ವಾಟರ್ ಮ್ಯಾನ್ ಗಳ ವೇತನವನ್ನು ಸರ್ಕಾರವೇ ನೇರವಾಗಿ ಪಾವತಿಸಲಿ: ಚಂದ್ರಶೇಖರ್

| Published : Mar 05 2025, 12:33 AM IST

ವಾಟರ್ ಮ್ಯಾನ್ ಗಳ ವೇತನವನ್ನು ಸರ್ಕಾರವೇ ನೇರವಾಗಿ ಪಾವತಿಸಲಿ: ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರಕಳೆದ 25 ವರ್ಷಗಳಿಂದ ವಾಟರ್ ಮ್ಯಾನ್ ಗಳಾಗಿ ಕೆಲಸ ಮಾಡುತ್ತಿರುವ ತಮ್ಮನ್ನು ಸರ್ಕಾರ ಖಾಯಂ ಮಾಡದೆ ಗುತ್ತಿಗೆದಾರರ ಮೂಲಕ ಸಂಬಳ ನೀಡುತ್ತಿದೆ. ವಾಟರ್ ಮ್ಯಾನ್ ಗಳಿಗೆ ನೇರವಾಗಿ ಸಂಬಳ ನೀಡುವ ಪದ್ಧತಿ ಜಾರಿ ಯಾಗಬೇಕು ಎಂದು ತಾಲೂಕು ವಾಟರ್ ಮ್ಯಾನ್ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಸರ್ಕಾರವನ್ನು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಎದುರು ವಾಟರ್ ಮ್ಯಾನ್ ಗಳಿಂದ ಅನಿರ್ದಿಷ್ಟಾವದಿ ಮುಷ್ಕರ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಳೆದ 25 ವರ್ಷಗಳಿಂದ ವಾಟರ್ ಮ್ಯಾನ್ ಗಳಾಗಿ ಕೆಲಸ ಮಾಡುತ್ತಿರುವ ತಮ್ಮನ್ನು ಸರ್ಕಾರ ಖಾಯಂ ಮಾಡದೆ ಗುತ್ತಿಗೆದಾರರ ಮೂಲಕ ಸಂಬಳ ನೀಡುತ್ತಿದೆ. ವಾಟರ್ ಮ್ಯಾನ್ ಗಳಿಗೆ ನೇರವಾಗಿ ಸಂಬಳ ನೀಡುವ ಪದ್ಧತಿ ಜಾರಿ ಯಾಗಬೇಕು ಎಂದು ತಾಲೂಕು ವಾಟರ್ ಮ್ಯಾನ್ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಸರ್ಕಾರವನ್ನು ಆಗ್ರಹಿಸಿದರು.

ಮಂಗಳವಾರ ಪಟ್ಟಣ ಪಂಚಾಯಿತಿ ಎದುರು ವಾಟರ್ ಮ್ಯಾನ್ ಗಳು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಮಾತನಾಡಿ, ಇಂದು ರಾಜ್ಯಾದ್ಯಂತ ವಾಟರ್ ಮ್ಯಾನ್ ಗಳ ಮುಷ್ಕರ ಪ್ರಾರಂಭ ವಾಗಿದೆ. ಈಗಿನ ಪದ್ಧತಿಯಂತೆ ಸರ್ಕಾರ ಟೆಂಡರ್ ಮೂಲಕ ಗುತ್ತಿಗೆ ದಾರರಿಗೆ ನೀರಿನ ಜವಾಬ್ದಾರಿ ವಹಿಸಲಾಗುತ್ತಿದೆ. ಗುತ್ತಿಗೆ ದಾರರು ಸಮಯಕ್ಕೆ ಸರಿಯಾಗಿ ಸಂಬಳ ನೀಡುವುದಿಲ್ಲ. ಆದ್ದರಿಂದ ಪೌರ ಕಾರ್ಮಿಕರಂತೆ ನಮ್ಮನ್ನು ಖಾಯಂ ಉದ್ಯೋಗಿಗಳನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಅದು ಆಗದಿದ್ದರೆ ಗುತ್ತಿಗೆ ಕೊಡುವುದನ್ನು ಕೈ ಬಿಟ್ಟು ಪಟ್ಟಣ ಪಂಚಾಯಿತಿಯಿಂದಲೇ ನೇರವಾಗಿ ನಮಗೆ ಸಂಬಳ ಪಾವತಿ ಸುವ ಪದ್ಧತಿ ಜಾರಿಗೆ ತರಬೇಕು. ಇಂದಿನಿಂದ ಕೆಲಸ ನಿಲ್ಲಿಸಿ ಮುಷ್ಕರ ಪ್ರಾರಂಬಿಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಆಹೋ ರಾತ್ರಿ ಧರಣಿ ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಅವರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು. ಮುಷ್ಕರದಲ್ಲಿ ತಾಲೂಕು ವಾಟರ್ ಮ್ಯಾನ್ ಸಂಘದ ಅಧ್ಯಕ್ಷ ಸುರೇಶ್, ಎಲ್ಲಾ ನೀರುಗಂಟಿಗಳು ಭಾಗವಹಿಸಿದ್ದರು.