ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕವಿಗಳು ಸಮಾಜದ ಓರೆಕೋರೆಗಳನ್ನು ತಿದ್ದಿ, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಮೂಲಕ ಸಮಾಜದ ಕಣ್ಣುಗಳಾಗಿ ಕೆಲಸ ಮಾಡಬೇಕು ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ಅಭಿಪ್ರಾಯಪಟ್ಟರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಜರುಗಿದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ, ರಾಷ್ಟ್ರಮಟ್ಟದ ಪ್ರಚಲಿತ ವಿಷಯಗಳನ್ನು, ತಂದೆ-ತಾಯಿಯ ಮಹತ್ವ ಸಾರುವ ದೇಶಾಭಿಮಾನ ಹೆಚ್ಚಿಸುವ ಕವಿತೆಗಳನ್ನು ವಾಚಿಸಿದ ಕವಿಗಳಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಮಾತನಾಡಿ, ಕವಿಗಳು ತಮ್ಮ ಸೃಜನಶೀಲತೆಯ ಮೂಲಕ ನಾವೀನ್ಯಯುತ ವಿಷಯಗಳನ್ನಿಟ್ಟುಕೊಂಡು ಕವನ ವಾಚನ ಮಾಡುವ ಮೂಲಕ ಕವಿಗೋಷ್ಠಿಗೆ ಮೆರುಗು ತಂದು ಕೊಟ್ಟಿದ್ದಾರೆ ಎಂದರು.ಹೊನವಾಡದ ಬಾಬುರಾವ ಮಹಾರಾಜರು ಮಾತನಾಡಿದರು. ಅತಿಥಿಗಳಾಗಿ ಸುಮಾ ಬೋಳರೆಡ್ಡಿ, ರವಿ ಕಿತ್ತೂರ, ಶಿವಾನಂದ ಡೋಣೂರ, ಕವಿತಾ ಕಲ್ಯಾಣಪ್ಪಗೋಳ, ಮಡಿವಾಳಮ್ಮ ನಾಡಗೌಡ, ಶಾಂತಲಾ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಪಾರ್ವತಿ ಸೊನ್ನದ, ಲಕ್ಷ್ಮಿ ಕಾತ್ರಾಳ, ಮಾಳು ವಾಲೀಕಾರ, ಶಿವಾಜಿ ಮೋರೆ, ಚಾಂದಬೀಬಿ ಬಿಜಾಪುರ, ಶಿವಸೇನೆಯ ಹಿರೇಮಠ, ಅಂಬರೀಷ ಪೂಜಾರಿ, ಮುರುಗೇಶ ಸಂಗಮ, ಸೋಮಲಿಂಗಪ್ಪ ಅಂಗಡಿ, ಅಮಿರುದ್ಧೀನ್ ಖಾಜಿ, ಅಂಬಿಕಾ ಕರಕಪ್ಪಗೋಳ, ಸಂಗಮೇಶ ಜಂಗಮಶೆಟ್ಟಿ, ಶಾಂತಾ ಬಿರಾದಾರ, ರೂಪಾ ರಜಪೂತ, ಶೋಭಾ ಹರಿಜನ, ಸುರೇಶ ಪೂಜಾರಿ, ಅನ್ನಪೂರ್ಣ ಚೋಳಕೆ, ಅರುಂಧತಿ ಹತ್ತಿಕಾಳ, ಪರ್ವೀನ್ ಶೇಖ, ಸಿದ್ಧನಗೌಡ ಕಾಶಿನಕುಂಟಿ, ಮಲ್ಲಿಕಾರ್ಜುನ ದಳವಾಯಿ, ಹುಸೇನ್ ಮುಲ್ಲಾ ಹೀಗೆ 25 ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಿಸಿ ಅಕ್ಷರ ಜಾತ್ರೆ ಯಶಸ್ವಿಗೊಳಿಸಿದರು. ಸುಮಲತಾ ಗಡಿಯಪ್ಪನವರ ನಿರೂಪಿಸಿದರು, ಸುಜಾತಾ ಹ್ಯಾಳದ ಸ್ವಾಗತಿಸಿದರು. ಜಗದೀಶ ಬಿರಾದಾರ, ಗುರುಪ್ರಸಾದ.ಬಿ.ಜಿ ನಿರ್ವಹಿಸಿದರು. ವಿಜಯಲಕ್ಷ್ಮಿ ಹಳಕಟ್ಟಿ ವಂದಿಸಿದರು.