ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಿಂದ ಆರಂಭವಾಗಿ ಮಾಡೆಲ್ ಹೌಸ್‌ಗೆ ಬೆಂಕಿ ಹಾಕಿದ್ದಾರೆ. ಈ ಸರ್ಕಾರ ಸರಿಯಾದ ರೀತಿ ಕಠಿಣ ನಿರ್ಧಾರಗಳನ್ನು ಮಾಡದೇ ಇರುವ ಕಾರಣಕ್ಕೆ ಅವರ ಪಕ್ಷದ ಬೆಂಬಲಿಗರು ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದರು. ಹರದನಹಳ್ಳಿಯಲ್ಲಿ ಮನೆ ದೇವರಾದ ಶ್ರೀ ದೇವೇಶ್ವರ ಹಾಗೂ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಶನಿವಾರ ಪೂಜೆ ಸಲ್ಲಿಸಿ ಮಾತನಾಡಿದರು. ಬಳ್ಳಾರಿಯಲ್ಲಿ ಅಕ್ರಮಗಳನ್ನು ನಡೆಸಿರುವುದು, ಅಶಾಂತಿ ವಾತಾವರಣ ನಿರ್ಮಾಣ ಮಾಡಿರುವುದು ಒಬ್ಬ ವ್ಯಕ್ತಿಯ ಮರಣಕ್ಕೂ ಕಾರಣವಾಗಿದೆ. ಬ್ಯಾನರ್ ಗಲಾಟೆ ನಡೆದ ದಿನದಿಂದ ಇಲ್ಲಿಯವರೆಗೂ ಸರ್ಕಾರ ರಕ್ಷಣೆ ಕೊಡುತ್ತಾ ಬಂದಿದ್ದಾರೆ ಮತ್ತು ಇದೆಲ್ಲವನ್ನೂ ಮುಚ್ಚಿ ಹಾಕಲು ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಉಪಯೋಗ ಮಾಡಿಕೊಂಡಿದೆ ಮತ್ತು ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಿಂದ ಆರಂಭವಾಗಿ ಮಾಡೆಲ್ ಹೌಸ್‌ಗೆ ಬೆಂಕಿ ಹಾಕಿದ್ದಾರೆ. ಈ ಸರ್ಕಾರ ಸರಿಯಾದ ರೀತಿ ಕಠಿಣ ನಿರ್ಧಾರಗಳನ್ನು ಮಾಡದೇ ಇರುವ ಕಾರಣಕ್ಕೆ ಅವರ ಪಕ್ಷದ ಬೆಂಬಲಿಗರು ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಇವರು ಪ್ರೇರಣೆ ಕೊಟ್ಟರೆ ಬಳ್ಳಾರಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಆಗಬಹುದು. ಹಾಗಾಗಿ ಅಶಾಂತಿಗೆ ಅವಕಾಶ ಕೊಡಬಾರದು ಎಂದು ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ ಸಲಹೆ ನೀಡಿದರು.ತಾಲೂಕಿನ ಹರದನಹಳ್ಳಿಯಲ್ಲಿ ಮನೆ ದೇವರಾದ ಶ್ರೀ ದೇವೇಶ್ವರ ಹಾಗೂ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಶನಿವಾರ ಪೂಜೆ ಸಲ್ಲಿಸಿ ಮಾತನಾಡಿದರು. ಬಳ್ಳಾರಿಯಲ್ಲಿ ಅಕ್ರಮಗಳನ್ನು ನಡೆಸಿರುವುದು, ಅಶಾಂತಿ ವಾತಾವರಣ ನಿರ್ಮಾಣ ಮಾಡಿರುವುದು ಒಬ್ಬ ವ್ಯಕ್ತಿಯ ಮರಣಕ್ಕೂ ಕಾರಣವಾಗಿದೆ. ಬ್ಯಾನರ್ ಗಲಾಟೆ ನಡೆದ ದಿನದಿಂದ ಇಲ್ಲಿಯವರೆಗೂ ಸರ್ಕಾರ ರಕ್ಷಣೆ ಕೊಡುತ್ತಾ ಬಂದಿದ್ದಾರೆ ಮತ್ತು ಇದೆಲ್ಲವನ್ನೂ ಮುಚ್ಚಿ ಹಾಕಲು ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಉಪಯೋಗ ಮಾಡಿಕೊಂಡಿದೆ ಮತ್ತು ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೈತರಿಂದ ಬೆಳೆದ ಪಕ್ಷದ ನಾಶ ಸಾಧ್ಯವೇ ಇಲ್ಲ: ಜೆಡಿಎಸ್ ನಾಶ ಮಾಡಿದ್ದೇವೆ ಎನ್ನುವ ನಮ್ಮ ವಿರೋಧಿಗಳ ದುರಹಂಕಾರದ ಮಾತು ಇದೆ ಮತ್ತು ಈ ಪಕ್ಷ ನಾಶ ಆಗಬೇಕು ಎನ್ನೋದು ಅವರ ಪ್ರಯತ್ನ. ಆದರೆ ರೈತರಿಂದ ಬೆಳೆದ ಪಕ್ಷದ ನಾಶ ಸಾಧ್ಯವೇ ಇಲ್ಲ ಎಂದು ಎಚ್ಚರಿಸಿ, ಇದು ಅನಾಗರಿಕ ಸರ್ಕಾರ ಮಾನವೀಯತೆಯೇ ಇಲ್ಲದ ಸರ್ಕಾರ. ಇಂತಹ ಭ್ರ? ಸರ್ಕಾರ ತೆಗೆಯಬೇಕು ಎನ್ನೋದು ನಮ್ಮ ಉದ್ದೇಶ ಎಂದರು. ದೇವೇಗೌಡರ ನೇತೃತ್ವದಲ್ಲಿ ಜನತಾ ಪಕ್ಷ ಶುರುವಾಗಿ ಜನತಾದಳವಾಗಿ ನಂತರ ನಾಯಕರ ಬಿನ್ನಾಭಿಪ್ರಾಯದಿಂದ ೧೯೯೯ರಲ್ಲಿ ಭಾಗ ಆಗಿತ್ತು. ಈಗ ಜೆಡಿಎಸ್‌ಗೆ ೨೫ ವರ್ಷ ಆಗಿದೆ, ಬೆಳ್ಳಿ ಹಬ್ಬದ ಆಚರಣೆಯನ್ನ ಅವರ ಜನ್ಮ ಭೂಮಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಮತ್ತು ಮತ್ತೆ ಜೆಡಿಎಸ್ ಸದೃಢ ಮಾಡಲು ಈ ಸಮಾವೇಶ ಮಾಡಲಾಗುತ್ತಿದೆ ಎಂದರು.ರಾಜ್ಯ ರಾಜಕೀಯಕ್ಕೆ ಬರುವುದು ನನ್ನ ಕೈಲ್ಲಿಲ್ಲ: ನಾನು ರಾಜಕಾರಣಕ್ಕೆ ಬರಬೇಕೆಂದು ಆಸೆ ಪಟ್ಟವನಲ್ಲ ಮತ್ತು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವನು ಹಾಗೂ ಆಕಸ್ಮಿಕವಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಪರ ಕೆಲಸ ಮಾಡಿದ್ದೇನೆ. ಆದರೆ ನನ್ನ ದೂರದೃಷ್ಟಿಯ ಚಿಂತನೆಗಳು, ದೇವೇಗೌಡರ ಕಾರ್ಯಕ್ರಮಗಳನ್ನು ಸಂಪೂರ್ಣಗೊಳಿಸಲು ಆಗಲಿಲ್ಲ. ದೇವೇಗೌಡರು ಸುದೀರ್ಘವಾದ ರಾಜಕಾರಣದಲ್ಲಿದ್ದರು. ಆದರೆ ಅಧಿಕಾರದಲ್ಲಿದ್ದು ರೈತರ ಬದುಕನ್ನು ಹಸನುಗೊಳಿಸುವ ಕನಸಿತ್ತು. ಅದನ್ನು ಸಂಪೂರ್ಣಗೊಳಿಸಲು ಆಗಲಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಪಾತ್ರ ನಿರ್ವಹಣೆ ಮಾಡುವುದು ನನ್ನ ಜವಾಬ್ದಾರಿ ಇದೆ. ನಮ್ಮದು ಸಂಪದ್ಭರಿತವಾದ ರಾಜ್ಯ, ಹಲವಾರು ರೀತಿಯ ದುರುಪಯೋಗಗಳು ನಡೆಯುತ್ತಿದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಿ ಇಡೀ ರಾಜ್ಯದ ಕುಟುಂಬಗಳಿಗೆ ನೆಮ್ಮದಿ ತರಲು ಜನಪರವಾದ ಸರ್ಕಾರ ತರಬೇಕೆಂಬ ದೃಷ್ಟಿಯಿಂದ ಕರ್ನಾಟಕದಲ್ಲಿ ಹೆಚ್ಚಿನ ಸಮಯವನ್ನು ಕರ್ನಾಟಕದಲ್ಲಿ ಮೀಸಲಿಡುತ್ತೇನೆ ಎಂದರು. ರಾಜ್ಯ ರಾಜಕೀಯಕ್ಕೆ ಬರುವುದು ನನ್ನ ಕೈಯಲ್ಲಿ ಇಲ್ಲ, ಭಗವಂತನ ಹಾಗೂ ಜನತೆಯ ಇಚ್ಛೆ. ಜನತೆ ಏನು ಬಯಸುತ್ತಾರೆ ಅದಕ್ಕೆ ತಲೆ ಬಾಗುತ್ತೇನೆಂದು ಪರೋಕ್ಷವಾಗಿ ರಾಜ್ಯ ರಾಜಕೀಯಕ್ಕೆ ಬರುವ ಸೂಚನೆಯನ್ನು ಕೊಟ್ಟರು.=====
ಫೋಟೋ.........24ಎಚ್ಎಸ್ಎನ್11 : ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿರುವುದು.