ವಿವಿದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಮನವಿ

| Published : Jun 27 2024, 01:05 AM IST

ಸಾರಾಂಶ

ವಿವಿದ ಬೇಡಿಕೆ ಈಡೇರಿಸುವಂತೆ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು ವಿವಿದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕೃಷಿ ಇಲಾಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಬುಧವಾರ ಮನವಿ ಸಲ್ಲಿಸಿರುವ ಅವರು, ಮೊಳಕಾಲ್ಮೂರು ತಾಲೂಕು ಹಿಂದುಳಿದ ಪ್ರದೇಶವಾಗಿದ್ದು ನಿರೀಕ್ಷೆಗೆ ತಕ್ಕಂತೆ ಮಳೆ ಬಾರದೆ ಸದಾ ಬರಗಾಲ ಕಾಡುತ್ತಿದೆ. ಬಹುತೇಕರು ಕೂಲಿ ಕೆಲಸವನ್ನೇ ನೆಚ್ಚಿಕೊಂಡು ಜೀವನ ನಡಸುತ್ತಿದ್ದಾರೆ. ಇರುವ ಜಮೀನಿನಲ್ಲಿ ಪಸಲು ತೆಗೆಯಲು ಸರ್ಕಾರದ ಸೌಲಭ್ಯ ನಿರೀಕ್ಷೆಗೆ ತಕ್ಕಂತೆ ಸಿಗದೇ ಪರಿತಪಿಸುವಂತಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸುವ ಸ್ಪಿಂಕಲರ್ ಹಾಗೂ ತಾಡಪಾಲುಗಳ ವಿತರಣಾ ನಿಯಮಗಳನ್ನು ಬದಲಾವಣೆ ಮಾಡಬೇಕು. ಸಾಮಾನ್ಯ ವರ್ಗಕ್ಕೆ ಹೆಕ್ಟೇರ್ ಗೆ ಒಂದು ಸೆಟ್ ನೀಡಲಾಗುತ್ತಿದೆ. ಇದರಿಂದ ಹೆಚ್ಚು ಭೂಮಿ ಇರುವ ರೈತರಿಗೆ ಬೆಳೆಗಳಿಗೆ ನೀರು ಹಾಯಿಸಲು ಕಷ್ಟವಾಗುತ್ತಿದೆ ಎಂದರು.

ಇಲಾಖೆಯಿಂದ ತಾಡಪಾಲುಗಳಿಗೆ 3 ವರ್ಷದ ಅವಧಿಯನ್ನು ನಿಗದಿಗೊಳಿಸಲಾಗಿದೆ. ನಿತ್ಯವೂ ಕೃಷಿ ಚಟುವಟಿಕೆಗೆ ಬಳಕೆಯಾಗುವ ತಾಡಪಾಲುಗಳು ವರ್ಷದೊಳಗೆ ಹಾಳಾಗುತ್ತವೆ. ಹಾಗಾಗಿ ಇಲಾಕೆ ಅಧಿಕಾರಿಗಳು ಕಾಲ ಮಿತಿಯನ್ನು ಬದಲಾಯಿಸಿ ಎಲ್ಲಾ ರೈತರಿಗೆ ಪ್ರತಿ ವರ್ಷ ನೀಡಬೇಕು ಹಾಗು ಬಿತ್ತನೆ ಬೀಜ ದರ ಇಳಿಕೆ ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವ ರೆಡ್ಡಿ, ತಾಲೂಕ ಅಧ್ಯಕ್ಷ ಎಸ್.ಮಂಜುನಾಥ್ , ಕಾರ್ಯದರ್ಶಿ ಎಸ್.ಟಿ.ಚಂದ್ರಣ್ಣ, ಕನಕ ಶಿವಮೂರ್ತಿ, ಈರಣ್ಣ, ನಾಗರಾಜ, ಡಿ.ಬಿ.ಕೃಷ್ಣ ಮೂರ್ತಿ, ಕಾಮಯ್ಯ ಇದ್ದರು.