ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಗ್ರಾಮ ದೇವತೆ ತಾಯಿ ಶ್ರೀನೀಲಗಂಗಾ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಪಲ್ಲಕ್ಕಿ ಉತ್ಸವವು ಸೋಮವಾರ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಸ್ಥಳೀಯ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಮತ್ತು ಉತ್ತರಾಧಿಕಾರಿ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ನಂತರ ಪುರವಂತರ ಸೇವೆ ಮುಗಿದ ಬಳಿಕ ದೇವಿಯ ಮೂರ್ತಿಗಳನ್ನು ಇರಿಸಿ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಪಲ್ಲಕ್ಕಿ ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಸಾವಿರಾರು ಭಕ್ತರು ಉರುಳು ಸೇವೆ ಮಾಡಿದರು. ದೀಪಾವಳಿ ಪಾಡ್ಯ ದಿನ ಪ್ರಾರಂಭಗೊಂಡ ಜಾತ್ರೆ ಪಲ್ಲಕ್ಕಿ ಉತ್ಸವದೊಂದಿಗೆ ಸೋಮವಾರ ಮುಕ್ತಾಯಗೊಂಡಿತು. ಗೌರಿ ಹುಣ್ಣಿಮೆಯ ಮುಂದಿನ ಐದು ದಿನಗಳ ನಂತರ ನಡೆಯುವ ಈ ಜಾತ್ರೆಯಲ್ಲಿ ನೂರಾರು ಭಕ್ತರು ಉಪವಾಸ ಕೈಗೊಂಡಿರುವುದು ವಿಶೇಷ. ಪಲ್ಲಕ್ಕಿ ಮೂಲಕ ನೀಲಗಂಗಾ ದೇವಸ್ಥಾನಕ್ಕೆ ಬಂದ ನಂತರ ಪೂಜಾ ಕೈಂಕರ್ಯಗಳನ್ನು ನಡೆಸಿದ ಬಳಿಕ ಉಪವಾಸ ಅಂತ್ಯವಾಯಿತು.ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದ ಧರ್ಮದರ್ಶಿ ಸುನಿಲಗೌಡ ದೇವರಮನಿ, ಸುಧೀರಗೌಡ ದೇವರಮನಿ, ಶಾಸಕ ಅಶೋಕ್ ಮನಗೂಳಿ, ಶ್ರೀಶೈಲಗೌಡ ಬಿರಾದಾರ್ ಮಾಗಣಗೇರಿ, ಅಶೋಕಗೌಡ ದೇವರಮನಿ, ಮಹಾಂತೇಶ್ ಪಟ್ಟಣಶೆಟ್ಟಿ, ಅಶೋಕ ವಾರದ, ಜಿ.ಕೆ.ಪಡಗಾನೂರ, ಬಸವರಾಜ ತಾಳಿಕೋಟಿ, ಶಿವಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಪಟ್ಟಣಶೆಟ್ಟಿ, ಚಂದ್ರಕಾಂತ್ ಬೊಮ್ಮಣ್ಣಿ, ಡಾ.ರವಿ ಗೋಲಾ, ಚನ್ನಪ್ಪ ಗೋಣಿ, ಕುಮಾರ್ ಪಟ್ಟಣಶೆಟ್ಟಿ, ರವಿ ಗವಸಾನಿ, ಮುತ್ತು ಮುಂಡೆವಾಡಗಿ, ಅನೀಲ ಪಟ್ಟಣಶೆಟ್ಟಿ, ಮುತ್ತು ಪಟ್ಟಣಶೆಟ್ಟಿ, ಡಾ.ಶರಣಬಸವ ಜೋಗೂರ, ರಾಜು ಪತ್ತಾರ, ಸಂತೋಷ ಪಟ್ಟಣಶೆಟ್ಟಿ, ರುದ್ರು ಪಟ್ಟಣಶೆಟ್ಟಿ, ಗಂಗಾಧರ ಕಿಣಗಿ, ಕುಮಾರ ಕಿಣಗಿ, ಪ್ರಶಾಂತ ಪಟ್ಟಣಶೆಟ್ಟಿ, ಸಿದ್ದಲಿಂಗ ಕಿಣಗಿ, ಬಾಬು ರೇಬಿನಾಳ, ಪ್ರಕಾಶ ಗುಣಾರಿ, ಬಸಲಿಂಗಪ್ಪ ಕಿಣಗಿ, ನಿಂಗಪ್ಪ ಮುಂಡೇವಾಡಗಿ, ಶ್ರೀಧರ್ ಬೊಮ್ಮಣ್ಣಿ, ಬಸವರಾಜ್ ಜೋಗೂರ, ವಿಶ್ವನಾಥ ಭೈರಿ, ಆನಂದ ಪಟ್ಟಣಶೆಟ್ಟಿ, ಬಾಬು ಜಂಜಾ, ಪ್ರಶಾಂತ ಪತ್ತಾರ್, ರವಿ ಕಮತಗಿ, ಶಿವು ಕೆಂಭಾವಿ, ಗೊಲ್ಲಾಳ ಅಗಸರ, ಈರಣ್ಣ ಕೆಂಭಾವಿ ಸೇರಿ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))