ಪರಿಹಾರ ನೀಡಲು ಸರ್ಕಾರ ಬದ್ಧವಿದೆ

| Published : Oct 17 2025, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಬೆಳೆ ವಿಮೆ ಪರಿಹಾರ ನೀಡಲು ನಮ್ಮ ಸರ್ಕಾರ ಸಿದ್ದವಿದೆ. ಆದರೆ, ವಿರೋಧ ಪಕ್ಷದ ಕೆವಲರು ನಾನು ನಿಮಗೆ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿ ಮುಗ್ಧ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇವರ ಸುಳ್ಳು ಭರವಸೆಯ ಮಾತುಗಳನ್ನು ನಂಬಬೇಡಿ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಬೆಳೆ ವಿಮೆ ಪರಿಹಾರ ನೀಡಲು ನಮ್ಮ ಸರ್ಕಾರ ಸಿದ್ದವಿದೆ. ಆದರೆ, ವಿರೋಧ ಪಕ್ಷದ ಕೆವಲರು ನಾನು ನಿಮಗೆ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿ ಮುಗ್ಧ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇವರ ಸುಳ್ಳು ಭರವಸೆಯ ಮಾತುಗಳನ್ನು ನಂಬಬೇಡಿ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ತಾಲೂಕಿನ ಬಿಜ್ಜೂರ, ರಕ್ಕಸಗಿ, ಕಾರಕೂರ, ಬಂಗಾರಗುಂಡ, ಬಲದಿನ್ನಿ, ಗ್ರಾಮಗಳ ರೈತರ ಹೊಲಗಳಿಗೆ ತೆರಳಿ ಗ್ರಾಮದಲ್ಲಿನ ರೈತರಿಗೆ ಬೆಳೆ ವಿಮೆ ಪರಿಹಾರದ ಕುರಿತು ಬುಧವಾರ ತಿಳುವಳಿಕೆ ಹೇಳಿ ಮಾತನಾಡಿದ ಅವರು, ಈಗಾಗಲೇ ಹಾನಿಗೊಳಗಾದ ರೈತರಿಗೆ ಬೆಳೆ ವಿಮೆ ನೀಡಲು ವಿಮಾ ಸಂಸ್ಥೆಗೆ ಸೂಚಿಸಲಾಗಿದೆ. ಈ ಕುರಿತು ತಾಲೂಕು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸಹಯೋಗದಲ್ಲಿ ಪ್ರತಿ ರೈತರ ಹೊಲಗಳಿಗೆ ತೆರಳಿ ಸಮೀಕ್ಷೆ ನಡೆಸಿ ಯಾವ ರೈತರ ಹೊಲದಲ್ಲಿ ಯಾವ ಬೆಳೆ ಎಷ್ಟು ಪ್ರಾಣದಲ್ಲಿ ಹಾನಿ ಯಾಗಿದೆ ಎಂಬುದು ದಾಖಲೆ ಪಟ್ಟಿ ಸಿದ್ದಪಡಿಸಿ ಆಯಾ ಗ್ರಾಮ ಪಂಚಾಯಿತಿಗಳಲ್ಲಿನ ನೋಟಿಸ್ ಬೋರ್ಡಿಗೆ ಅಂಟಿಸಲಾಗುತ್ತದೆ. ವಿಮೆ ಮಾಡಿಸದೇ ಇರುವ ರೈತರು ಕೂಡ ಇದರ ಸದುಪಯೋಗಪಡಿಸಿಕೊಳ್ಳಬೇಕು. ಅಂದಾಗ ಮಾತ್ರ ಎಲ್ಲ ರೈತರಿಗೂ ನಮ್ಮ ಸರ್ಕಾರದಿಂದ ಸೂಕ್ತ ಪರಿಹಾರ ವಿತರಿಸಲು ಸಾಧ್ಯವಾಗುತ್ತದೆ ಎಂದರು. ಎಸ್ ಡಿ ಆರ್ ಎಫ್, ಎನ್ ಡಿ ಆರ್ ನ ನಿಯಮಾನುಸಾರ ಶೇ.25 ರಷ್ಟು ಪ್ರಥಮ ಹಂತದಲ್ಲಿ ಪರಿಹಾರ ವಿತರಿಸಲಾಗುತ್ತದೆ. ಬಳಿಕ ಬೆಳೆ ಹಾನಿಯ ವರದಿ ಆದಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಇದು ಕೇಂದ್ರ ಸರಕಾರ ನಿಯಮವಾಗಿದ್ದರಿಂದ ರಾಜ್ಯ ಸರಕಾರದ ಅದರ ಅಡಿಯಲ್ಲಿ ಪರಿಹಾರ ವಿತರಿಸಬೇಕಾಗುತ್ತದೆ. ಸಧ್ಯ ನಾವು ಅಧಿಕಾರದಲ್ಲದ್ದೇವೆ. ಸುಮ್ಮನೆ ಜನರಿಗೆ ಏನೂ ಗೊತ್ತಾಗುವುದಿಲ್ಲ ಎಂದು ಇಲ್ಲ ಸಲ್ಲದ ವಿಷಯಗಳನ್ನು ನಿಯಮಗಳನ್ನು ಹೇಳಿ ದಾರಿ ತಪ್ಪಿಸುವುದನ್ನು ಕೈಬಿಡಿ. ಜನರು ಇಂತಹ ಸುಳ್ಳು ಭರವಸೆ ನೀಡುವವರ ನಂಬಿ ಮೋಸ ಹೋಗಬಾರದು ಎಂದು ತಿಳಿಹೇಳಿದರು.ಈ ವೇಳೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ, ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಸೇರಿದಂತೆ ವಿವಿಧ ಅಧಿಕಾರಿಗಳು ಮುಖಂಡರು ಇದ್ದರು.ಕೋಟ್‌

ಬಿಜೆಪಿಯ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರೈತರಿಗೆ ಇಲ್ಲಸಲ್ಲದ ವಿಷಯಗಳನ್ನು ರೈತರಿಗೆ ತುಂಬಿ ಜನರ ದಾರಿ ತಪ್ಪಿಸುವ ಹುನ್ನಾರ ನಡೆಸಿದ್ದಾರೆ. ರಾಜ್ಯದಲ್ಲಿ ನಮ್ಮದೇ ಆಡಳಿತವಿದೆ. ಸರಕಾರವಿದೆ ಯಾರಿಗೆ ಎಷ್ಟು ಪ್ರಮಾಣದ ಬೆಳೆ ವಿಮೆ ಪರಿಹಾರ ಕೊಡಬೇಕು ಎಂಬುದು ನಮಗೆ ಗೊತ್ತಿದೆ. ನಾವು ಕೂಡ ರೈತರಿಗೆ ಬೆಳೆ ವಿಮೆ ಪರಿಹಾರ ಕೊಡಲು ಸಮರ್ಥರಿದ್ದೇವೆ. ಹಾಗೊಂದು ವೇಳೆ ರೈತರ ಬಗ್ಗೆ ಅಪಾರ ಕಾಳಜಿ ಇದ್ದರೆ ತಮ್ಮ ಬಿಜೆಪಿ ಎಂಪಿಗಳಿಗೆ ಹೋಗಿ ಒತ್ತಾಯಿಸಿ ಹೆಚ್ಚಿನ ಪರಿಹಾರ ಕೊಡಿಸಲಿ ಯಾರು ಬೇಡವೆಂದಿದ್ದಾರೆ.ಸಿ.ಎಸ್‌.ನಾಡಗೌಡ, ಶಾಸಕರು, ಕೆಎಸ್‌ಡಿಎಲ್‌ ಅಧ್ಯಕ್ಷರು