡೆಸುತ್ತಿದೆ. ರೈತರಿಗೆ ಕೃಷಿ ಉಪಕರಣಗಳು, ರಸಗೊಬ್ಬರ, ಬಿತ್ತನೆ ಬೀಜಗಳ ವಿತರಣೆ ಕೇಂದ್ರಗಳ ಸ್ಥಾಪನೆ ಮಾಡುವ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮಂಜು ಹೇಳಿದರು.ಸಂಘದ ಅಧ್ಯಕ್ಷ ಜೀವನ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಾಲಾಜಿ ನಿರ್ದೆಶಕರಾದ ವಿ.ಆರ್.ಮಹೇಶ್, ಮಧುಕುಮಾರ್, ಸಂತೋಷ್, ಅನ್ನಪೂರ್ಣೇಶ್ವರಿ, ರಮೇಶ್, ಸತ್ಯಪ್ಪ, ಕೆಂಗಲ್ಲಯ್ಯ, ರೇವಣಸಿದ್ದಯ್ಯ, ಶೋಭಾ, ಪುರಸಭೆ ಸದಸ್ಯರಾದ ಸಿ.ಉಮೇಶ್, ಎನ್.ಕುಮಾರ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಯು.ನರಸಿಂಹಯ್ಯ ಮುಖಂಡರಾದ ಬೆಟ್ಟಸ್ವಾಮಿ, ಮಲ್ಲೇಶ್, ಹರೀಶ್, ಬಿಡದಿ ಬಿಡಿಸಿಸಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ನಾಗರತ್ನ ಸಿಇಓ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.
26ಕೆಆರ್ ಎಂಎನ್ 1.ಜೆಪಿಜಿಬಿಡದಿ ಪಟ್ಟಣದಲ್ಲಿರುವ ರೈತ ಸಮುದಾಯ ಭವನದಲ್ಲಿ ಶನಿವಾರ ಅತಿಥಿಗಳು ರೈತರಿಗೆ ಕೆಸಿಸಿ ಬೆಳೆ ಸಾಲದ ಚೆಕ್ ಮತ್ತು ಸ್ಮಾರ್ಟ್ ಕಾರ್ಡ್ ಗಳನ್ನು ಸಾಂಕೇತಿಕವಾಗಿ ವಿತರಿಸಿದರು.