ಸಾರಾಂಶ
ಪ್ರಶಸ್ತಿ, ಸನ್ಮಾನಗಳು ಸಾಧಕರಿಗೆ ಗೌರವ ಹೆಚ್ಚಿಸುತ್ತದೆ
ಗಂಗಾವತಿ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಲೆ ಮರೆ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸುವ ಕಾರ್ಯ ಸರ್ಕಾರ ಮಾಡಬೇಕಿದೆ ಎಂದು ಸಪ್ತ ಸ್ವರ ಸಾಂಸ್ಕೃತಿಕ ಕಲಾ ಬಳಗದ ಅಧ್ಯಕ್ಷ ಶಿವಪ್ಪ ಗಾಳಿ ಹೇಳಿದರು.
ನಗರದ ಶ್ರೀಮಾತಾ ಕೊರಕೆ ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸುವ ಕಾರ್ಯ ಸಂಸ್ಥೆಗಳು ಮತ್ತು ಸರ್ಕಾರ ಮಾಡುತ್ತದೆ. ಈ ನಿಟ್ಟಿನಲ್ಲಿ ಇನ್ನು ಎಲೆಮರೆ ಕಾಯಿಯಂತೆ ಇರುವ ಪ್ರತಿಭೆ ಗುರುತಿಸಿ ಪ್ರಶಸ್ತಿ ನೀಡಿದರೆ ಸಂಘ ಸಂಸ್ಥೆಗಳಿಗೆ ಮೌಲ್ಯ ಬರುತ್ತದೆ ಎಂದರು.
ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿ, ಪ್ರಶಸ್ತಿ, ಸನ್ಮಾನಗಳು ಸಾಧಕರಿಗೆ ಗೌರವ ಹೆಚ್ಚಿಸುತ್ತದೆ ಎಂದರು.ನಗರಸಭೆ ಮಾಜಿ ಸದಸ್ಯ ಆರ್.ಕಣ್ಣನ್ ಮಾತನಾಡಿ, ಗಾಯಕರು ಇನ್ನು ಹೆಚ್ಚಿನ ರೀತಿಯಲ್ಲಿ ಸಂಗೀತಕ್ಕೆ ಆದ್ಯತೆ ನೀಡಬೇಕು ಎಂದರು.ಇದೇ ವೇಳೆ ಸಾಧಕರಾದ ವಿಜಯಲಕ್ಷ್ಮೀ, ಟಿ,ಶ್ಯಾಮಣ್ಣ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವೀರೇಶ ಪಪ್ತಿ, ಮಂಜುನಾಥ ಗೋಡನಾಳ್, ಖಾಜಾಸಾಬ್ ಮುಳ್ಳೂರ್, ಹಾಜಿ ಅಲಿ, ರುಕ್ ಮೂದ್ದಿನ್ ಸಾಬ್, ವೀರೇಶ್ ಹಿರೇಮಠ, ವಿಜಯಕುಮಾರ, ಅಂಬಿಕಾ, ಮಂಜುನಾಥ್ ಪತ್ತಾರ್, ಮಂಜುನಾಥ, ಶಂಬಣ್ಣ ದೇವರಮನಿ, ಸತ್ಯನಾರಾಯಣ, ಮುಸ್ತಾಕ್, ಶಿವಪ್ಪ ಹುಳ್ಳಿ, ವೆಂಕಟೇಶ್ ಕುರುಗೋಡು, ಅಮೀರ್ ಅಲಿ ಸೇರಿದಂತೆ ಇತರರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))