ಕುರುಬರ ಸಂಘದ ಮಾಜಿ ಅಧ್ಯಕ್ಷರಿಂದಲೇ ಕನಕ ಭವನದ ಜಾಗ ಒತ್ತುವರಿ

| Published : Sep 28 2025, 02:00 AM IST

ಕುರುಬರ ಸಂಘದ ಮಾಜಿ ಅಧ್ಯಕ್ಷರಿಂದಲೇ ಕನಕ ಭವನದ ಜಾಗ ಒತ್ತುವರಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಕನಕ ಭವನಕ್ಕೆ ಸೇರಿದ ಜಾಗವನ್ನು ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ, ಕನಕ ಭವನ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ನಿರ್ದೇಶಕ ಜಿ.ಎಲ್.ರಾಜು ಒತ್ತುವರಿ ಮಾಡಿಕೊಂಡು ತಂತಿ ಬೇಲಿ ಹಾಕಿಕೊಂಡಿದ್ದಾರೆ. ಕನಕ ಭವನ ನಿರ್ಮಾಣ ಮತ್ತು ನಿರ್ವಹಣ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಎಲ್ಲ ಸದಸ್ಯರು ಖಂಡಿಸಿದ್ದಾರೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಕನಕ ಭವನಕ್ಕೆ ಸೇರಿದ ಜಾಗವನ್ನು ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ, ಕನಕ ಭವನ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ನಿರ್ದೇಶಕ ಜಿ.ಎಲ್.ರಾಜು ಒತ್ತುವರಿ ಮಾಡಿಕೊಂಡು ತಂತಿ ಬೇಲಿ ಹಾಕಿಕೊಂಡಿದ್ದಾರೆ. ಕನಕ ಭವನ ನಿರ್ಮಾಣ ಮತ್ತು ನಿರ್ವಹಣ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಎಲ್ಲ ಸದಸ್ಯರು ಖಂಡಿಸಿದ್ದಾರೆ.

ಸಭೆಯಲ್ಲಿಯೇ ಕನಕ ಭವನ ನಿರ್ಮಾಣ ಮತ್ತು ನಿರ್ವಹಣ ಸಮಿತಿ ಅಧ್ಯಕ್ಷ ಬಿ.ಎಂ.ಮುನಿರಾಜು ಜಿ.ಎಲ್.ರಾಜು ಅನ್ನು ಸಭೆಗೆ ಕರೆದರೂ ಬಂದಿಲ್ಲ. ಒತ್ತುವರಿ ಮಾಡಿಕೊಂಡ ಕನಕ ಭವನದ ಜಾಗವನ್ನು ಅಕ್ರಮವಾಗಿ ತಂತಿ ಬೇಲಿ ಹಾಕಿದ್ದೂ, ಅಲ್ಲದೆ ಪಿಟ್‌ ಗುಂಡಿ ಹೊಡೆದಿದ್ದಾರೆ. ಕೂಡಲೇ ತೆರವುಗೊಳಿಸಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದ್ದಾರೆ.

ಕೂಡಲೇ ಕನಕ ಭವನದ ಜಾಗ ಒತ್ತುವರಿ ತೆರವುಗೊಳಿಸದೇ ಇದ್ದಲ್ಲಿ ಜಿ.ಎಲ್.ರಾಜು ಮೇಲೆ ಕಾನೂನು ಕ್ರಮಕ್ಕೆ ಸಭೆಯೂ ಒಪ್ಪಿಗೆ ನೀಡಿದೆ ಎಂದು ಕನಕ ಭವನ ನಿರ್ಮಾಣ ಮತ್ತು ನಿರ್ವಹಣ ಸಮಿತಿ ಸದಸ್ಯರೊಬ್ಬರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಕನಕ ಭವನ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ಕಾರ್ಯದರ್ಶಿ ಪಿ.ಚಂದ್ರಪ್ಪ, ಖಚಾಂಚಿ ಎಚ್.ಎನ್. ಬಸವರಾಜು, ಸಮಿತಿ ನಿರ್ದೇಶಕರಾದ ಎಲ್.ಸುರೇಶ್‌, ಹೊಣಕನಪುರ ಸ್ವಾಮಿ ಗೌಡ, ಚಿಕ್ಕಾಟಿ ಬಸವರಾಜು, ವಿಶ್ವನಾಥ(ಜಿಕೆಎನ್) ಹಲವರಿದ್ದರು.