ಒಟ್ಟು 95 ಮಂದಿಯ ಠೇವಣಿ ಹಣ ಸೇರಿ ಸುಮಾರು2.28 ಕೋಟಿ ದುರುಪಯೋಗಗೊಂಡಿರುವುದು ಬಹಿರಂಗ

ಫೋಟೋ-27ಎಂವೈಎಸ್‌ 65

---------

ಕನ್ನಡಪ್ರಭ ವಾರ್ತೆ ಸರಗೂರು:

ಅಂಚೆ ಕಚೇರಿಯಲ್ಲಿ ನಡೆದಿರುವ ಭಾರೀ ಹಣ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಹಕರು ನಡೆಸುತ್ತಿದ್ದ ಪ್ರತಿಭಟನೆ ನಾಲ್ಕನೇ ದಿನ ಗುರುವಾರ ಅಂತ್ಯಗೊಂಡಿದೆ.

ಅಂಚೆ ಇಲಾಖೆಯ ಮೇಲ್ಪಟ್ಟ ಅಧಿಕಾರಿ ಪೋಸ್ಟ್ ಹಿರಿಯ ಅಧೀಕ್ಷಕ ಹರೀಶ್ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿ, ಗ್ರಾಹಕರೊಂದಿಗೆ ಮಾತನಾಡಿದ ಬಳಿಕ ಧರಣಿ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳಲಾಯಿತು.

ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಒಟ್ಟು 95 ಮಂದಿಯ ಠೇವಣಿ ಹಣ ಸೇರಿ ಸುಮಾರು2.28 ಕೋಟಿ ದುರುಪಯೋಗಗೊಂಡಿರುವುದು ಬಹಿರಂಗವಾಗಿದೆ. ಇಲಾಖೆಯ ಎಲ್ಲಾ ಶಾಖೆಗಳಿಂದ ಬಂದಿರುವ ಪರಿಶೀಲನಾ ತಂಡಗಳು ದಾಖಲೆಗಳನ್ನು ಪರಿಶೀಲಿಸಿದ್ದು, ಈ ಹಣವನ್ನು ಹಂತ ಹಂತವಾಗಿ ಗ್ರಾಹಕರ ಖಾತೆಗೆ ಹಿಂತಿರುಗಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಜಿಲ್ಲಾ ಎಸ್ಪಿ ಹಣ ಕಳೆದುಹೋಗಿದೆಯೋ ಎಲ್ಲರಿಗೂ ವಾಪಸ್ ನೀಡಲಾಗುತ್ತದೆ. ಹಣ ಬರಲು ಪ್ರಾರಂಭವಾದಾಗ ನಿರಂತರವಾಗಿ ಖಾತೆಗಳಿಗೆ ಜಮಾ ಆಗುತ್ತದೆ, ಎಂದು ಸ್ಪಷ್ಟಪಡಿಸಿದರು. ಠೇವಣಿದಾರರ ಕೆಲವು ಸಹಿಗಳನ್ನು ಸಿಬ್ಬಂದಿಯೊಬ್ಬರು ನಕಲು ಮಾಡಿ ಹಣ ಡ್ರಾ ಮಾಡಿದ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಕೆಲವು ದಾಖಲೆಗಳನ್ನು ಹೈದರಾಬಾದ್ ಬೆರಳಚ್ಚು ತಜ್ಞರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.