ಕರಿಗಲ್ ಬೀದಿಯಲ್ಲಿರುವ ಗ್ರಾಮದೇವತೆ ಶ್ರೀಅಂತರಘಟ್ಟಮ್ಮ ದೇವಿಯ ರಥೋತ್ಸವ ಮಾಘ ಮಾಸದ ಹುಣ್ಣಿಮೆಯ ಮೊದಲ ಮಂಗಳವಾರ ಶ್ರದ್ಧಾಭಕ್ತಿ, ಸಡಗರ ಹಾಗೂ ವೈಭವದಿಂದ ಜರುಗಿತು. ಜ.25ರಂದು ಭಾನುವಾರದಿಂದಲೇ ಅಮ್ಮನವರಿಗೆ ನಿತ್ಯವೂ ಶ್ರೀಮದ್ಭಗವತ್ ಪೂಜಾ ಕೈಂಕರ್ಯಗಳು ನಡೆದವು. ಸಂಜೆ ದ್ವಜಾರೋಹಣೆ, ತವರು ಮನೆಯಲ್ಲಿ ಕಂಕಣಧಾರಣೆ ಸೇವೆ ಸಲ್ಲಿಸಿ ಜ.26 ಸೋಮವಾರ ಗಣಂಗಳ ಸೇವೆ, ರಾತ್ರಿ ದುಗ್ಗಳ ಸೇವೆ, ಬ್ರಹ್ಮರಥೋರೋಹಣ ನಡೆಸಲಾಗಿತ್ತು.
ಬೀರೂರು: ಕರಿಗಲ್ ಬೀದಿಯಲ್ಲಿರುವ ಗ್ರಾಮದೇವತೆ ಶ್ರೀಅಂತರಘಟ್ಟಮ್ಮ ದೇವಿಯ ರಥೋತ್ಸವ ಮಾಘ ಮಾಸದ ಹುಣ್ಣಿಮೆಯ ಮೊದಲ ಮಂಗಳವಾರ ಶ್ರದ್ಧಾಭಕ್ತಿ, ಸಡಗರ ಹಾಗೂ ವೈಭವದಿಂದ ಜರುಗಿತು. ಜ.25ರಂದು ಭಾನುವಾರದಿಂದಲೇ ಅಮ್ಮನವರಿಗೆ ನಿತ್ಯವೂ ಶ್ರೀಮದ್ಭಗವತ್ ಪೂಜಾ ಕೈಂಕರ್ಯಗಳು ನಡೆದವು. ಸಂಜೆ ದ್ವಜಾರೋಹಣೆ, ತವರು ಮನೆಯಲ್ಲಿ ಕಂಕಣಧಾರಣೆ ಸೇವೆ ಸಲ್ಲಿಸಿ ಜ.26 ಸೋಮವಾರ ಗಣಂಗಳ ಸೇವೆ, ರಾತ್ರಿ ದುಗ್ಗಳ ಸೇವೆ, ಬ್ರಹ್ಮರಥೋರೋಹಣ ನಡೆಸಲಾಗಿತ್ತು.
ಮಂಗಳವಾರ ಬೆಳಿಗ್ಗೆ ವಿಶೇಷ ಪೂಜೆ, ಬೇವಿನಸೇವೆ ಉತ್ಸವ ನಡೆದು ಅಪರಾಹ್ನ ಪುಷ್ಪಲಾಂಕೃತ ರಥದಲ್ಲಿ ಶ್ರೀ ಅಂತರಘಟ್ಟಮ್ಮ ದೇವಿಯನ್ನು ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಯನ್ನು ಸಲ್ಲಿಸಲಾಯಿತು. ನಂತರ ರಥವನ್ನು ಮಂಗಳವಾದ್ಯ, ವೇದಘೋಷ ಮತ್ತು ಸೋಮನ ಕುಣಿತದೊಂದಿಗೆ ಹಳೇಪೇಟೆ ಆಂಜನೇಯ ದೇವಾಲಯದವರೆಗೆ ಎಳೆದು ತರಲಾಯಿತು.ಹಿಂದೆಯೇ ಶೃಂಗಾರದೊಂದಿಗೆ ಸಾಗುತ್ತಿದ್ದ 68ಕ್ಕೂ ಹೆಚ್ಚಿನ ಜೋಡೆತ್ತುಗಳ ಪಾನಕದ ಬಂಡಿಗಳ ಮೆರವಣಿಗೆ ಅಮ್ಮನವರ ರಥ ಓರೆಯಾಗಿ ಸ್ಥಗಿತಗೊಂಡ ನಂತರ ಪಾನಕದ ಬಂಡಿಗಳ ಓಟ ಸಾಗಿ ಮಹಾನವಮಿ ಬಯಲಿನಲ್ಲಿ ನೆರೆದಿದ್ದ ಭಕ್ತವೃಂದಕ್ಕೆ ಪಾನಕವನ್ನು ವಿತರಿಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯ ಜನಸಾಗರ ರಥದ ಮೇಲೆ ಬಾಳೆಯ ಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.
ಬಳಿಕ ರಥವನ್ನು ಹಳೆಪೇಟೆಯಿಂದಾ ಶಿವಾಜಿನಗರದ ಆಲದಮರದವರೆಗೂ ಸಾಗಿಸಿ ವಾಪಸು ದೇವಾಲಯಕ್ಕೆ ಕರೆತರಲಾಯಿತು.ಪಾನಕದ ಬಂಡಿಯ ಓಟದಲ್ಲಿ ಸುಮಾರು 68 ಗಾಡಿಗಳು ಪಾಲ್ಗೊಂಡಿದ್ದವು. ರಸ್ತೆಯ ಬದಿಯಲ್ಲಿ ನಿಂತು ನೋಡಬೇಕಾದ ಜನ ಸೂಕ್ತ ಬಂದೊಬಸ್ತು ಇದ್ದರು. ರಸ್ತೆಗೆ ಬಂದು ಅವರನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡಬೇಕಾಯಿತು.
ಬೀರೂರು ವೃತ್ತ ನಿರೀಕ್ಷಕ ಶ್ರೀಕಾಂತ್ ಮತ್ತು ಪಿಎಸ್‌ಐ ಡಿ.ವಿ.ತಿಪ್ಪೇಶ್ ಮತ್ತು ಸಿಬ್ಬಂದಿ ವರ್ಗ ಪಾನಕದ ಬಂಡಿ ಓಟಕ್ಕೆ ಸೂಕ್ತ ಬಂದೋಬಸ್ತ್ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯನಿರ್ವಹಿಸಿದರು.ಬುಧವಾರ ಅಮ್ಮನವರಿಗೆ ಓಕುಳಿ ಉತ್ಸವ, ಮುಖಾರ್ಚನೆ, ಸಂಜೆ ಪುಷ್ಪಮಂಟಪದಲ್ಲಿ ಶ್ರೀ ಅಮ್ಮನವರನ್ನು ಊರಿನ ರಾಜಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಉತ್ಸವ ನಡೆಸಲಾಯಿತು. ದೇವಸ್ಥಾನದ ಗುಡಿಕಟ್ಟಿನ ಗೌಡರು, ಪಟ್ಟಣದ ಹಿರಿಯ ಮುಖಂಡರು, ಗ್ರಾಮದೇವತೆ ಒಕ್ಕಲಿನ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಪರಾಕಾಷ್ಠೆ ಮೆರೆದರು.
ಜಾತ್ರೆಯಲ್ಲಿ ಗಾಡಿ ಬಡಿದು ಒಬ್ಬರಿಗೆ ಗಾಯಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.ಮೊದಲು ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ. ತೇರಿಗೆ ಡಿಕ್ಕಿಯೊಡೆದೊಡನೆ ಎತ್ತು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿತ್ತು. ಅರ್ಧ ಗಂಟೆ ಬಳಿಕ ಎತ್ತನ್ನು ಸಂತೈಸಿ ಮತ್ತೆ ಪಾನಕದ ಬಂಡಿ ಹೊರಟಿತು.
ಇನ್ನೂ ಜನ ಎತ್ತುಗಳನ್ನು ಬೆದುರಿಸುವುದರಿಂದ ರಾಸುಗಳು ಬೇಕಾಬಿಟ್ಟಿ ಓಡಾಡಿದವು. ಎತ್ತಿನ ಗಾಡಿ ಬಡಿದು ಬೀರೂರು ಪಟ್ಟಣದ ಚಂದ್ರಶೇಖರ್ ಕಾಲು ಮುರಿದು ಕೊಂಡಿದ್ದಾರೆ. ಚಂದ್ರಶೇಖರ್ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.ತೇರಿಗೆ ಎತ್ತಿನಗಾಡಿಯೂ ಡಿಕ್ಕಿಯೊಡೆದು ಎತ್ತುಗಳಿಗೂ ಸಂಕಷ್ಟವಾಗಿತ್ತು. ಬ್ಯಾರಿಕೇಡ್ ಇದ್ದರೂ ದಾಟಿ ಮುಂದೆ ಬಂದು ಜನ ಎತ್ತುಗಳನ್ನು ಬೆದರಿಸುತ್ತಾರೆ. ಜನರ ಕೂಗಾಟ ಕಂಡು ಗಾಬರಿಯಾಗಿ ಮನಸ್ಸೋ ಇಚ್ಛೆ ರಾಸುಗಳು ಓಡಿ ಈ ಘಟನೆ ಸಂಭವಿಸಿದೆ.