ಅಯೋಧ್ಯೆ ಯಾತ್ರೆ ಮುಗಿಸಿ ಹಿಂದಿರುಗಿದ ಯಲ್ಲಾಪುರದ ಮೊದಲ ತಂಡ

| Published : Feb 24 2024, 02:30 AM IST

ಸಾರಾಂಶ

ರಾಮ ಜನ್ಮಭೂಮಿ ಅಯೋಧ್ಯೆ ಯಾತ್ರೆ ಕೈಗೊಂಡ ತಾಲೂಕಿನ ೧೪ ರಾಮ ಭಕ್ತರ ಮೊದಲ ತಂಡ ಯಶಸ್ವಿಯಾಗಿ ಯಾತ್ರೆ ಸಂಪೂರ್ಣಗೊಳಿಸಿ, ಫೆ. ೨೨ರಂದು ಯಲ್ಲಾಪುರ ತಲುಪಿದೆ.

ಯಲ್ಲಾಪುರ:

ರಾಮ ಜನ್ಮಭೂಮಿ ಅಯೋಧ್ಯೆ ಯಾತ್ರೆ ಕೈಗೊಂಡ ತಾಲೂಕಿನ ೧೪ ರಾಮ ಭಕ್ತರ ಮೊದಲ ತಂಡ ಯಶಸ್ವಿಯಾಗಿ ಯಾತ್ರೆ ಸಂಪೂರ್ಣಗೊಳಿಸಿ, ಫೆ. ೨೨ರಂದು ಯಲ್ಲಾಪುರ ತಲುಪಿದೆ.ಹುಬ್ಬಳ್ಳಿಯಿಂದ ವಿಶೇಷವಾಗಿ ಅಯೋಧ್ಯೆ ಯಾತ್ರೆಗಾಗಿಯೇ ಸಿದ್ಧಪಡಿಸಿದ ರೈಲಿನಲ್ಲಿ ರಾಜ್ಯದ ೧೩೦೦ಕ್ಕೂ ಅಧಿಕ ಭಕ್ತರು ಶ್ರೀರಾಮನ ದರ್ಶನ ಪಡೆದು ಮರಳಿದರು.ಫೆ. ೧೭ರಂದು ಪಟ್ಟಣದ ಗ್ರಾಮದೇವಿಗೆ ಪೂಜೆ ಸಲ್ಲಿಸಿ ಅಯೋಧ್ಯೆಗೆ ತೆರಳಿದ ತಂಡದಲ್ಲಿ ಪಟ್ಟಣದ ಹೆಸರಾಂತ ಕೆತ್ತನೆ ಶಿಲ್ಪಿ ಅರುಣ ಬಿಕ್ಕುಗುಡಿಗಾರ, ವ್ಯಾಪಾರಸ್ಥ ಹನುಮಂತ ಎಸ್. ಶಿಂಗನಳ್ಳಿ, ಪತ್ರಕರ್ತ ಕೇಬಲ್ ನಾಗೇಶ, ಕೇಶವ ದುರ್ಗಾ ಗಾಂವ್ಕರ್, ಅಕ್ಷಯ್ ಅಶೋಕ ಕಿತ್ತೂರ್, ಆಕಾಶ ಮಲ್ಲೇಶ ಅನಿಗೊಳ, ಯಾದವ ತುಕಾರಾಮ ಮರಾಠೆ, ಸುರೇಂದ್ರ ಮುರ್ಕುಂಬಿ ಸೇರಿದಂತೆ ೮ ಮಂದಿ ಹಾಗೂ ಗ್ರಾಮೀಣ ಭಾಗದ ರಾಮಕೃಷ್ಣ ಗಣಪೂಮನೆ, ಉಮಾಮಹೇಶ್ವರ ಮೆಣಸುಮನೆ, ವಿ.ಪಿ. ಹೆಬ್ಬಾರ್ ಮಲವಳ್ಳಿ, ರಾಜಾರಾಮ ಗಾಂವ್ಕರ್, ರಾಮಚಂದ್ರ ಗಣಪುಮನೆ, ರಾಮಚಂದ್ರ ಸೇರಿದಂತೆ ೬ ಜನರು ಫೆ. ೨೨ರಂದು ಮರಳಿ ಗ್ರಾಮದೇವಿ ಸಾನ್ನಿಧ್ಯಕ್ಕೆ ಆಗಮಿಸಿ, ಪೂಜೆ ಸಲ್ಲಿಸಿದರು. ವಿಶ್ವ ಹಿಂದೂ ಪರಿಷತ್‌ ಪ್ರಮುಖರು ಯಾತ್ರೆಯಿಂದ ಮರಳಿದ ತಂಡವನ್ನು ಸ್ವಾಗತಿಸಿದರು.ಈ ವೇಳೆ ವಿಶ್ವ ಹಿಂದೂ ಪರಿಷತ್‌ ತಾಲೂಕಾಧ್ಯಕ್ಷ ನಾರಾಯಣ ನಾಯ್ಕ, ನಾಗರಿಕ ವೇದಿಕೆ ಅಧ್ಯಕ್ಷ ಸಂಘದ ಪ್ರಮುಖ ರಾಮು ನಾಯ್ಕ್, ತಳ್ಳಿಕೆರೆ ಗಜಾನನ ನಾಯ್ಕ್, ಸಿದ್ಧಾರ್ಥ ನಂದೊಳ್ಳಿ ಮಠ, ಆದಿತ್ಯ ಗುಡಿಗಾರ, ಅಶೋಕ ಕಿತ್ತೂರ ಇನ್ನಿತರರು ಯಾತ್ರಾರ್ಥಿಗಳ ಕುಟುಂಬದ ಸದಸ್ಯರು ಸ್ವಾಗತಿಸಿದರು.