ಸಂಪಗಾಂವ ಗ್ರಾಮದ ಸರ್ಕಾರಿ ಜಮೀನು ಕೂಡಾ ವಕ್ಫ್‌ ಆಸ್ತಿ!

| Published : Nov 16 2024, 12:33 AM IST

ಸಾರಾಂಶ

ಸ್ಮಶಾನ ಭೂಮಿ, ಸರ್ಕಾರಿ ಆಸ್ತಿ, ರೈತರ ಜಮೀನಿಗೆ ವಕ್ಕರಿಸಿದ ವಕ್ಫ್‌ ತಾಲೂಕಿನ ಜನತೆಯ ನಿದ್ದೆಗೆಡಿಸಿದೆ. ಸಾರ್ವಜನಿಕರು ಭಯದ ವಾತಾವರಣದಲ್ಲಿಯೇ ತಮ್ಮ ಪಹಣಿ ಪತ್ರಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ರಾಯಣ್ಣನ ಹುಟ್ಟೂರು ಸಂಗೊಳ್ಳಿ, ಮಲ್ಲಮ್ಮನ ಬೆಳವಡಿ ಸ್ಮಶಾನ ಭೂಮಿಯ ಪಹಣಿಯಲ್ಲಿ ವಕ್ಫ್‌ ದಾಖಲಾತಿಯ ನಂತರ ಈಗ ಸಂಪಗಾಂವ ಗ್ರಾಮದ ಸರ್ಕಾರಿ ಜಮೀನು ಕೂಡ ವಕ್ಫ್‌ ಆಸ್ತಿ ಎಂದು ದಾಖಲಾದ ಮಾಹಿತಿಯನ್ನು ಸಾರ್ವಜನಿಕರು ಬಹಿರಂಗಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಂಪಗಾಂವ ಗ್ರಾಮದ ರಿಸ.ನಂ. 390 ಹಿಸ್ಸಾ 3 ಇದರ 1 ಎಕರೆ 19 ಗುಂಟೆ ಕರ್ನಾಟಕ ಸರ್ಕಾರಿ ಜಮೀನಿನ ಪಹಣಿಯಲ್ಲಿ ತುಂಡು ಜಮೀನು ವಕ್ಫ್‌ ಆಸ್ತಿ ಎಂದು ನಮೂದಾಗಿದ್ದರೇ, ಅದೆ ಗ್ರಾಮದ ರಿಸ ನಂ.390 ಹಿಸ್ಸಾ 1 ಇದರ 3ಎಕರೆ 17 ಗುಂಟೆ ಕರ್ನಾಟಕ ಸರ್ಕಾರಿ ಜಮೀನು ವಕ್ಫ್‌ ಆಸ್ತಿ ಎಂದು ದಾಖಲಾಗಿದೆ. ಈ ಜಮೀನುಗಳಲ್ಲಿ ಈಗಾಗಲೇ ಕಲ್ಲಯ್ಯಜ್ಜನ ದೇವಸ್ಥಾನ ಹಾಗೂ ಗರಡಿ ಮನೆ ಇವೆ ಎಂದು ಗೊತ್ತಾಗಿದೆ. ದಿನೇ, ದಿನೇ ತಾಲೂಕಿನ ಒಂದೊಂದು ಗ್ರಾಮಕ್ಕೂ ವಕ್ಫ್ ಅಂಟಿಕೊಳ್ಳುತ್ತಿದ್ದು ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಪಗಾಂವ ಗ್ರಾಪಂ ಅಧ್ಯಕ್ಷ ಬಸವರಾಜ ಹಲಕಿ, ಸದಸ್ಯ ಮಂಜು ಸಿಡ್ಲೆಪ್ಪಗೋಳ ಮಾತನಾಡಿ, ಜನತೆ ತಮ್ಮ ಪಹಣಿ ಪರಿಶೀಲಿಸಬೇಕು ಎಂದು ಮನವಿ ಮಾಡಿ ಕೂಡಲೇ ದಾಖಲಾದ ವಕ್ಫ್‌ ಹೆಸರನ್ನು ರದ್ದುಪಡಿಸದಿದ್ದರೆ ಸಾರ್ವಜನಿಕರೊಂದಿಗೆ ಗ್ರಾಮದ ರಸ್ತೆ ತಡೆದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.