ಸಾರಾಂಶ
ಕಮಲಾಪುರ: ತಾಲೂಕಿನ ಅತ್ಯಂತ ಕಳೆದ ಹತ್ತು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ರೈತ ಸಮುದಾಯಕ್ಕೆ ಬೆಳೆ ನಾಶವಾಗುವ ಆತಂಕ ಹೆಚ್ಚಾಗುತ್ತಿದೆ. ಪ್ರಸ್ತುತ ವರ್ಷ ಮುಂಗಾರು ಉತ್ತಮ ಸುರಿದು, ಬಿತ್ತನೆ ಕಾರ್ಯ ಆರಂಭದಿಂದ ಸಾಗಿ ಬೆಳೆಗಳು ಸದೃಢವಾಗಿ ಬೆಳೆದಿದ್ದವು. ಆದರೆ ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ಕೈಗೆ ಸಿಗದೆ ಆತಂಕ ಹೆಚ್ಚಾಗುತ್ತಿದೆ.
ಸದ್ಯ ಹೆಸರು ಬೆಳೆ ಕಟಾವು ಹಂತಕ್ಕೆ ಬಂದಿವೆ, ಹೆಸರು ಬೆಳೆಗಳು ಹೊಲದಲ್ಲೇ ಬಿದ್ದು ಮಣ್ಣು ಪಾಲಾಗುತ್ತಿವೆ. ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಉದ್ದು ಹೆಸರು ಕಟಾವು ಮಾಡಲು ಮಳೆ ಬಿಡುವುದಿಲ್ಲ. ಅತಿಯಾದ ಮಳೆಯಿಂದ ತಗ್ಗು ಪ್ರದೇಶದಲ್ಲಿ ಹೊಲಗಳು ಜಲಾವೃತಗೊಂಡಿದ್ದು, ಹೆಸರು ಕಟಾವು ಮಾಡುವ ಯಂತ್ರಗಳು ಹೊಲಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ರೈತರಿಗೆ ಆಗಿದೆ ಈ ವರ್ಷ ಮುಂಗಾರು ಆರಂಭವಾಗಿರುವುದರಿಂದ ಖುಷಿಯಲ್ಲಿದ್ದ ರೈತರಿಗೆ ತೊಗರಿಗೆ ಹೆಚ್ಚಿನ ಮಹತ್ವ ನೀಡಿ ಬೆತ್ತಲೆ ಕಾರ್ಯ ಮಾಡಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಮೀನುಗಳಿಗೆ ನೀರು ಸಂಗ್ರಹಗೊಂಡು ತೇವಾಂಶ ಹೆಚ್ಚಾಗಿ ಅರ್ಧದಷ್ಟು ಬೆಳೆ ನಾಶವಾಗಿ ಒಣಗಿ ಹೋಗಿದ್ದು, ಕಮಲಾಪುರ ತಾಲೂಕಿನಲ್ಲಂತೂ ಅರ್ಧದಷ್ಟು ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿರುವ ಹಂತಕ್ಕೆ ಬಂದು ತಲುಪಿವೆ ಹೀಗಾಗಿ ಅತಿವೃಷ್ಟಿಯಿಂದ ಹಾನಿ ಗೊಳಗಾದ ಬೆಳೆಗಳು ಸರ್ವೆ ನಡೆಸಿ ಪರಿಹಾರ ಒದಗಿಸಲಿ ಎಂಬುವುದು ರೈತರ ಬೇಡಿಕೆಯಾಗಿದೆ.
ಅದರಲ್ಲಿಯೂ ಕೂಡ ವಿಶೇಷವಾಗಿ ತಗ್ಗು ಪ್ರದೇಶವಾಗಿರುವ ಗಂಡೋರಿ ನಾಲ ಜಲಾಶಯ ಹಾಗೂ ಬೆಣ್ಣೆತೋರಾ ಜಲಾಶಯ ವ್ಯಾಪ್ತಿ ಬರುವ ಗ್ರಾಮಗಳ ರೈತರ ಸ್ಥಿತಿಯಂತೂ ನಿರಂತರವಾಗಿ 10 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳ ಒಳ ಹರಿವು ಹೆಚ್ಚಾಗಿರುವುದರಿಂದ ನೀರು ಹರಿಬಿಡುತ್ತಿರುವುದರಿಂದ ಈ ಜಲಾಶಯಗಳ ಅಕ್ಕ ಪಕ್ಕದವಲ್ಲಿ ಬರುವ ಗ್ರಾಮದ ರೈತರ ಸ್ಥಿತಿಯಂತೂ ಚಿಂತಾ ಜನಕವಾಗಿದೆ ಮಳೆ ಹೆಚ್ಚಾಗಿ ಎರಡು ದಿನಗಳಿಂದ ಎರಡೂ ಜಲಾಶಯಗಳ ಗೇಟಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವುದರಿಂದ ರೈತರ ಬೆಳೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳು ಹಾನಿ ಉಂಟಾಗಿದೆ ಕೂಡಲೇ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಸಂಬಂಧ ಪಟ್ಟ ಅಧಿಕಾರಿಗಳು ರೈತರಿಗೆ ಪರಿಹಾರ ಒದಗಿಸಲು ಮುಂದಾಗ ಬೇಕೆಂದು ಹಾನಿಗೊಳಗಾದ ರೈತರು ಒತ್ತಾಯಿಸಿದ್ದಾರೆ.ಕಮಲಾಪುರ ತಾಲೂಕಿನಲ್ಲಿ ನಿರಂತರವಾಗಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ರೈತರ ಹೆಸರು, ಉದ್ದು, ತೊಗರೆ ಅಂತಹ ಬೆಳೆಗಳು ಹಾಳಾಗಿವೆ. ಹೀಗಾಗಿ ಸರಕಾರ ಕೂಡಲೇ ಅತಿವೃಷ್ಟಿಯಿಂದ ಹಾನಿ ಒಳಗಾಗಿರುವ ಬೆಳೆಗಳ ಬಗ್ಗೆ ಸರ್ವೇ ನಡೆಸಿ, ಪ್ರತಿ ಎಕರೆಗೆ ಕನಿಷ್ಠ ರು 25 ಸಾವಿರ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟ ಕೈಗೊಳ್ಳಲಾಗುತ್ತದೆ.
- ಬಸವರಾಜ್ ಮಾಲಿ ಪಾಟೀಲ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಗಿ ಜಮೀನುಗಳಲ್ಲಿ ನೀರು ನುಗ್ಗಿ ಹೆಸರು, ಉದ್ದು, ತೊಗರಿ, ಹಾಳಾಗಿವೆ. ಈಗಾಗಲೇ ಜಿಲ್ಲಾಡಳಿತ ಆದೇಶ ಮೇರೆಗೆ ಅತಿವೃಷ್ಟಿ ಯಿಂದ ಹಾನಿಗೊಳಗಾದ ಬೆಳೆಗಳಿಗೆ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸರ್ವೆ ನಡೆದಿದ್ದು, ಎರಡು ಮೂರು ದಿನಗಳಲ್ಲಿ ಸಂಪೂರ್ಣ ಸರ್ವೆ ಮುಗಿಸಿ ಜಿಲ್ಲಾ ಆಡಳಿತಕ್ಕೆ ವರದಿ ನೀಡಲಾಗುವುದು.
- ಅರುಣಕುಮಾರ ಮೂಲಿಮನಿ, ಕೃಷಿ ನಿರ್ದೇಶಕರು ಕಲಬುರ್ಗಿ