ಭಾರತ ಬಲಿಷ್ಠವಾಗಲು ಸರ್ದಾರ್‌ ಪಟೇಲ್‌ ಕಟ್ಟಿದ ಒಕ್ಕೂಟ ವ್ಯವಸ್ಥೆಯೇ ಮುಖ್ಯ ಕಾರಣ

| Published : Nov 01 2025, 02:00 AM IST

ಭಾರತ ಬಲಿಷ್ಠವಾಗಲು ಸರ್ದಾರ್‌ ಪಟೇಲ್‌ ಕಟ್ಟಿದ ಒಕ್ಕೂಟ ವ್ಯವಸ್ಥೆಯೇ ಮುಖ್ಯ ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್‌ ಶ್ರಮದಿಂದಾಗಿಯೇ ಭಾರತ ಏಕೀಕರಣವಾಗಲು ಸಾಧ್ಯವಾಯಿತು ಎಂದು ಅಮೃತವರ್ಷಿಣಿ ವಿದ್ಯಾಲಯದ ಸ್ಥಾಪಕ ಪಿ.ಕೆ. ಪ್ರಕಾಶ್ ರಾವ್ ಹೇಳಿದ್ದಾರೆ.

- ಅಮೃತವರ್ಷಿಣಿ ವಿದ್ಯಾಲಯ ಸ್ಥಾಪಕ ಪಿ.ಕೆ.ಪ್ರಕಾಶ್ ರಾವ್ ಅಭಿಮತ

- - -

ಹರಿಹರ: ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್‌ ಶ್ರಮದಿಂದಾಗಿಯೇ ಭಾರತ ಏಕೀಕರಣವಾಗಲು ಸಾಧ್ಯವಾಯಿತು ಎಂದು ಅಮೃತವರ್ಷಿಣಿ ವಿದ್ಯಾಲಯದ ಸ್ಥಾಪಕ ಪಿ.ಕೆ. ಪ್ರಕಾಶ್ ರಾವ್ ಹೇಳಿದರು.

ಇಲ್ಲಿಗೆ ಸಮೀಪದ ಕುಮಾರಪಟ್ಟಣಂನ ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ದಾರ್ ವಲಭಭಾಯಿ ಪಟೇಲ್ ೧೫೦ನೇ ಜಯಂತಿ ನಿಮಿತ್ತ ಏಕತಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ರಿಟಿಷರು ಭಾರತ ಬಿಟ್ಟು ತೊಲಗಿದಾಗ ದೇಶವು ನೂರಾರು ಸಾಮ್ರಾಜ್ಯಗಳಾಗಿ ಹರಡಿ ಹಂಚಿ ಹೋಗಿತ್ತು. ದೇಶದ ಗೃಹ ಸಚಿವರಾಗಿದ್ದ ಪಟೇಲರು ಬಹುತೇಕರ ಮನವೊಲಿಸಿ ಹಾಗೂ ಪೊಲೀಸ್, ಸೇನೆಯನ್ನು ಬಳಸಿ ಭಾರತವನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಸೇರ್ಪಡೆಗೊಳಿಸಿದರು ಎಂದರು.

ಸರ್ದಾರ್‌ ಪಟೇಲರು ಅಂದು ದೃಢ ನಿರ್ಧಾರ ಕೈಗೊಳ್ಳದೇ ಇದ್ದಿದ್ದರೆ ದೇಶದ ಭೌಗೋಳಿಕ ಸ್ವರೂಪ ಈಗಿನಂತೆ ಇರುತ್ತಿರಲಿಲ್ಲ. ಪಟೇಲರ ಈ ಸಾಧನೆಗಾಗಿಯೇ ದೇಶವು ಅವರಿಗೆ ಉಕ್ಕಿನ ಮನುಷ್ಯ, ಸರ್ದಾರ್ ಎಂಬ ಬಿರುದನ್ನು ನೀಡಿ ಸ್ಮರಿಸುತ್ತಿದೆ ಎಂದರು.

ಪಟೇಲರ ಜೊತೆಗೆ ನೂರಾರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಸಂಗಡಿಗರ ತ್ಯಾಗ, ಬಲಿದಾನದಿಂದ ದೊರಕಿರುವ ಈ ದೇಶದ ಸಮಗ್ರತೆ, ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ನಮ್ಮ ಕಾಣಿಕೆ ನೀಡಬೇಕಾಗಿದೆ ಎಂದರು.

ಆರಂಭದಲ್ಲಿ ಪಟೇಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳಿದ್ದರು. ಮಕ್ಕಳ ಜೊತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. - - -

-31ಎಚ್‌ಆರ್‌ಆರ್‌01:

ಹರಿಹರ ಸಮೀಪದ ಕುಮಾರಪಟ್ಟಣಂನ ಅಮೃತವರ್ಷಿಣಿ ವಿದ್ಯಾಲಯದಲ್ಲಿ ಶುಕ್ರವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ೧೫೦ನೇ ಜಯಂತಿ ನಿಮಿತ್ತ ಏಕತಾ ಸಪ್ತಾಹ ಆಚರಿಸಲಾಯಿತು.