ತಂದೆ- ತಾಯಿ ಹುಟ್ಟಿನಿಂದ ನೀಡುವ ಸಂಸ್ಕಾರವು ಮಗುವಿನ ಭವಿಷ್ಯ ನಿರ್ಧರಿಸುತ್ತದೆ ಎಂದು ಅಂಕಣಕಾರರು ಹಾಗೂ ಖ್ಯಾತ ವಾಗ್ಮಿ ಅಕ್ಷಯಾ ಗೋಖಲೆ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಂದೆ- ತಾಯಿ ಹುಟ್ಟಿನಿಂದ ನೀಡುವ ಸಂಸ್ಕಾರವು ಮಗುವಿನ ಭವಿಷ್ಯ ನಿರ್ಧರಿಸುತ್ತದೆ ಎಂದು ಅಂಕಣಕಾರರು ಹಾಗೂ ಖ್ಯಾತ ವಾಗ್ಮಿ ಅಕ್ಷಯಾ ಗೋಖಲೆ ಹೇಳಿದರು.

ಪಟ್ಟಣದ ಮೈಲೇಶ್ವರ ಕ್ರಾಸ್ ಹತ್ತಿರದ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ನಡೆದ ಎರಡು ದಿನಗಳ ಬ್ರಿಲಿಯಂಟ್ ಕಲಾ ವೈಭವ-೨೦೨೬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಮಣ್ಣಿನ ಸಂಸ್ಕೃತಿ ಅಳವಡಿಸುವಂತಹ ಕಾರ್ಯ ಮಾಡಿದರೇ ಪ್ರತಿ ಮನೆಯಲ್ಲಿಯೂ ರಾಜ ಮಹಾರಾಜರನ್ನು ಕಾಣಲು ಸಾಧ್ಯ. ಬಿದ್ದಾಗ ಕೈ ಹಿಡಿದೆತ್ತಿಕೊಂಡು ಜೋಪಾನ ಮಾಡುವ ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.

ಜಾಲಹಳ್ಳಿ ಸಂಸ್ಥಾನ ಬೃಹನ್ ಮಠದ ಜಯಶಾಂತಲಿಂಗೇಶ್ವರ ಶ್ರೀ ಸಾನ್ನಿಧ್ಯ ವಹಿಸಿ, ತಂದೆ- ತಾಯಿ ಪಾದಪೂಜೆ ಮಾಡಿಸುವ ಸಂಸ್ಕತಿ ಹುಟ್ಟಿದ್ದು ಭಾರತದಲ್ಲಿ ಇಂದು ಪಾಶ್ಚಿಮಾತ್ಯ ಸಂಸ್ಕೃತಿಗೆ ಕೆಲವರು ಹೊಂದಿಕೊಂಡಿದ್ದು ಪಾದಪೂಜೆಗೆ ವಿರೋಧಿಸುವುದರೊಂದಿಗೆ ನಮ್ಮ ಸಂಸ್ಕೃತಿ ನಶಿಸುತ್ತಿದೆ ಎಂದರು.

ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಓದಿನ ಜೊತೆಗೆ ನೀಡುವ ಸಂಸ್ಕಾರ ಸಮಾಜಕ್ಕೆ ಕೊಡುಗೆಯಾಗಬೇಕು. ಆ ರೀತಿ ಮಕ್ಕಳನ್ನು ಬೆಳೆಸಬೇಕು. ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಶಿಕ್ಷಣ ಒದಗಿಸುವಂತಹ ಕಾರ್ಯ ಪಾಲಕರು ಮಾಡಬೇಕು ಎಂದರು. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿಂಚನಾ ಶಿವನಗೌಡ ಪಾಟೀಲ ವಿದ್ಯಾರ್ಥಿನಿಗೆ ದಿ.ಎನ್.ಎಂ.ಬಿರಾದಾರ ಸ್ಮರಣಾರ್ಥ ಅವರ ಪುತ್ರ ಬ್ರೀಲಿಯಂಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಶಶಿದರ ಬಿರಾದಾರ ಅವರು ₹೧೦ ಸಾವಿರ ಬಹುಮಾನ, ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು.

ಜ್ಞಾನಭಾರತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಭರಮಣ್ಣ ಕಾಮನ್, ಲಕ್ಷ್ಮೀ ಕಾಮನ್ ದಂಪತಿಗೆ ಹಾಗೂ ಎಸ್ಸೆಸ್ಸೆಲ್ಸಿಸಿಯಲ್ಲಿ ಉತ್ತಮ ಸಾಧನೆಗೈದ ರಾಜ್ಯಕ್ಕೆ 2ನೇ ರ್‍ಯಾಂಕ್‌ ಪಡೆದ ಸಿಂಚನಾ ಶಿವನಗೌಡ ಪಾಟೀಲ, ಗಗನ್‌ಸಿಂಗ್ ಜೈಸಿಂಗ್ ಮೂಲಿಮನಿ, ಲಕ್ಷ್ಮೀ ಚೌದ್ರಿ, ಸೃಷ್ಟಿ ಮೇಲಿನಮನಿಗೆ ಸಂಸ್ಥೆಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ.ನಡುವಿನಮನಿ, ಕಾರ್ಯದರ್ಶಿಗಳಾದ ಎಂ.ಬಿ.ಮಡಿವಾಳರ, ನಿರ್ದೇಶಕರಾದ ಎಸ್.ಎಚ್.ಪಾಟೀಲ, ಶಶಿಧರ ಬಿರಾದಾರ, ಎಲ್.ಎಂ.ಬಿರಾದಾರ, ಎನ್.ಎಸ್.ಗಡಗಿ, ಮುಖ್ಯಗುರು ವಿನಾಯಕ ಪಟಗಾರ, ಹಾಗೂ ಶಿಕ್ಷಕ ಎಸ್.ಎಂ.ಪಾಲ್ಕಿ ಇತರರಿದ್ದರು. ಸಿದ್ದನಗೌಡ ಪಾಟೀಲ ಸ್ವಾಗತಿಸಿ, ಎಸ್.ಸಿ.ಕರಡಿ ನಿರೂಪಿಸಿ, ಚನ್ನು ಮೂಲಿಮನಿ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಇಂದು ಮಕ್ಕಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿರುವ ಕಾರಣ ಪಾಲಕರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಇವತ್ತಿನ ಕಾಲದಲ್ಲಿ ಮಕ್ಕಳು ಎಡವಿದರೇ ಮೇಲೆತ್ತಬಹುದು, ಮುಂದೆ ನೀವು ಎಡವಿಬಿದ್ದಾಗ ನಿಮ್ಮ ಮಗು ನಿಮ್ಮನ್ನು ಎತ್ತಿಕೊಂಡು ಹೋಗಿ ಬೆಳೆಸಬೇಕು. ಅಂತಹ ಶಿಕ್ಷಣ ಮಕ್ಕಳಲ್ಲಿ ನೀಡಿ. ಅಕ್ಷಯಾ ಗೋಖಲೆ, ಖ್ಯಾತ ವಾಗ್ಮಿ