ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಪ್ರತೀಕ: ಮಂಜುನಾಥ ಮಾಗಡಿ

| Published : Oct 25 2025, 01:00 AM IST

ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಪ್ರತೀಕ: ಮಂಜುನಾಥ ಮಾಗಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಕೀರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮನಿಗೆ ಸಲ್ಲುತ್ತದೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ವೀರಮರಣವನ್ನು ಹೊಂದಿದರು. ಅವರ ಧೈರ್ಯ, ಸಾಹಸ, ಇಂದಿಗೂ ಆದರ್ಶವಾಗಿದ್ದು, ಅವರ ನಡೆ ನುಡಿ ದೇಶಪ್ರೇಮ ಎಲ್ಲರಲ್ಲಿಯೂ ಬರಬೇಕು.

ಲಕ್ಷ್ಮೇಶ್ವರ: ಕನ್ನಡ ನಾಡಿನ ವೀರವನಿತೆಯಾಗಿ ತನ್ನ ಅಪ್ರತಿಮ ಸಾಹಸ ಮತ್ತು ಶೌರ್ಯಗಳಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಮೆರೆದ ಧೈರ್ಯ ಇಂದಿಗೂ ಮಾದರಿಯಾಗಿದ್ದು, ರಾಣಿ ಚೆನ್ನಮ್ಮ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕರಾಗಿದ್ದಾರೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಅಭಿಪ್ರಾಯಪಟ್ಟರು.

ಗುರುವಾರ ಪಟ್ಟಣದ ಹಳೆ ಬಸ್‌ ನಿಲ್ದಾಣದ ಹತ್ತಿರವಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಬಳಿ ವೀರಶೈವ ಪಂಚಮಸಾಲಿ ಸಂಘ ಮತ್ತು ವಿವಿಧ ಸಂಘಟನೆಗಳಿಂದ ಚೆನ್ನಮ್ಮನ ೨೦೧ನೇ ವಿಜಯೋತ್ಸವ ಹಾಗೂ ೨೪೭ನೇ ಜಯಂತಿ ಕಾರ್ಯಕ್ರಮದಲ್ಲಿ ಚೆನ್ನಮ್ಮನ ಮೂರ್ತಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸ್ವಾತಂತ್ರ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಕೀರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮನಿಗೆ ಸಲ್ಲುತ್ತದೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ವೀರಮರಣವನ್ನು ಹೊಂದಿದರು. ಅವರ ಧೈರ್ಯ, ಸಾಹಸ, ಇಂದಿಗೂ ಆದರ್ಶವಾಗಿದ್ದು, ಅವರ ನಡೆ ನುಡಿ ದೇಶಪ್ರೇಮ ಎಲ್ಲರಲ್ಲಿಯೂ ಬರಬೇಕು ಎಂದರು.ನಾಗರಾಜ ಚಿಂಚಲಿ, ಬಸವರಾಜ ಅರಳಿ, ನೀಲಪ್ಪ ಕರ್ಜೆಕಣ್ಣವರ, ಪ್ರವೀಣ ಬಾಳಿಕಾಯಿ ಮಾತನಾಡಿ, ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಸ್ತ್ರೀಶಕ್ತಿ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದು, ಸ್ವಾತಂತ್ರದ ಕಹಳೆಯೂದಿ ಬ್ರಿಟಿಷರ ಸೊಕ್ಕಡಗಿಸಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಗುರುಪ್ಪ ಮುಳಗುಂದ, ಶಿವನಗೌಡ್ರ ಅಡರಕಟ್ಟಿ, ಶಿವಜೋಗೆಪ್ಪ ಚಂದರಗಿ, ಮಲ್ಲಿಕಾರ್ಜುನ ನೀರಾಲೋಟಿ, ಮಹಾದೇವಪ್ಪ ಅಣ್ಣಿಗೇರಿ, ಬಸವರಾಜ ಗೋಡಿ, ರಾಜು ಲಿಂಬಿಕಾಯಿ, ಮುರುಘೇಂದ್ರಸ್ವಾಮಿ ಹಿರೇಮಠ, ಜಗದೀಶ ಪುರಾಣಿಕಮಠ ಸೇರಿದಂತೆ ಅನೇಕರಿದ್ದರು.ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮ

ಮುಳಗುಂದ: ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ, ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಎಂದು ಮುಖಂಡ ರಾಮಣ್ಣಾ ಕಮಾಜಿ ಬಣ್ಣಿಸಿದರು.ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ಸಹಕಾರ ಸಂಘದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದು, ಅವರ ತತ್ವಾರ್ದಶಗಳನ್ನು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.

ಈ ವೇಳೆ ಪಪಂ ಸದಸ್ಯ ವಿಜಯ ನೀಲಗುಂದ ಅವರು ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಅವರನ್ನು ಸನ್ಮಾನಿಸಲಾಯಿತು. ಕೆ.ಎಲ್. ಕರಿಗೌಡರ, ಶರಣಪ್ಪ ಕಮಾಜಿ, ರವಿ ಬಳಿಗೇರ, ಯಲ್ಲಪ್ಪ ಕಮಾಜಿ, ಮುತ್ತು ಸುಂಕದ, ಮುತ್ತಪ್ಪ ಬಳ್ಳಾರಿ, ನಾಗಪ್ಪ ಬಾಳಿಕಾಯಿ, ರಾಜೇಂದ್ರಗೌಡ ಪಾಟೀಲ, ಮಹಾಂತೇಶ ಬಳ್ಳಾರಿ ಇತರರು ಇದ್ದರು.