ಗುಡ್ಡದ ಇಳಿಜಾರಿನಲ್ಲೇ ಡ್ರ್ಯಾಗನ್‍ಫ್ರೂಟ್ ಬೆಳೆದ ರೈತ

| Published : Aug 04 2025, 12:15 AM IST

ಗುಡ್ಡದ ಇಳಿಜಾರಿನಲ್ಲೇ ಡ್ರ್ಯಾಗನ್‍ಫ್ರೂಟ್ ಬೆಳೆದ ರೈತ
Share this Article
  • FB
  • TW
  • Linkdin
  • Email

ಸಾರಾಂಶ

The farmer who grew dragonfruit on the slope of a hill

-ನಿಸರ್ಗದ ಸೊಬಗು ಹೆಚ್ಚಿಸಿದ ಭೂಸನೂರಿನ ಕೃಷಿಕ ಗುರುಶಾಂತ

-----

ಕನ್ನಡಪ್ರಭ ವಾರ್ತೆ ಆಳಂದ

ಭೂಸನೂರಿನ ರೈತ ಗುರುಶಾಂತ ಪಾಟೀಲ, ಮುಳ್ಳು ಕಂಟಿಗಳಿದ್ದ ಇಳಿಜಾರಿನ ದೊಡ್ಡ ಗುಡ್ಡದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಗಮನ ಸೆಳೆದಿದ್ದಾರೆ.

ಭೂಸನೂರ ಗ್ರಾಮದಿಂದ ಜಳಕಿ ರಸ್ತೆಯಲ್ಲಿನ 8 ಎಕರೆ ಗುಡ್ಡದಲ್ಲಿ 3ಎಕರೆ ಡ್ಯ್ರಾಗನ್, ಒಂದು ಎಕರೆ ಕಬ್ಬು, ಇನ್ನುಳಿದ ಜಮೀನಿನಲ್ಲಿ ವಿವಿಧ ಹಣ್ಣು ಬೆಳೆಯಲು ಗುಡ್ಡ ಸಜ್ಜುಗೊಳಿಸಿದ್ದಾರೆ.

ರೈತ ಗುರುಶಾಂತ ಪಾಟೀಲ, ತಂದೆ ವಿಜಯಕುಮಾರ ಕೆ. ಪಾಟೀಲ ಮಾರ್ಗದರ್ಶನದಲ್ಲಿ 8 ಎಕರೆ ಗುಡ್ಡದ ಜಮೀನನ್ನೇ ಆಯ್ಕೆಮಾಡಿ 3ಎಕರೆ ಡ್ಯ್ರಾಗನ್ ಫ್ರೂಟ್ ನಾಟಿಮಾಡಿದ್ದು, ಇನ್ನೂ 2 ಎಕರೆ ಹಣ್ಣಿನ ತೋಟಗಾರಿಕೆಗೆ ಇಳಿಜಾರು ಗುಡ್ಡದಲ್ಲಿ ಸಸಿ ನಾಟಿ ಮಾಡಲು ಸಜ್ಜುಗೊಳಿಸಿಟ್ಟಿದ್ದಾರೆ.

ಗುಡ್ಡದಲ್ಲೇ ಎರಡು ಮೂರು ಕೊಳವೆ ಬಾವಿ ತೋಡಿದ್ದು, ಎರಡಕ್ಕೆ ಮಾತ್ರ ನೀರು ದೊರೆತಿದೆ. ತೋಟಗಾರಿಕೆ ಸಹಾಯಧನದಲ್ಲಿ ಕೃಷಿಹೂಂಡ ನಿರ್ಮಿಸಿ ಕೊಳವೆ ಬಾವಿ ನೀರು ಕೃಷಿ ಹೊಂಡಕ್ಕೆ ಶೇಖರರಿಸಿ, ಹನಿ ನೀರಾವರಿ ಮೂಲಕ ಬೆಳೆಗೆ ನೀರು ಕೊಟ್ಟಿದ್ದಾರೆ. ಭವಿಷ್ಯದಲ್ಲಿ ಈ ನೀರು ಸಾಕಾಗದು ಎಂದು ಗುಡ್ಡದ ಕೆಳಭಾಗದಲ್ಲಿ ತೆರೆದ ಬಾವಿ ಮೂಲಕ ಹೆಚ್ಚುವರಿ ನೀರು ತರಲು ಮುಂದಾಗಿದ್ದಾರೆ.

3 ಎಕರೆ ಜಂಬೋರೆಡ್ ತಳಿಯ 6500 ಡ್ಯ್ರಾಗನ್ ಸಸಿಗಳಿಗೆ 4ಲಕ್ಷ ಖರ್ಚಾಗಿದೆ. 2ನೇ ವರ್ಷದಲ್ಲಿ ಬೆಳೆ ಲಾಭ ತಂದುಕೊಟ್ಟಿದೆ. ಮುಂದಿನ ಹಂಗಾಮಿಗೆ ಹೆಚ್ಚಿನ ಫಲ ದೊರೆತು ಲಾಭಬರೋದು ನಿಶ್ಚಿತ ಎನ್ನುತ್ತಾರೆ.

ಕೊರೋನಾ ಕೊಟ್ಟ ಉಪಾಯ: ಜನ ಸಮುದಾಯಕ್ಕೆ ಕೊರೋನಾ ಕೆಲವರಿಗೆ ವರವಾಗಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ವಿಧಿಸಿದ ಲಾಕ್‍ಡೌನ್ ವೇಳೆ ಕಲಬುರಗಿಯಲ್ಲೇ ವಾಸವಾಗಿದ್ದ ಗುರುಶಾಂತ ವಿ. ಪಾಟೀಲ ಅವರು ಬೇಸರವಾಗಿ ತಮ್ಮೂರು ಭೂಸನೂರಿಗೆ ಬಂದು ನೆಲಸಿದ ಮೇಲೆ ಮೊಬೈಲ್‍ನಲ್ಲಿ ಯೂಟೂಬ್‌ ಸರ್ಚ್ ಮಾಡಿದ ವೇಳೆ ಈ ಬೆಳೆ ಬೆಳೆಯುವ ಯೋಚನೆ ಅವರಿಗೆ ಹೊಳೆದಿದೆ.

ಖಾಲಿ ಗುಡ್ಡವನ್ನೇ ಬಳಸಿಕೊಳ್ಳಬೇಕು ಎಂದು ಲಕ್ಷಾಂತರ ವ್ಯಯಿಸಿ, ಈ ಡ್ಯ್ರಾಗನ್ ಸೇರಿ ಇತರ ಹಣ್ಣಿನ ತೋಟಗಾರಿಕೆ ಬೆಳೆಯಲು ಮುಂದಾದರು.

ಡ್ರ್ಯಾಗನ್ ಬಗ್ಗೆ ಯುಟ್ಯೂಬ್‌ನಲ್ಲಿ ಗಮನಿಸಿ ಮಹಾರಾಷ್ಟ್ರದ ಸಾಂಗೋಲಾದ ರೈತ ಬೆಳೆದ ಶ್ರೀಲಂಕಾದ ಜಂಬೋರೇಟ್ ಡ್ಯ್ರಾಗನ್ ಸಸಿ ಖರೀದಿಸಿ ಆಗಷ್ಟ 2021ರಲ್ಲಿ ಸಸಿ ನಾಟಿ ಮಾಡಿ, ಮೂರುವರೆ ವರ್ಷದ ಬೆಳೆ ಯಶಸ್ವಿಯಾಗಿ ಬೆಳೆದಿದೆ. ಸದ್ಯ ಉತ್ತಮ ಫಸಲು ಪಡೆಯುತ್ತಿದ್ದಾರೆ.

ರೈತ ಗುರುಶಾಂತ ಪಾಟೀಲ, ವೆಸ್ಟ್‌ ಲ್ಯಾಂಡ್‍ನಲ್ಲಿ ಮಾದರಿ ತೋಟಗಾರಿಕೆ ಮಾಡಿದ್ದಾರೆ, ರೈತರಿಗೆ ತೋಟಗಾರಿಕೆ ಇಲಾಖೆಯ ಅನುಷ್ಠಾನದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿ ತಲಾ ಹೆಕ್ಟರಿಗೆ 50 ಸಾವಿರ ನೀಡಿದೆ. ಈ ಹಣ್ಣು ರೋಗ ನಿರೋಧಕ ಶಕ್ತಿ , ಪೌಷ್ಠಿಕಾಂಶದಿಂದ ಕೂಡಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಸುರೇಂದ್ರನಾಥ ಹೊನ್ನಪ್ಪಗೊಳ ತಿಳಿಸಿದ್ದಾರೆ.

ಹೆಚ್ಚಿನ ಹಣ್ಣನ್ನು ಕಲಬುರಗಿ ಮಾರುಕಟ್ಟೆಗೆ ಕಳುಹಿಸಿಕೊಡಲಾಗುತ್ತಿದೆ. ರೈತರು ನೇರವಾಗಿ ಮೊಬೈಲ್ ಸಂಖ್ಯೆ 9448577458 ಮೂಲಕ ಗುರುಶಾಂತ ಪಾಟೀಲರನ್ನ ಸಂಪರ್ಕಿಸಬಹುದಾಗಿದೆ.

--

ಚಿತ್ರ ಶೀರ್ಷಿಕೆ- ಗುರುಶಾಂತ ಪಾಟೀಲ್‌ 1

ಆಳಂದ ಬೆಳೆದ ಫಸಲು ಮಾರುಕಟ್ಟೆಗೆ ಸಾಗಿಸಲು ಕಾರ್ಮಿಕರು ಸಜ್ಜುಗೊಳಿಸುತ್ತಿರುವುದು.

--

ಚಿತ್ರ ಶೀರ್ಷಿಕೆ - ಗುರುಶಾಂತ ಪಾಟೀಲ್‌ 2

ಆಳಂದ ಭೂಮಿಯಿಂದ ಸಾವಿರ ಅಡ್ಡಿ ಎತ್ತರದ ಗುಡ್ಡದಲ್ಲೇ ಕೃಷಿಹೂಂಡ ನಿರ್ಮಿಸಿಕೊಂಡು ಬೆಳೆಗೆ ನೀರು ಪೂರೈಸಲು ಗುದ್ದಡಲ್ಲೇ ತೋಡಿದ ಕೊಳವೆ ಬಾವಿ ನೀರು ಶೇಖರಿಸುವುದು ರೈತ ಗುರುಶಾಂತ ಪಾಟೀಲ ತೋರಿಸಿದರು.