ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಉರಿ ಬಿಸಿಲನ್ನು ಲೆಕ್ಕಿಸದೆ ಬಿಳಿ ವರ್ಣದ ಸೀರೆ ತೊಟ್ಟು ಮಸ್ತಕದ ಮೇಲೆ ವಚನ ಪುಸ್ತಕ ಕಟ್ಟು ಹೊತ್ತು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದ ಮಾತೆಯರು.ಮೊಳಗಿದ ಬಸವೇಶ್ವರ ಮಹಾರಾಜ ಕೀ ಜೈ, ಜೈ ಬಸವೇಶ ಜಯಘೋಷಗಳು, ಬ್ಯಾಂಜೋ ಹಾಡಿಗೆ ಹೆಜ್ಜೆಹಾಕಿದ ಯುವಕ, ಯುವತಿಯರು, ಅನುಭವ ಮಂಟಪ, ಶಿವಶರಣರ ಭಾವಚಿತ್ರ ಹೊತ್ತ ವಾಹನಗಳ ಸಾಲು, ಬಸವೇಶ್ವರ, ಅಕ್ಕಮಹಾದೇವಿ ಸೇರಿದಂತೆ ಶಿವಶರಣರ ವೇಷಧಾರಿಗಳಾಗಿ ಕಂಗೊಳಿಸಿದ ಮಕ್ಕಳು...!ಇದು ಬುಧವಾರ ಜಮಖಂಡಿ ನಗರದಲ್ಲಿ ಕಂಡುಬಂದ ಬಸವ ಜಯಂತಿಯ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯಗಳು...ನಗರದ ಹೊರವಲಯದ ವಿಜಯಪುರ ರಸ್ತೆಯಲ್ಲಿರುವ ಬಸವೇಶ್ವರ ಪುತ್ಥಳಿಗೆ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಓಲೇಮಠದ ಆನಂದ ದೇವರು ಪುಷ್ಪಾರ್ಚನೆ ಮಾಡಿ ನಮಿಸಿದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳದೊಂದಿಗೆ ಮೋರೆ ಪ್ಲಾಟ್, ಸರ್ಕಾರಿ ಆಸ್ಪತ್ರೆ, ಲಕ್ಷ್ಮೀ ದೇವಸ್ಥಾನ, ಜನತಾ ಬಜಾರ್, ಕಿರಾಣಾ ಬಜಾರ್ ಮಾರ್ಗವಾಗಿ ಹನುಮಾನ ದೇವಸ್ಥಾನ, ಅರಳಿಕಟ್ಟಿ, ರಾಮದೇವ ಗಲ್ಲಿ, ಮಲ್ಲಿಕಾರ್ಜುನ್ ಗಲ್ಲಿ, ಮೂಲಕ ಮುಧೋಳ ರಸ್ತೆಗೆ ಸಾಗಿ ಓಲೇಮಠದಲ್ಲಿ ಸಂಪನ್ನಗೊಂಡಿತು.ಮೆರವಣಿಗೆಯಲ್ಲಿ ಡಾ.ಟಿ.ಪಿ. ಬಾಂಗಿ, ಎನ್.ಎಸ್. ದೇವರವರ, ನಾಗಪ್ಪ ಸನದಿ, ಕಾಡು ಮಾಳಿ, ರವಿ ಯಡಹಳ್ಳಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಸದಾಶಿವ ಮಕ್ಕೋಜಿ, ಕಾಡಪ್ಪ ದೇಸಾಯಿ, ಅಪ್ಪಾಸಾಬ ದೇವರವರ, ಶ್ರೀಶೈಲ ಗೊಂಗನವರ, ಮಲ್ಲಿಕಾರ್ಜುನ ನಿಂಗನೂರ, ಎಂ.ಬಿ. ಇಂಡಿ, ಸಿ.ಎಸ್. ಬಾಂಗಿ, ರುದ್ರಯ್ಯ ಕರಡಿ, ಮಹಾಂತೇಶ ಅಂಗಡಿ, ಅಣ್ಣಾಸಾಹೇಬ ಜಗದೇವ, ಮುದಕಪ್ಪ ಸೋಲಾಪೂರ, ಬಸವರಾಜ ಬಳಗಾರ, ಪ್ರದೀಪ ಮಹಾಲಿಂಗಪೂರಮಠ, ಎನ್.ಬಿ. ಬಿರಾದಾರ, ಕಾಡು ಗಡಾದ, ಎಸ್.ವೈ. ಪಾಟೀಲ, ಕಾಡು ಗಡಾದ, ಚಂದ್ರಶೇಖರ ಜತ್ತಿ, ದಾನಯ್ಯ ಮಠಪತಿ, ಶಂಕರ ಲಮಾಣಿ, ಸತ್ಯಪ್ಪ ವಾಜಂತ್ರಿ, ಶ್ರೀಶೈಲ ಪರೀಟ, ವಿಜಯ ಕಟಗಿ, ನಾಗರಾಜ, ಚಂದ್ರಕಾಂತ ಮೋದಿ, ಎಂ.ಡಿ. ಸಂಖ, ರಾಜೇಶ್ವರಿ ಹಿರೇಮಠ, ಸುನಿತಾ ಬಳಿಗಾರ, ಗಂಗಾ ಹಿರೇಮಠ, ರಾಜೇಶ್ವರಿ ನ್ಯಾಮಗೌಡ, ಶ್ರೀದೇವಿ ಗೊಳಸಂಗಿ, ಮಧುಮತಿ ಆಲಬಾಳ, ಶೋಭಾ ಜಕಾತಿ, ಮಹಾನಂದಾ ಪಾಯಗೊಂಡ, ಸಾವಿತ್ರಿ ಗೊರನಾಳ, ಬೌರಕ್ಕ ದೇಸಾಯಿ, ಸುವರ್ಣ ಸಬರದ, ಪ್ರೇಮಾ ಶಿಂಧೆ ಇತರರು ಇದ್ದರು.
ನಗರಸಭೆ ನಿರ್ಲಕ್ಷ್ಯ: ಮಹಾತ್ಮರ, ಮಹಾನ್ ಪುರುಷರ ಜಯಂತಿ ದಿನದಂದು ಅವರ ಪುತ್ಥಳಿ, ವೃತ್ತವನ್ನು ಸ್ವಚ್ಛಗೊಳಿಸುವುದು, ವೃತ್ತದ ಸುತ್ತ ವಿದ್ಯುತ್ ದೀಪದ ಅಲಂಕಾರ, ಹೂವಿನಿಂದ ಶೃಂಗರಿಸುವುದು ಸ್ಥಳೀಯ ಆಡಳಿತ ಜವಾಬ್ದಾರಿ. ಆದರೆ ಜಮಖಂಡಿಯಲ್ಲಿ ವಿಜಯಪುರ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿರುವ ಪುತ್ಥಳಿಯ ಸುತ್ತ ಹೂವಿನ ಅಲಂಕಾರ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಚರ್ಚೆಗೆ ಗ್ರಾಸವಾಯಿತು.ಖಂಡನೆ: ಬಸವೇಶ್ವರ ಪುತ್ಥಳಿಯ ಸುತ್ತಮುತ್ತ ಯಾವುದೇ ಹೂವಿನ ಅಲಂಕಾರ ವಿಲ್ಲದೆ ಕೇವಲ ಅವರ ಕೊರಳಿಗೆ ಹೂ ಹಾರ ಹಾಕಿ ಕೈತೊಳೆದುಕೊಂಡಿರುವ ತಾಲೂಕಾಡಳಿತ, ನಗರಸಭೆ ಕಾರ್ಯವೈಕರಿಯನ್ನು ಬಸವಕೇಂದ್ರ ತೀವ್ರವಾಗಿ ಖಂಡಿಸುತ್ತದೆ – ರವಿ ಯಡಹಳ್ಳಿ ಅಧ್ಯಕ್ಷ ಬಸವ ಕೇಂದ್ರ