ಸರ್ವ ಸಮಾಜದ ಅಭಿವೃದ್ಧಿಗೆ ಸಿದ್ದು ಸರ್ಕಾರ ಶ್ರಮಿಸುತ್ತಿದೆ-ಬಣಕಾರ

| Published : Aug 26 2024, 01:38 AM IST

ಸರ್ವ ಸಮಾಜದ ಅಭಿವೃದ್ಧಿಗೆ ಸಿದ್ದು ಸರ್ಕಾರ ಶ್ರಮಿಸುತ್ತಿದೆ-ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

. ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಿಂದ 25 ಲಕ್ಷ ವೆಚ್ಚದಲ್ಲಿ ರಟ್ಟೀಹಳ್ಳಿ ಖಬರಸ್ಥಾನ ರಕ್ಷಣಾ ಗೋಡೆ ನಿರ್ಮಾಣಕ್ಕೆ ಶುಕ್ರವಾರ ಶಾಸಕ ಯು.ಬಿ. ಬಣಕಾರ ಗುದ್ದಲಿ ಪೂಜೆ ನೆರವೇರಿಸಿದರು.

ರಟ್ಟೀಹಳ್ಳಿ: ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಿಂದ 25 ಲಕ್ಷ ವೆಚ್ಚದಲ್ಲಿ ರಟ್ಟೀಹಳ್ಳಿ ಖಬರಸ್ಥಾನ ರಕ್ಷಣಾ ಗೋಡೆ ನಿರ್ಮಾಣಕ್ಕೆ ಶುಕ್ರವಾರ ಶಾಸಕ ಯು.ಬಿ. ಬಣಕಾರ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅನುಷ್ಠಾನಕ್ಕೆ ತಂದು ಸರ್ವ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ರಟ್ಟೀಹಳ್ಳಿ ಹಿರೇಕೆರೂರ ತಾಲೂಕಿನ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಎರಡು ತಾಲೂಕಿಗೆ 25ಕೋಟಿ ಅನುದಾನ ನೀಡಿದ್ದು ಅದರಲ್ಲಿ ಮುಜರಾಯಿ ಇಲಾಖೆಗೆ 72 ದೇವಸ್ಥಾನಗಳಿಗೆ 6 ಕೋಟಿ 40 ಲಕ್ಷ, ಪಿ.ಡಬ್ಲ್ಯೂಡಿ ಇಲಾಖೆಗೆ 2.ಕೋಟಿ, ನೀರಾವರಿ ಇಲಾಖೆಗೆ 2 ಕೋಟಿ, ಹಿರೇಕೆರೂಕು ಕ್ರೀಡಾಂಗಳ ಅಭಿವೃದ್ದಿಗೆ 50 ಲಕ್ಷ, ಅಲ್ಪ ಸಂಖ್ಯಾತ ಇಲಾಖೆಗೆ 4 ಕೋಟಿ, ಆರ್.ಡಿ.ಪಿ.ಆರ್ ಇಲಾಖೆಗೆ 7 ಕೋಟಿ ಸೇರಿದಂತೆ ಬಂದಂತ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡ ಒಂದುವರೆ ವರ್ಷದಲ್ಲೇ ಹಿರೇಕೆರೂರ ವಿಧಾನ ಸಭಾ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ರು. 4 ಕೋಟಿ ಅನುದಾನ ನೀಡಿದ್ದು ಅದರಲ್ಲಿ ಚಿಕ್ಕೇರೂರ ಗ್ರಾಮದ ವಾಸೀಂ ಶಾಲಿ ದರ್ಗಾದ ಮುಂದುವರಿದ ಕಾಮಗಾರಿಗೆ 40 ಲಕ್ಷ, ಹಂಸಭಾವಿ ಶಾದಿ ಮಹಲ್ ನಿರ್ಮಾಣಕ್ಕೆ ರು. 40 ಲಕ್ಷ, ಕಚವಿ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ರು. 30 ಲಕ್ಷ, ಚಿಕ್ಕೋಣತಿ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ರು. 30 ಲಕ್ಷ, ನಿಟ್ಟೂರ ಗ್ರಾಮದ ಅರಭಿ ಮದರಸಾ ನಿರ್ಮಾಣ ಹಾಗೂ ಕಾಂಪೌಂಡ ನಿರ್ಮಾಣಕ್ಕೆ ರು. 20 ಲಕ್ಷ, ಮಡ್ಲೂರ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ರು. 20 ಲಕ್ಷ, ಹಿರೇಕೆರೂರ ಶಾದಿ ಮಹಲ್ ನಿರ್ಮಾಣದ ಬಾಕಿ ಕಾಮಗಾರಿಗೆ ರು. 20 ಲಕ್ಷ, ಚಿಕ್ಕಬ್ಬಾರ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ರು.50 ಲಕ್ಷ, ಕೊಡಮಗ್ಗಿ ಗ್ರಾಮದ ರೋಷನ್ ಮಸೀದಿ ಅಭಿವೃದ್ಧಿಗೆ ರು. 20 ಲಕ್ಷ, ಹಿರೇಮಾದಾಪೂರ ಗ್ರಾಮದ ಜಾಮಾ ಮಸೀದಿ ಮದರಸಾ ನಿರ್ಮಾಣಕ್ಕೆ ರು. 20 ಲಕ್ಷ, ಕುಡಪಲಿ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ರು. 30 ಲಕ್ಷ, ಹಿರೇಮೊರಬ ಗ್ರಾಮದ ಜಾಮೀಯಾ ಮಸೀದಿ ನಿರ್ಮಾಣ ಅಭಿವೃದ್ಧಿಗೆ ರು. 20 ಲಕ್ಷ, ಪರ್ವತಸಿದ್ಗೇರಿ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ರು. 20 ಲಕ್ಷ, ಕುಡುಪಲಿ ಗ್ರಾಮದ ಚರ್ಚ ದುರಸ್ತಿ ಹಾಗೂ ಕಾಂಪೌಂಡ್‌ ನಿರ್ಮಾಣಕ್ಕೆ ರು.15 ಲಕ್ಷ, ರಟ್ಟೀಹಳ್ಳಿ ಖಬರಸ್ಥಾನ ಕಂಪೌಂಡ್ ನಿರ್ಮಾಣಕ್ಕೆ ರು. 25 ಲಕ್ಷ ಹಣವನ್ನು ಹಂಚಿಕೆ ಮಾಡಲಾಗಿದೆ ಎಂದರು.ಅಲ್ಪ ಸಂಖ್ಯಾತ ಇಲಾಖೆಯಿಂದ ಸಚಿವ ಜಮೀರ ಅಹಮ್ಮದ ಖಾನ ಅವರು 5 ಕೋಟಿ ಹಣವನ್ನುನೀಡಿದ್ದು, ರಟ್ಟೀಹಳ್ಳಿ ಹಿರೇಕೆರೂರ ಪಟ್ಟಣದಲ್ಲಿ ದಿನದ 24 ಗಂಟೆ ಕುಡಿಯುವ ನೀರಿಗಾಗಿ 1.32.ಕೋಟಿಯಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮತ್ತು ರಟ್ಟೀಹಳ್ಳಿ ಪಟ್ಟಣದಲ್ಲಿ 1 ಕೊಳವೆಬಾವಿ ಹಾಕಿಸಿ 3 ಕಡೆ ಬಟ್ಟೆ ತೊಳೆಯುವ ತೊಟ್ಟಿ ನಿರ್ಮಾಣ ಮಾಡಲಾಗುವುದು. ಅದೇ ರೀತಿ ಹಿರೇಕೆರೂರು ಪಟ್ಟಣದಲ್ಲಿ ಕಳೆದ ವರ್ಷದ ಅನುದಾನದಲ್ಲಿ 4 ಕಡೆ ನಿರ್ಮಾಣ ಮಾಡಲಾಗುವುದು, ಚಿಕ್ಕೇರೂರ, ಮಡ್ಲೂರ, ಚಿಕ್ಕೋಣ್ತಿ ಸೇರಿದಂತೆ 4 ಗ್ರಾಮಗಳಲ್ಲಿ ಕಾಲೋನಿ ಅಭಿವೃದ್ಧಿ ಪಡಿಸಲಾಗುವುದು ಉಳಿದ 15 ಗ್ರಾಮಗಳನ್ನು ಬಂದಂತ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಧರ್ಮ ಗುರುಗಳಾದ ಇದ್ರೀಸ್ ರಜಾ ಖಾಜಿ, ಅಂಜುಮನ್ ಕಮಿಟಿ ಅಧ್ಯಕ್ಷ ಮಹಮ್ಮದ ಹುಸೇನ ಖಾಜಿ, ಉಪಾಧ್ಯಕ್ಷ ಜಾವೀದ ಸೊರಬ, ನದಿಮುಲ್ಲಾ ಖಾಜಿ, ಆದೀಲ್ ಖಾಜಿ, ಶಕೀಲ್ ಮುಲ್ಲಾ, ಅಬ್ರಾರ ಖಾಜಿ, ನಾಸೀರ ಸಾಬ್ ಸೈಕಲ್ಗಾರ, ಯೂಸುಪ ಸೈಕಲ್ಗಾರ, ಜೀಯಾ ಸೈಕಲ್ಗಾರ, ಜಬೀವುಲ್ಲಾ ಖಾಜಿ, ಸಮೀರ ಶಂಕರನಹಳ್ಳಿ, ಜಾನಿ ಮುಲ್ಲಾ, ಸರ್ಪರಾಜ ಸೊರಬ, ಅಬ್ಬಾಸ ಗೋಡಿಹಾಳ, ಜಬೀವುಲ್ಲಾ ಸೈಕಲ್ಗಾರ, ಇಮ್ತಿಯಾಜ್ ಮುಂತಾದವರು ಇದ್ದರು.