ಸಾರಾಂಶ
ಮಲೆನಾಡು ಭಾಗವಾದ ಬೇಲೂರು ತಾಲೂಕಿನ ಅರೇಹಳ್ಳಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಗುರುವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಿದ್ದು, ಮೊದಲ ದಿನ ನರಹಂತಕ ಕರಡಿ ಹೆಸರಿನ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ.
ಅರೆಹಳ್ಳಿ ಸುತ್ತಮುತ್ತ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ । ವಾಟೇಹಳ್ಳಿ ಗ್ರಾಮದ ಐಬಿಸಿ ಎಸ್ಟೇಟ್‌ನಲ್ಲಿ ವಶ
ಕನ್ನಡಪ್ರಭ ವಾರ್ತೆ ಬೇಲೂರುಮಲೆನಾಡು ಭಾಗವಾದ ಅರೇಹಳ್ಳಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಗುರುವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಿದ್ದು, ಮೊದಲ ದಿನ ನರಹಂತಕ ಕರಡಿ ಹೆಸರಿನ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ. ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ವಾಟೇಹಳ್ಳಿ ಗ್ರಾಮದ ಐಬಿಸಿ ಎಸ್ಟೇಟ್‌ನಲ್ಲಿ ನರಹಂತಕ ಕಾಡಾನೆ ಸೆರೆ ಸಿಕ್ಕಿದೆ.
ಎಂಟು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿ, ನರಹಂತಕ ಕಾಡಾನೆ ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿದ ವೈದ್ಯರು, ಅರ್ಧ ಗಂಟೆ ನಂತರ ಪ್ರಜ್ಞೆ ತಪ್ಪಿ ಬಿದ್ದ ಕರಡಿ ಹೆಸರಿನ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.ಮೊದಲ ದಿನದ ಕಾರ್ಯಾಚರಣೆಯಲ್ಲಿ ಕರಡಿ ಆನೆಯು ಅರಣ್ಯ ಇಲಾಖೆಯ ವಶವಾಗಿದೆ. ಕಾಡಾನೆಗಳ ಸೆರೆಗೆ ಮತ್ತೆ ಕಾರ್ಯಾಚರಣೆ:
ಪುಂಡಾನೆಗಳನ್ನು ಮತ್ತೆ ಖೆಡ್ಡಕ್ಕೆ ಕೆಡವಲು ಎಂಟು ಸಾಕಾನೆಗಳ ಆಗಮನವಾಗಿದೆ.ತಾಲೂಕಿನ ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ತಡವಾಗಿಯಾದರೂ ಎಚ್ಚೆಚ್ಚ ಅರಣ್ಯ ಇಲಾಖೆ ಗುರುವಾರದಿಂದ ಮೂರನೇ ಸುತ್ತಿನ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲು ಸನ್ನದ್ಧವಾಗಿದೆ. ಎಂಟು ಸಾಕಾನೆಗಳ ತಂಡದ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಡಿಕೇರಿ ಜಿಲ್ಲೆ ಕುಶಾಲನಗರದ ದುಬಾರೆ ಆನೆ ಶಿಬಿರ ಮತ್ತು ನಾಗರಹೊಳೆ ಆನೆ ಶಿಬಿರದಿಂದ ಎಂಟು ಆನೆಗಳು ಆಗಮಿಸಿವೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬೇಲೂರು ಅರಣ್ಯ ಇಲಾಖೆ ವಲಯಾಧಿಕಾರಿ ವಿನಯಕುಮಾರ್, ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆ ಉನ್ನತ ಅಧಿಕಾರಿಗಳ ಆದೇಶದಂತೆ ಕುಶಾಲನಗರದ ದುಬಾರೆ ಆನೆ ಶಿಬಿರದಿಂದ ಪ್ರಶಾಂತ್, ಧನಂಜಯ್. ಸುಗ್ರೀವಾ, ನಾಗರಹೊಳೆ ಆನೆ ಶಿಬಿರದಿಂದ ಮೈಸೂರು ಮಹೇಂದ್ರ, ಅಶ್ವತ್ಥಾಮ ಆನೆಗಳು ಕೂಡ ಆಗಮಿಸಲಿವೆ ಎಂದು ತಿಳಿಸಿದರು. ಸಾಕಾನೆಗಳೊಂದಿಗೆ ಇಬ್ಬರು ನುರಿತ ವೈದ್ಯರು ಇದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಶಾಶ್ವತ ಕ್ರಮ ಅಗತ್ಯ:
ಕಾಡಾನೆಗಳ ಹಾವಳಿಯಿಂದ ಮಲೆನಾಡಿನ ಜನರ ಬದುಕು ಚಿಂತಾಜನಕವಾಗಿದೆ. ಅರಣ್ಯ ಇಲಾಖೆ ನೆಪ ಮಾತ್ರದ ಕಾಡಾನೆಗಳ ಸೆರೆ ಕಾರ್ಯಾಚರಣೆ ನಡೆಸದೆ ಶಾಶ್ವತ ಪರಿಹಾರ ಕೆಲಸಕ್ಕೆ ಮುಂದಾಗಬೇಕಿದೆ. ಆರಣ್ಯ ಇಲಾಖೆ ಸಕಲ ಸಿದ್ಧತೆ ಮತ್ತು ಭದ್ರತೆ ಹಾಗೆಯೇ ನುರಿತ ವೈದ್ಯರು ತರಬೇತಿದಾರರಿಂದ ಕಾರ್ಯಾಚರಣೆ ನಡೆಸುವುದು ಸೂಕ್ತ ಎಂದು ಬೇಲೂರು ತಾಲೂಕಿನ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ ಕುಮಾರ್ ಹೇಳಿದರು.ಬಿಕ್ಕೋಡು ಬಳಿಯ ಆನೆ ಶಿಬಿರ.
ಸೆರೆ ಹಿಡಿಯಲಾದ ಕರಡಿ ಕಾಡಾನೆಯನ್ನು ಸ್ಥಳಾಂತರಿಸಲು ಸಿದ್ಧತೆ ಮಾಡುತ್ತಿರುವುದು.