70 ವರ್ಷ ಆಳಿದರೂ ದೇಶ ಅಭಿವೃದ್ಧಿ ಮಾಡದ ಕೈ

| Published : Mar 18 2024, 01:51 AM IST

ಸಾರಾಂಶ

ಇಲ್ಲಿಗೆ ನನ್ನ ರಾಜಕಾರಣ ಮುಗಿದಿಲ್ಲ. ನಿಮ್ಮೆಲ್ಲರ ಆಶೀರ್ವಾದ ಇರುವ ತನಕ ನಾನು ರಾಜಕಾರಣದಲ್ಲಿಯೇ ಇರುವೆ. ನನ್ನದೊಂದು ಗುರಿ ಇದೆ. ಅದನ್ನು ತಲುಪಲು ಹಿಂದೆ ಗುರು ಇದ್ದಾರೆ. ಅದನ್ನು ನಾನು ಸಾಯುವುದರೊಳಗಾಗಿ ಗುರಿ ತಲುಪಿಯೇ ತೀರುತ್ತೇನೆ ಎಂದು ಸಂಸದ ಹಾಗೂ ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಇಲ್ಲಿಗೆ ನನ್ನ ರಾಜಕಾರಣ ಮುಗಿದಿಲ್ಲ. ನಿಮ್ಮೆಲ್ಲರ ಆಶೀರ್ವಾದ ಇರುವ ತನಕ ನಾನು ರಾಜಕಾರಣದಲ್ಲಿಯೇ ಇರುವೆ. ನನ್ನದೊಂದು ಗುರಿ ಇದೆ. ಅದನ್ನು ತಲುಪಲು ಹಿಂದೆ ಗುರು ಇದ್ದಾರೆ. ಅದನ್ನು ನಾನು ಸಾಯುವುದರೊಳಗಾಗಿ ಗುರಿ ತಲುಪಿಯೇ ತೀರುತ್ತೇನೆ ಎಂದು ಸಂಸದ ಹಾಗೂ ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.

ಅವರು ಭಾನುವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಳ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲದ ವತಿಯಿಂದ ಹಮ್ಮಿಕೊಂಡ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿಯಂತೆ ಹಿಂದಿನ ಕಾಂಗ್ರೆಸ್‌ ಸರ್ಕಾರ 70 ವರ್ಷ ಆಡಳಿತ ನಡೆಸಿದಾಗ ದೇಶದಲ್ಲಿ ಅಭಿವೃದ್ಧಿ ಮಾಡಿದ್ದರೆ ಊಹಿಸಿಕೊಳ್ಳಲು ಸಾಧ್ಯವಾಗದಂತ ಅಭಿವೃದ್ಧಿ ದೇಶದಲ್ಲಿ ಆಗುತ್ತಿತ್ತು. ಆದರೆ ಕಾಂಗ್ರೆಸ್ಸಿನವರು 70 ವರ್ಷ ದೇಶವನ್ನು ಆಳಿದ್ದಾರೆ ಹೊರತು ಅಭಿವೃದ್ಧಿ ಮಾಡಿರುವುದಿಲ್ಲ. ಕೇವಲ 10 ವರ್ಷದಲ್ಲಿ ಮೋದಿ ಅವರು ಪ್ರಧಾನಿ ಅವರು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತ ಅಭಿವೃದ್ಧಿಯತ್ತ ದೇಶ ಕೊಂಡೊಯ್ದಿದ್ದಾರೆ ಎಂದರು.

25 ವರ್ಷ ಸಂಸದರಾಗಿ ಸಂಸತ್ತಿನಲ್ಲಿ ಒಂದು ಪ್ರಶ್ನೆ ಕೇಳಿರುವುದಿಲ್ಲ ಎಂದು ಕೇಲವರು ಹೇಳುತ್ತಿದ್ದು, ಕ್ಷೇತ್ರದ ವಿಷಯಕ್ಕಾಗಿಯೇ ಹಾಗೂ ಅಭಿವೃದ್ಧಿಗಾಗಿಯೇ ಸಂಸತ ಸದನದಲ್ಲಿ ಪ್ರಶ್ನೆ ಕೇಳಬೇಕು. ಆದರೆ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಪ್ರಧಾನಿ ಹಾಗೂ ಕೇಂದ್ರದ ಇತರೇ ಸಚಿವರಿಗೆ ಪತ್ರ ಬರೆದಾಗ ಪತ್ರಕ್ಕೆ ಮಾನ್ಯತೆ ನೀಡಿ ಎಲ್ಲ ಯೋಜನೆಗಳು ಮಂಜೂರು ಮಾಡಿ ಅನುದಾನ ನೀಡಿದಾಗ ಸಂಸತ್‌ ಸಭೆಯಲ್ಲಿ ಪ್ರಶ್ನೆ ಮಾಡುವ ವ್ಯವದಾನವೇ ಬರುವುದಿಲ್ಲ. ಹೀಗಾಗಿ ನಾನು ಪ್ರಶ್ನೆ ಕೇಳುವ ಗೋಜಿಗೆ ಹೋಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂಡಿ ತಾಲೂಕಿನ ಹಿರಿಯರ ಪುಣ್ಯದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ದಲಿತ ಸಮಾಜದ ಬಡ ಕುಟುಂಬದ ನನ್ನನ್ನು ಅಂಗೈಯಲ್ಲಿ ಹಿಡಿದು ರಾಜಕಾರಣದಲ್ಲಿ ಬೆಳೆಸಿದ್ದಾರೆ. ಹಿಂದಿನ ಹಿರಿಯ ಆಶೀರ್ವಾದ ನಾನೆಂದು ಮರೆಯುವುದಿಲ್ಲ. ಭಗವಂತ ಸಾಕ್ಷಿಯಾಗಿ ಹೇಳುತ್ತೇನೆ.ಇತಿಸಹಾಸ ಸೃಷ್ಠಿ ಮಾಡಿಯೇ ತೀರುತ್ತೇನೆ ಎಂದು ಹೇಳಿದರು.

ಇಡೀ ದೇಶದ ರೈತರ ಪರವಾಗಿ ಪ್ರಧಾನಿ ಮೋದಿ,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಹಾಗೂ ರೀಜರ್ವ್‌ ಬ್ಯಾಂಕಿನ ಅಧ್ಯಕ್ಷ ಇವರೆಲ್ಲರಿಗೆ ರೈತರ ಪರವಾಗಿ ಪತ್ರ ಬರೆದಿದ್ದೇನೆ. ರೈತರು ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡ ಮೇಲೆ ಕಡಬಾಕಿದಾರ ಆದನಂತರ ಒಂದು ಟೈಮ್‌ ಸೆಟ್ಲಮೆಂಟ್‌ ಎಂದು ಬ್ಯಾಂಕಿನವರು ರೈತರ ಮನೆಗೆ ಬಂದು ಸಾಲ ತುಂಬಿಸಿಕೊಂಡು, ನಂತರ 10 ವರ್ಷಗಳ ವರೆಗೆ ರೈತರಿಗೆ ಬ್ಯಾಂಕಿನಿಂದ ಸಾಲ ನೀಡುವುದಿಲ್ಲ. ಇದು ರೈತರಿಗೆ ಮಾಡುವ ಅನ್ಯಾಯವಾಗುತ್ತದೆ. ಇದನ್ನು ಸರಿಪಡಿಸಬೇಕು. ಒಂದು ಟೈಮ್‌ ಸೆಟ್ಲಮೆಂಟ್‌ ಮಾಡಿ ಸಾಲ ತುಂಬಿದ ರೈತರಿಗೂ ಮತ್ತೆ ಸಾಲ ನೀಡಬೇಕು ಎಂದು ಮನವಿ ಮಾಡಿಕೊಂಡು ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಮಾಜಿ ಎಂಎಲ್ಸಿ ಅರುಣ ಶಹಾಪೂರ ಮಾತನಾಡಿ, ರಮೇಶ ಜಿಗಜಿಣಗಿ ಅವರು ಸಂಸದರಾಗದಿದ್ದರೆ ವಿಜಯಪುರಕ್ಕೆ ಎನ್‌ಟಿಪಿಸಿ ಬರುತ್ತಿರಲಿಲ್ಲ. ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ.ಈ ಬಾರಿಯೂ ಅವರ ಗೆಲುವು ನಿಶ್ಚೀತ ಎಂದು ಹೇಳಿದರು.

ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ,ಅಶೋಕ ಅಲ್ಲಾಪೂರ, ಕಾಸುಗೌಡ ಬಿರಾದಾರ ಮಾತನಾಡಿದರು. ಶೀಲವಂತ ಉಮರಾಣಿ, ಚಂದ್ರಶೇಖರ ಕವಟಗಿ, ಮಲ್ಲುಗೌಡ ಬಿರಾದಾರ, ಬಿ.ಎಸ್‌.ಪಾಟೀಲ, ಶ್ರೀಪತಿಗೌಡ ಬಿರಾದಾರ, ವೆಂಕಟೇಶ ಕುಲಕರ್ಣಿ, ಸಿದ್ದಲಿಂಗ ಹಂಜಗಿ, ಹಣಮಂತ್ರಾಯಗೌಡ ಪಾಟೀಲ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ,ರಾಜಕುಮಾರ ಸಗಾಯಿ, ಮಳ್ಳುಗೌಡ ಪಾಟೀಲ, ಶ್ರೀಕಾಂತ ದೇವರ, ಎಸ್‌.ಎ.ಪಾಟೀಲ, ವಿ.ಎಚ್‌.ಬಿರಾದಾರ ಮೊದಲಾದವರು ವೇದಿಕೆ ಮೇಲೆ ಇದ್ದರು.

ರಾಚು ಬಡಿಗೇರ, ಮಹೇಶ ಹೂಗಾರ, ರವಿ ವಗ್ಗೆ,ಶಾಂತು ಕಂಬಾರ, ಪ್ರಶಾಂತ ಲಾಳಸಂಗಿ, ಅಶೋಕ ಅಕಲಾದಿ, ಅಶೋಕಗೌಡ ಬಿರಾದಾರ, ರಾಮಸಿಂಗ ಕನ್ನೊಳ್ಳಿ, ಸಂತೋಷಗೌಡ ಪಾಟೀಲ, ಸೋಮು ನಿಂಬರಗಿಮಠ, ರಮೇಶ ಧರೆನವರ, ಶಿವು ಬಗಲಿ, ದತ್ತಾ ಬಂಡೇನವರ, ಶ್ರೀನಿವಾಸ ಕಂದಗಲ್ಲ, ಶ್ರೀಮಂಗ ಮೊಗಲಾಯಿ,ಅಪ್ಪುಗೌಡ ಪಾಟೀಲ, ಮಹಾದೇವ ಗುಡ್ಡೊಡಗಿ, ವಿಜಯ ಮಾನೆ,ಧರ್ಮು ಮದರಖಂಡಿ, ಸುನಂದಾ ಗಿರಣಿವಡ್ಡರ, ಮಹಾದೇವಿ ಗುಡ್ಡೊಡಗಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.