ಸಾರಾಂಶ
ಮಾಗಡಿ: ಕೆಂಪೇಗೌಡರ ಕಾಲದ ಶ್ರೀ ರಂಗನಾಥಸ್ವಾಮಿ ದನಗಳ ಜಾತ್ರೆ ವೈಭವದಿಂದ ಹೀಗೆಯೇ ನಡೆಸಿಕೊಂಡು ಹೋಗಲು ಜಾತ್ರೆ ಸಮಿತಿ ರಚನೆಯಾಗಬೇಕು ಎಂದು ಹಳ್ಳಿಕಾರ್ ತಳಿ ಮಾಲೀಕ ಹಾಗೂ ಪ್ರಗತಿಪರ ರೈತ ಜುಟ್ಟನಹಳ್ಳಿ ಜಯರಾಂ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಗಡಿ: ಕೆಂಪೇಗೌಡರ ಕಾಲದ ಶ್ರೀ ರಂಗನಾಥಸ್ವಾಮಿ ದನಗಳ ಜಾತ್ರೆ ವೈಭವದಿಂದ ಹೀಗೆಯೇ ನಡೆಸಿಕೊಂಡು ಹೋಗಲು ಜಾತ್ರೆ ಸಮಿತಿ ರಚನೆಯಾಗಬೇಕು ಎಂದು ಹಳ್ಳಿಕಾರ್ ತಳಿ ಮಾಲೀಕ ಹಾಗೂ ಪ್ರಗತಿಪರ ರೈತ ಜುಟ್ಟನಹಳ್ಳಿ ಜಯರಾಂ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಗಡಿಯಲ್ಲಿ ನಡೆಯುವ ಐತಿಹಾಸಿಕ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ತಳಿ ಜೋಡೆತ್ತುಗಳನ್ನು 4 ಲಕ್ಷಕ್ಕೆ ಮಾರಾಟ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದನಗಳ ಜಾತ್ರೆ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಮಾಗಡಿ ತಾಲೂಕಿನಲ್ಲಿ ಶ್ರೀರಂಗನಾಥ ಸ್ವಾಮಿ ದನಗಳ ಜಾತ್ರೆಗೆ 15 ಎಕರೆ ಜಾಗ ಪಟ್ಟಣದಲ್ಲಿ ಮೀಸಲಿರಿಸಿದರೆ ಮಾತ್ರ ಇದರ ವೈಭವವನ್ನು ಕಾಣಬಹುದು. ಇದರ ಬಗ್ಗೆ ರಾಜಕಾರಣಿಗಳು ತಲೆಕೆಡಿಸಿಕೊಂಡಿಲ್ಲ ಅಲ್ಲದೆ, ಜಾತ್ರಾ ಕಮಿಟಿಯನ್ನು ರದ್ದು ಮಾಡಲಾಗಿದೆ. ರಾಸುಗಳಿಗೆ ಉತ್ತಮ ಬಹುಮಾನ ನೀಡುವ ನಿಟ್ಟಿನಲ್ಲಿ ಜಾತ್ರಾ ಕಮಿಟಿ ರಚನೆಯಾಗಬೇಕು. ಯಾರೇ ಜನಪ್ರತಿನಿಧಿ ಆಯ್ಕೆಯಾದರು ಅವರು ಜಾತ್ರಾ ಕಮಿಟಿ ರಚಿಸಿ ಜಾತ್ರೆಯ ಬಗ್ಗೆ ಕಾಳಜಿ ವಹಿಸಿದರೆ ಮಾಗಡಿ ರಂಗನಾಥ ಸ್ವಾಮಿಯ ದನಗಳ ಜಾತ್ರೆ ವೈಭವದಿಂದ ನಡೆಯಲು ಸಾಧ್ಯ ಎಂದು ಹೇಳಿದರು.ಭರ್ಜರಿ ಮಾರಾಟ:
ಮಾಗಡಿ ದನಗಳ ಜಾತ್ರೆಯಲ್ಲಿ ರಾಸುಗಳನ್ನು ಖರೀದಿಸಲು ದೂರದ ಗದಗ, ಧಾರವಾಡ, ಬಿಜಾಪುರ, ಹರಿಹರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಮಂಡ್ಯ, ತುಮಕೂರು, ಪಾವಗಡ, ಶಿರಾ, ಮಧುಗಿರಿ, ಕೋಲಾರ, ಚಿಕ್ಕಬಳ್ಳಾಪುರ, ಕುಣಿಗಲ್, ರಾಮನಗರ ಸೇರಿದಂತೆ ರಾಜ್ಯದ ಇತರೆಡೆ ಹಾಗೂ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳಿಂದಲೂ ಮಾಗಡಿ ರಂಗನ ದನಗಳ ಜಾತ್ರೆಗೆ ಆಗಮಿಸಿದ್ದಾರೆ. ರೈತರು ಬೇಸಾಯಕ್ಕೆ ಹಳ್ಳಿಗಾಡಿನ ಹಳ್ಳಿಕಾರ್, ಅಮೃತಮಹಲ್, ಖಿಲಾರಿ ಜಾತಿಗೆ ಸೇರಿದ ಎತ್ತುಗಳು ಖರೀದಿಸಲು ಬರುತ್ತಾರೆ. ಎತ್ತುಗಳ ಜೋಡಿ ಒಂದಕ್ಕೆ ಕನಿಷ್ಠ 50 ಸಾವಿರದಿಂದ ಗರಿಷ್ಠ 4 ಲಕ್ಷದ ರು.ಗಳವರೆಗೂ ಭರ್ಜರಿ ವ್ಯಾಪಾರ ನಡೆಯುತ್ತಿದೆ ಎಂದು ಹೇಳಿದರು.ಒಂದು ವಾರಕ್ಕೂ ಹೆಚ್ಚು ಕಾಲ ನಡೆಯುವ ದನಗಳ ಜಾತ್ರೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಮಾಡಿದ್ದು ಟ್ರ್ಯಾಕ್ಟರ್ ಮೂಲಕ ಉಚಿತ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಮಾಜಿ ಶಾಸಕ ಎ.ಮಂಜುನಾಥ್ ಅಭಿಮಾನಿ ಬಳಗ, ಸಮಾಜ ಸೇವಕ ಬಾಗೇಗೌಡ, ಹಳ್ಳಿಕಾರ್ ಸ್ವಾಭಿಮಾನಿ ವೇದಿ, ಪುರಸಭೆ ಸದಸ್ಯರಾದ ಪುರುಷೋತ್ತಮ್ ಸೇರಿದಂತೆ ಅನೇಕರು ಟ್ರ್ಯಾಕ್ಟರ್ ಮೂಲಕ ಜಾತ್ರೆಗಳಿಗೆ ನೀರಿನ ಸರಬರಾಜು ಮಾಡುತ್ತಿರುವುದು ಉತ್ತಮ ಕೆಲಸ ಎಂದರು.
3ಮಾಗಡಿ2:ಮಾಗಡಿಯ ದನಗಳ ಜಾತ್ರೆಯಲ್ಲಿ 4 ಲಕ್ಷ ರು.ಗಳಿಗೆ ಮಾರಾಟವಾಗಿರುವ ಜುಟ್ಟನಹಳ್ಳಿ ಜಯರಾಂ ಸಾಕಿರುವ ಹಳ್ಳಿಕಾರ್ ತಳಿಯ ಜೋಡೆತ್ತು.