ಸಾರಾಂಶ
-ಮಾಜಿ ಸಚಿವ ರಾಜೂಗೌಡ ಸರ್ಕಾರದ ವಿರುದ್ಧ ಆಕ್ರೋಶ । ಇಂದು ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಕೆ
----ಕನ್ನಡಪ್ರಭ ವಾರ್ತೆ ಕೊಡೇಕಲ್
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಜಲಾಶಯಗಳಲ್ಲಿ ಕಾಲುವೆಗೆ ಹತ್ತು ದಿನಗಳ ಕಾಲ ನೀರು ಹರಿಸಲು ಒತ್ತಾಯಿಸಿ ಈಗಾಗಲೇ ಹೋರಾಟ ಮಾಡಲಾಗಿದ್ದು, ಸರ್ಕಾರ ರೈತರ ಪರ ನಿಲುವು ತೆಗೆದುಕೊಳ್ಳುತ್ತಿಲ್ಲಾ. ಅದಕ್ಕಾಗಿ ಶನಿವಾರ ಬೆಂಗಳೂರಿಗೆ ತೆರಳಿ ಸರ್ಕಾರಕ್ಕೆ ಮನವಿ ಕೊಡಲಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾದ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಹೇಳಿದ್ದಾರೆ.ಶುಕ್ರವಾರ "ಕನ್ನಡಪ್ರಭ "ದೊಂದಿಗೆ ಮಾತನಾಡಿದ ಅವರು, ನಾರಾಯಣಪುರ ಎಡದಂಡೆ ಕಾಲುವೆ ಪ್ರದೇಶದ, ಸುರಪುರ, ಶಹಾಪುರ, ವಡಗೇರಾ ರೈತರ ಹಿತ ಕಾಯಬೇಕಾಗಿದ್ದ ಈಗಿನ ಸರ್ಕಾರ, ನಿರ್ಲಕ್ಷ್ಯ ತೋರುತ್ತಿದೆ. ರುಕುಮಾಪೂರ, ಅಮ್ಮಾಪೂರ, ಸೂಗುರು, ತಿಂಥಣಿ, ಮುಷ್ಠಳ್ಳಿ, ಆಲ್ದಾಳ, ಕನ್ನೆಳ್ಳಿ, ಮುದನೂರು, ಯಡಿಯಾಪೂರ ಮಾಲಗತ್ತಿ ಭಾಗದ ಲಕ್ಷಾಂತರ ಎಕರೆ ಪ್ರದೇಶದ ರೈತರಿಗೆ ಕೊನೆಯ ಅವಧಿಯಲ್ಲಿ ಈ ಹಿಂದೆ ಹರಿಸಿದ ನೀರು ತಲುಪಿಲ್ಲ. ಹೀಗಾಗಿ ಲಕ್ಷಾಂತರ ಹಣ ಹಾಕಿದ ರೈತ ದಿಗ್ಭ್ರಾಂತನಾಗಿದ್ದಾನೆ ಎಂದರು.
ಜಲಾಶಯದಲ್ಲಿನ ಕುಡಿವ ನೀರು ಸಂಗ್ರಹದ ಮಾಹಿತಿಯಂತೆ, ಕಳೆದ ವರ್ಷದ ಜೂನ್ ತಿಂಗಳಲ್ಲಿ 6-7 ಟಿಎಮ್‌ಸಿ ನೀರು ಉಳಿಕೆಯಾಗಿತ್ತು. ಈ ಬಾರಿಯೂ ಹಾಗಾಗಬಾರದು, ಕುಡಿವ ನೀರಿಗೂ ತೊಂದರೆಯಾಗದಂತೆ, ಕೃಷಿಗೆ ಬಳಕೆಯಾಗುವಂತೆ ಏ.10ರ ವರೆಗೆ ಕಾಲುವೆಗೆ ನಿರಂತರ ನೀರು ಹರಿಸುವಂತೆ ಶನಿವಾರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ, ನೀರಾವರಿ ಮಂತ್ರಿ, ಅಬಕಾರಿ ಮಂತ್ರಿ, ಜಲಸಂಪನ್ಮೂಲ ಕಾರ್ಯದರ್ಶಿ, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೆಶಕರನ್ನು ಭೇಟಿ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.ಮಾ.14 ರಂದು ನಡೆದ ಐಸಿಸಿ ಸಭೆಯಲ್ಲಿ ಏ.1 ರಿಂದ 6 ತನಕ ನೀರು ಹರಿಸುವ ನಿರ್ಣಯವು ನಿಮ್ಮದೇ ಇದ್ದು, ಅದನ್ನು ಕೂಡ ಪಾಲನೆ ಮಾಡದೆ ಇದ್ದಲ್ಲಿ, ಐಸಿಸಿ ಮೇಲಿನ ರೈತರ ಭರವಸೆ ಹೊರಟು ಹೋಗಲಿದೆ ಎಂದರು. ಇನ್ನು ಕೆರೆ ತುಂಬುವ ಯೋಜನೆಯಂತೆ ವಿಜಯಪುರ, ಬಾಗಲಕೋಟೆ ಜಿಲ್ಲೆಯಂತೆ ನಮಗೂ ಕೂಡಾ ಅನುಕೂಲ ಮಾಡಿಕೊಡಬೇಕು. ಇಲ್ಲವೆ ತಕ್ಷಣ ಇನ್ನು ಹತ್ತು ದಿನಗಳ ಕಾಲ ನೀರು ಹರಿಸಿ, ರೈತರ ಹಿತ ಕಾಪಾಡಿ ಎಂದು ಅವರು ಒತ್ತಾಯಿಸಿದ್ದಾರೆ.
ತಾರತಮ್ಯ ನೀತಿಗೆ ಬೇಸರ: ಪ್ರತಿಬಾರಿ ನಿಗಮದ ಅಧಿಕಾರಿಗಳಾಗಲಿ ಹಾಗೆ ಸರ್ಕಾರವಾಗಲಿ ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಭಾಗದ ರೈತರಿಗೆ ಅನ್ಯಾಯ ಮಾಡುತ್ತಲೇ ಇದೆ, ಕಾರಣ ವಿಜಯಪುರ, ಬಾಗಲಕೋಟೆ ಭಾಗದ ರೈತರ ಕಬ್ಬು ಸೇರಿದಂತೆ ಇತರ ಬೆಳೆಗಳಿಗೆ ನಿಗದಿತ ನೀರಿಗಿಂತ ಹೆಚ್ಚುವರಿ ನೀರನ್ನು ನೀಡುತ್ತಲೇ ಇದೆ. ಆದರೆ, ನಮ್ಮ ಭಾಗಕ್ಕೆ ಯಾಕೆ ಮೋಸ ಮಾಡುವಂತಹ ಕೆಲಸ ಮಾಡುತ್ತಾರೆ? ಅಂದರೆ ನಮ್ಮಲ್ಲಿಯ ಶಾಸಕರಿಗೆ ರೈತರ ಬಗ್ಗೆ ಇರುವ ನಿಷ್ಕಾಳಜಿಯಿಂದ ನೀರನ್ನು ನಾವು ಪಡೆಯಲು ಸಾಧ್ಯವಾಗುತ್ತಿಲ್ಲ. ಬಾಗಲಕೋಟೆ, ಬಿಜಾಪುರ ಭಾಗದ ಜನಪ್ರತಿನಿಧಿಗಳು ಅವರು ತಮ್ಮ ರೈತರ ಒಳಿತಿಗಾಗಿ ಕೆಲಸ ಮಾಡುವುದು ತಪ್ಪೇನಿಲ್ಲ. ಆದರೆ, ನಮ್ಮಲ್ಲಿನ ಶಾಸಕರು ಸಹ ಮುತುರ್ವಜಿ ವಹಿಸಿ ನಮ್ಮಲ್ಲಿನ ಸಮಸ್ಯೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿ ರೈತರಿಗೂ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಬೇಕು. ಆದರೆ, ತರಾತುರಿಯಲ್ಲಿ ಹೇಳಿಕೆಗಳನ್ನು ನೀಡುತ್ತಾ ರೈತರಲ್ಲಿ ಗೊಂದಲವನ್ನು ಸೃಷ್ಟಸುತ್ತಿದ್ದಾರೆ ಎಂದರು.---ಬಾಕ್ಸ್:---
ರೈತರ ಹಿತ ಕಾಪಾಡಿ:ನಮ್ಮ ಸ್ಥಳೀಯ ಶಾಸಕರು ಕಾರ್ಯನಿರ್ವಹಿಸುವುದು ನೋಡಿದರೆ ನನಗ್ಯಾಕೋ ನಾವು ಮಾಡುವ ಸಂದೇಶಗಳಿಗೆ ಪ್ರತಿಕ್ರಿಯಿಸಿದಂತೆ ಕಾಣುತ್ತಿದೆ, ಕಾರಣ ಈ ಮೊದಲು ನಾವು ಮಾ.17 ರಂದು ಟ್ರ್ಯಾಕ್ಟರ್ ರ‍್ಯಾಲಿ ಮಾಡುತ್ತೇವೆ ಎಂದಾಗ ಏಕಾಏಕಿಯಾಗಿ ಐಸಿಸಿ ಸಭೆ ಮಾಡಿ ನೀರು ಹರಿಸುವುದಾಗಿ ಭರವಸೆ ನೀಡಿದ್ದೀರಿ. ಈದೀಗ ಮತ್ತೆ ನಾವು ಮಾ.26ರಂದು ರೈತ ಪರ ರ‍್ಯಾಲಿ ಹಮ್ಮಿಕೊಂಡಾಗ ಶುಕ್ರವಾರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೀರಿ. ನೀವು ಮಾಡು ಕೆಲಸ ಜನಪರ ಹಾಗೂ ರೈತರಿಗಾಗಿ ಇರಬೇಕು ಹೊರತು ನಾವು ಮಾಡುವ ಕೆಲಸಗಳಿಗೆ ಕೌಂಟರ್ ಕೊಡುವಂತಿತಬಾರದು. ನೀವು ಏನೇ ಮಾಡಿ ಒಟ್ಟಿನಲ್ಲಿ ನಮ್ಮ ರೈತರ ಜಮೀನುಗಳಿಗೆ ನೀರು ಬರುವಂತೆ ಮಾಡಿ ರೈತಾಪಿವರ್ಗದ ಹಿತಕಾಪಾಡುವ ಕೆಲಸ ಮಾಡಿದರೆ ಅದುವೇ ಮಹಾ ಕಾರ್ಯವಾಗುತ್ತದೆ ಎಂದು ಅವರು ತಿಳಿಸಿದರು.----
ಕೋಟ್ -1: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎನ್‌ಎಲ್‌ಬಿಸಿ ಭಾಗಕ್ಕೆ, ಬೇಸಿಗೆ ಹಂಗಾಮಿಗೆ ಏ.10ರ ತನಕ ನೀರು ಹರಿಸಿ, ಕೃಷ್ಣ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಅನ್ನದಾತನ ಹೆಸರಿನಿಂದ ಅಧಿಕಾರಕ್ಕ ಬಂದ ನೀವು, ಈಗ ಮಾಡುತ್ತಿರುದೇನು. ನರಸಿಂಹನಾಯಕ (ರಾಜೂಗೌಡ), ಮಾಜಿ ಸಚಿವರು, ಕೊಡೇಕಲ್.--
28ವೈಡಿಆರ್14: ಮಾಜಿ ಸಚಿವ ರಾಜೂಗೌಡ.