ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿವೆ. ದುಡಿಯದೇ ತಿನ್ನುವುದಕ್ಕೆ ಗಾಂಧೀಜಿ, ಶರಣರು, ಸಂತರು, ಪ್ರವಾದಿಗಳು ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ತಿಳಿಸಿದರು.
ಮುಂಡರಗಿ: ಸಂವಿಧಾನಕ್ಕೆ ತಿದ್ದುಪಡಿ ತಂದು ಪುಕ್ಕಟೆ ಕೊಡುವ ಪದ್ಧತಿಯನ್ನು ನಿಲ್ಲಿಸಿ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಅವರು, ಜ. 14ರಂದು 250ಕ್ಕೂ ಹೆಚ್ಚು ಯುವ ರೈತರು ನಮ್ಮ ಮನೆಗೆ ಬಂದು, "ನಾವು ಎಲ್ಲ ಮುಖಂಡರನ್ನು ಕೈ ಮುಗಿದು ಕೇಳಿಕೊಂಡರೂ ನಮ್ಮ ಬೆಳೆಗಳನ್ನು ಸಂಪೂರ್ಣವಾಗಿ ಬೆಂಬಲ ಬೆಲೆಗೆ ಖರೀದಿ ಮಾಡುತ್ತಿಲ್ಲ. ಕೇವಲ 50 ಕ್ವಿಂಟಲ್ ಮಾತ್ರ ಖರೀದಿ ಮಾಡುತ್ತೇವೆ ಮತ್ತು ಅದರ ಹಣವನ್ನು ಮೂರು ತಿಂಗಳ ನಂತರ ಪಾವತಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮ್ಮ ಬದುಕು ಕಂಗಾಲಾಗಿದೆ. ಇದಕ್ಕೆ ನೀವು ಏನಾದರೂ ಮಾಡುವಂತೆ ಕಣ್ಣೀರಿಟ್ಟಿದ್ದಾರೆ " ಎಂದು ತಿಳಿಸಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿವೆ. ದುಡಿಯದೇ ತಿನ್ನುವುದಕ್ಕೆ ಗಾಂಧೀಜಿ, ಶರಣರು, ಸಂತರು, ಪ್ರವಾದಿಗಳು ಒಪ್ಪುವುದಿಲ್ಲ. ಮೊರಾರ್ಜಿ ದೇಸಾಯಿ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ನಮ್ಮ ದೇಶದ ಬಂಗಾರವನ್ನು ಹೊರದೇಶದಲ್ಲಿ ಒತ್ತೆ ಇಟ್ಟು ಸರ್ಕಾರ ನಡೆಸಿದರು. ಈ ಪುಕ್ಕಟೆ ಭರವಸೆಯಿಂದ ಅಮೆರಿಕ ಮತ್ತು ಇನ್ನು ಕೆಲವು ದೇಶಗಳು ಸಂಕಷ್ಟದಲ್ಲಿ ಸಿಲುಕಿವೆ. ರೈತರ ಸಂಕಷ್ಟ ಹೀಗೆ ಮುಂದುವರಿದರೆ ದವಸ ಧಾನ್ಯಗಳ ಕೊರತೆ ಉಂಟಾಗಿ ದೇಶವೇ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಆದಷ್ಟು ಬೇಗ ಸರ್ವಪಕ್ಷದವರ ಸಭೆ ಕರೆದು ಪ್ರಧಾನಿಯವರನ್ನು ಭೇಟಿಯಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ಪುಕ್ಕಟೆ ಕೊಡುವ ಪದ್ಧತಿಯನ್ನು ನಿಲ್ಲಿಸಿ ರೈತರ ನೆರವಿಗೆ ಬರಬೇಕು. ರೈತರು ಬೆಳೆದ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಸಂಪೂರ್ಣವಾಗಿ ಖರೀದಿ ಮಾಡಬೇಕು ಮತ್ತು ಒಂದು ವಾರದೊಳಗಾಗಿ ಅವರಿಗೆ ಹಣ ಪಾವತಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.ಇಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ ಹಾಗೂ ಮಕ್ಕಳ ಸಾಹಿತಿ ತಯಬಅಲಿ ಹೊಂಬಳ ಅವರ ಮಕ್ಕಳ ಕಥಾ ಸಂಕಲನ, ಬಾರೋ ಬಾರೋ ಚಂದ್ರಮ ಹಾಗೂ ಕಾದಂಬರಿ, ಮೊದಲ ಸಹಗಮನ ಪುಸ್ತಕ ಲೋಕಾರ್ಪಣೆ ಸಮಾರಂಭ ಜ. 24ರಂದು ಸಂಜೆ 6.30ಕ್ಕೆ ನಗರದ ಕಸಾಪ ಕಾರ್ಯಾಲಯದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ನಡೆಯಲಿದೆ.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣವನ್ನು ಚಿಂತಕ ಪ್ರೊ. ಕೆ.ಎಚ್. ಬೇಲೂರ ನೆರವೇರಿಸುವರು. ಪುಸ್ತಕ ಬಿಡುಗಡೆಯನ್ನು ಕಸಾಪ ಮಾಜಿ ಅಧ್ಯಕ್ಷ ಡಾ. ಶಿವಪ್ಪ ಕುರಿ ನೆರವೇರಿಸುವರು. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸುವರು. ಕಾದಂಬರಿ ಪರಿಚಯವನ್ನು ನೀಲಮ್ಮ ಅಂಗಡಿ ಹಾಗೂ ಮಕ್ಕಳ ಕೃತಿ ಪರಿಚಯವನ್ನು ಕ್ಷಮಾ ವಸ್ತ್ರದ ಮಾಡುವರು. ಕೃತಿಕಾರರಾದ ತಯಬಅಲಿ ಹೊಂಬಳ ಉಪಸ್ಥಿತರಿರುವರು ಎಂದು ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ, ಡಿ.ಎಸ್. ಬಾಪುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.