ಸಾರಾಂಶ
ಹೊಸಕೋಟೆ: ವಸತಿ ರಹಿತರಿಗೆ ಸೂರು ಒದಗಿಸುವುದೇಸರ್ಕಾರದ ಮುಖ್ಯ ಧ್ಯೇಯ. ಸಮೇತನಹಳ್ಳಿಯ ವಸತಿ ರಹಿತರಿಗೆ 200 ಮನೆಗಳು ಮಂಜೂರಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ವಸತಿ ರಹಿತರಿಗೆ ಸೂರು ಒದಗಿಸುವುದೇಸರ್ಕಾರದ ಮುಖ್ಯ ಧ್ಯೇಯ. ಸಮೇತನಹಳ್ಳಿಯ ವಸತಿ ರಹಿತರಿಗೆ 200 ಮನೆಗಳು ಮಂಜೂರಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಸಮೇತನಹಳ್ಳಿ, ಬೋಧನಹೊಸಹಳ್ಳಿ, ಹೆಮ್ಮಂಡಹಳ್ಳಿ ಹಾಗೂ ಮುತ್ಕೂರು ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 50-54 ಎಸ್‌ಸಿಪಿ ಅನುದಾನದಲ್ಲಿ ಸಿಸಿ ರಸ್ತೆ, ಸಿಸಿ ಚರಂಡಿ ಅಭಿವೃದ್ಧಿ, ಲೋಕೋಪಯೋಗಿ ಇಲಾಖೆ ಅನುದಾನದಡಿ ಮುತ್ಕೂರು ಗ್ರಾಮದಿಂದ ಬೋಧನ ಹೊಸಹಳ್ಳಿಯವರಿಗೆ 2 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಬೋಧನಹೊಸಹಳ್ಳಿ ಗ್ರಾಮದಲ್ಲಿ ಆಟದ ಮೈದಾನ ನಿರ್ಮಾಣ, ರುದ್ರಭೂಮಿಯಲ್ಲಿ ಕೊರೆಯಿಸಿರುವ ಕೊಳವೆಬಾವಿಗೆ ಪಂಪ್ ಸೆಟ್ ಅಳವಡಿಕೆ ಸೇರಿದಂತೆ 10 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣಾಭಿವೃದ್ಧಿಯೇ ನನ್ನ ಮುಖ್ಯಗುರಿ, ಕೋಟ್ಯಂತರ ರೂಪಾಯಿ ಅನುದಾನ ಮಂಜೂರು ಮಾಡಿಸಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದವರ ಮನೆ ನಿರ್ಮಾಣ ಕನಸು ನನಸು ಮಾಡಿಕೊಳ್ಳಲು ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೋಧನಹೊಸಹಳ್ಳಿ ಪ್ರಕಾಶ್, ಸಮೇತನಹಳ್ಳಿ ಸೊಣ್ಣಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಸಮೇತನಹಳ್ಳಿ ಗ್ರಾಪಂ ಅಧ್ಯಕ್ಷ ಕಾಂತರಾಜು, ಅನುಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಸಂತೋಷ್‌ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ, ರಾಜ್ಯ ರೆಡ್ಡಿ ಜನ ಸಂಘದ ನಿರ್ದೇಶಕ ಎಂಎ.ಕೃಷ್ಣಾರೆಡ್ಡಿ, ಹೊಸಕೋಟೆ ಯೋಜನಾ ಪ್ರಾಧಿಕಾರದ ಸದಸ್ಯ ಕೊರಳೂರು ಸುರೇಶ್, ಮುತ್ಸಂದ್ರ ಗ್ರಾಪಂ ಪಿಡಿಒ ಮೆಹಬೂಬ್ ಪಾಷಾ, ಗ್ರಾಪಂ ಸದಸ್ಯ ಆನಂದಾಚಾರಿ, ಸಮೇತನಹಳ್ಳಿ ಗ್ರಾಪಂ ಪಿಡಿಒ ಪ್ರಸಾದ್, ಮುಖಂಡರಾದ ಕೆ.ಮಲ್ಲಸಂದ್ರ ಶೇಷಪ್ಪ, ಮುತ್ಕೂರು ಮುನಿರಾಜು ಇತರರಿದ್ದರು.ಕೋಟ್..........
ಸಮೇತನಹಳ್ಳಿ ಗ್ರಾಮಕ್ಕೆ ನೀರು ಪೂರೈಕೆಗೆ ಒಂದು ಕೋಟಿ ವೆಚ್ಚದಲ್ಲಿ ವೆಂಗಯ್ಯನ ಏತ ನೀರಾವರಿ ಯೋಜನೆ ಅಡಿಯಲ್ಲಿ 43 ಎಂ.ಎಲ್.ಡಿ ನೀರನ್ನು ಅಂದಕ್ಕನಹಳ್ಳಿ ಕೆರೆಗೆ ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಯುನೈಟೆಡ್ ವೇ ಸಂಸ್ಥೆಯ ಎನ್‌ಜಿಒ ಸಹಕಾರದಲ್ಲಿ ಅಂದಕ್ಕನ ಕೆರೆ ಹೂಳೆತ್ತಿ ಮಾದರಿ ಕೆರೆಯಾಗಿ ಅಭಿವೃದ್ಧಿ ಪಡಿಸಲಾಗಿದೆ. ಸಮೇತನಹಳ್ಳಿ ಗ್ರಾಮಕ್ಕೆ ನೀರಿನ ಕೊರತೆ ಬರದಂತೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲಾಗಿದೆ.-ಶರತ್ ಬಚ್ಚೇಗೌಡ ಶಾಸಕ
(ಒಂದು ಫೋಟೋ ಪ್ಯಾನಲ್‌ಗೆ ಬಳಸಿ, ಒಂದು ಲೀಡ್‌ಗೆ ಬಳಸಿ)ಹೊಸಕೋಟೆ ತಾಲೂಕಿನ ಮುತ್ಕೂರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು.
ಫೋಟೋ - 3 ಹೆಚ್ ಎಸ್ ಕೆ 2ಹೊಸಕೋಟೆ ತಾಲೂಕಿನ ವೆಂಗಯ್ಯ ಏತ ನೀರಾವರಿ ಯೋಜನೆ ಅಡಿಯಲ್ಲಿ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು.