ಪುಂಡ ಆನೆ ಸೆರೆ ಹಿಡಿದ ಅರಣ್ಯ ಇಲಾಖೆ

| Published : Jan 10 2025, 12:46 AM IST

ಸಾರಾಂಶ

ಕಳೆದ ಎರಡು ತಿಂಗಳಿಂದ ಖಾನಾಪುರದ ಕರಂಬಳ ಚಾಪಗಾಂವ ಗ್ರಾಮಗಳ ಸುತ್ತ ರೈತರಿಗೆ ತೊಂದರೆ ಕೊಡುತ್ತಿದ್ದ ಆನೆಯನ್ನು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ಕಳೆದ ಎರಡು ತಿಂಗಳಿಂದ ಖಾನಾಪುರದ ಕರಂಬಳ ಚಾಪಗಾಂವ ಗ್ರಾಮಗಳ ಸುತ್ತ ರೈತರಿಗೆ ತೊಂದರೆ ಕೊಡುತ್ತಿದ್ದ ಆನೆಯನ್ನು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.

ಸಕ್ರೆಬೈಲು ಆನೆ ಬಿಡಾರದ ನುರಿತ ಆನೆಗಳ ಸಹಾಯದಿಂದ ಪುಂಡ ಆನೆ ಸೆರೆ ಹಿಡಿಯಲಾಯಿತು. ಎರಡು ತಿಂಗಳಿನಿಂದ ಖಾನಾಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ರೈತರು ಆತಂಕದಲ್ಲಿದ್ದರು. ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ಮಾರ್ಗದರ್ಶನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರಿಯಾ ಕ್ರಿಸ್ಟು ರಾಜಾ, ಖಾನಾಪುರ ಆರ್ ಎಫ್ ಒ ಶ್ರೀಕಾಂತ ಪಾಟೀಲ, ನಂದಗಡದ ವಲಯ ಅರಣ್ಯಾಧಿಕಾರಿ ಮಾಧುರಿ ದಳವಾಯಿ ಸೇರಿದಂತೆ ಇನ್ನಿತರ ಅಧಿಕಾರಿಗಳ ವಿಶೇಷ ಆಸಕ್ತಿಯ ಕಾರಣ ಕಾರ್ಯಾಚರಣೆ ಯಶಸ್ವಿಯಾಗಿದೆ.