ಪೊಲೀಸರ ಆಪತ್ಕಾಲೀನ 112 ನಂಬರಿಗೆ ಬಂದ ಗರಿಷ್ಠ ಕರೆಗಳು ಆಸ್ತಿ ವಿವಾದದ್ದು!

| Published : May 22 2025, 12:55 AM IST

ಪೊಲೀಸರ ಆಪತ್ಕಾಲೀನ 112 ನಂಬರಿಗೆ ಬಂದ ಗರಿಷ್ಠ ಕರೆಗಳು ಆಸ್ತಿ ವಿವಾದದ್ದು!
Share this Article
  • FB
  • TW
  • Linkdin
  • Email

ಸಾರಾಂಶ

2020ರ ನವೆಂಬರ್‌ 14ರಂದು ಆಪತ್ಕಾಲೀನ ಸ್ಪಂದನ ಸೌಲಭ್ಯ 112 ನಂಬರು ಕಾರ್ಯಾರಂಭಿಸಿದೆ. ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಈ ನಂಬರಿಗೆ 2025 ಮಾರ್ಚ್‌ ವರೆಗೆ ಬಂದ ಒಟ್ಟು ಕರೆಗಳ ಪೈಕಿ ಆಸ್ತಿ ವಿವಾದದ ಕರೆಗಳೇ ಅಧಿಕ ಎಂಬುದು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಯಲ್ಲಿ ಬಹಿರಂಗವಾಗಿದೆ.

ದ.ಕ.: ನಾಲ್ಕೂವರೆ ವರ್ಷಗಳಲ್ಲಿ ಬರೇ 9,039 ಕರೆಗಳು ಆಸ್ತಿವಿವಾದಕ್ಕೆ ಸಂಬಂಧಿಸಿದ್ದುಕನ್ನಡಪ್ರಭ ವಾರ್ತೆ ಮಂಗಳೂರು

ಪೊಲೀಸ್‌ ಇಲಾಖೆಯ ಆಪತ್ಕಾಲೀನ ಸ್ಪಂದನ ಸೌಲಭ್ಯದ 112 ನಂಬರಿಗೆ ತುರ್ತು ಸ್ಪಂದನಕ್ಕಿಂತ ಜಾಸ್ತಿ ಆಸ್ತಿ, ಜಮೀನು ವಿವಾದದ ಕರೆಗಳೇ ಬಂದಿವೆ.

2020ರ ನವೆಂಬರ್‌ 14ರಂದು ಆಪತ್ಕಾಲೀನ ಸ್ಪಂದನ ಸೌಲಭ್ಯ 112 ನಂಬರು ಕಾರ್ಯಾರಂಭಿಸಿದೆ. ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಈ ನಂಬರಿಗೆ 2025 ಮಾರ್ಚ್‌ ವರೆಗೆ ಬಂದ ಒಟ್ಟು ಕರೆಗಳ ಪೈಕಿ ಆಸ್ತಿ ವಿವಾದದ ಕರೆಗಳೇ ಅಧಿಕ ಎಂಬುದು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಯಲ್ಲಿ ಬಹಿರಂಗವಾಗಿದೆ.

ಈ ನಾಲ್ಕೂವರೆ ವರ್ಷಗಳಲ್ಲಿ 9,093 ಕರೆಗಳು ಆಸ್ತಿ, ಜಮೀನು ವಿವಾದಕ್ಕೆ ಸಂಬಂಧಿದ್ದಾಗಿವೆ ಎಂಬುದು ಗಮನಾರ್ಹ. ಮಾಸಿಕ ಸರಾಸರಿ 53 ತಿಂಗಳಲ್ಲಿ ಅಪರಾಧಿಕ ಸ್ವರೂಪದ ಎರಡೇ ಕರೆ ಬಂದಿದೆ. ಅಪಘಾತಕ್ಕೆ ಸಂಬಂಧಿಸಿ 101 ಕರೆಗಳು, ಆರೋಗ್ಯ ತುರ್ತು ಚಿಕಿತ್ಸಾ ಸೌಲಭ್ಯಕ್ಕೆ 35 ಕರೆಗಳು ಬಂದಿವೆ. ಉಳಿದಂತೆ ಎಲ್ಲ ಕರೆಗಳೂ ಆಸ್ತಿ, ಜಮೀನು ತಕರಾರಿದ್ದೇ ಎಂಬುದು ಅಚ್ಚರಿಯಾದರೂ ಸತ್ಯ ಸಂಗತಿ. ಈ ವಿಚಾರದಲ್ಲಿ ಸರಾಸರಿ 170 ಕರೆಗಳು ಬಂದಿವೆ.

ಜಮೀನು ಬಗ್ಗೆ ವ್ಯವಸ್ಥೆಯ ವೈಫಲ್ಯ?:

ಪೊಲೀಸರ ತುರ್ತು ನಂಬರಿಗೆ ಆಸ್ತಿ ವಿವಾದದ ಬಗ್ಗೆ ಗರಿಷ್ಠ ಕರೆಗಳು ಬರುವುದು ಎಂದರೆ, ಜಮೀನು ವ್ಯವಸ್ಥೆಯ ವೈಫಲ್ಯ ಎನ್ನಬೇಕಾಗುತ್ತದೆ. ಜಮೀನು ಕುರಿತ ಸಮಸ್ಯೆಯ ಇನ್ನೂ ಉಲ್ಭಣಗೊಳ್ಳುತ್ತಲೇ ಇರುವುದನ್ನು ಕಂದಾಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ಸಾಧ್ಯವಾದಷ್ಟು ಜಮೀನು ವಿವಾದಗಳು ತಲೆದೋರದಂತೆ ನೋಡಿಕೊಳ್ಳಬೇಕಾಗಿದೆ.

ಸರ್ಕಾರ ಭೂಮಿ ಮಂಜೂರಾತಿ ಮಾಡುವಾಗ ದಾರಿ ವಿವರ ಸರಿಯಾಗಿ ಕಾಣಿಸಿರುವುದಿಲ್ಲ. ನಗರ ಸ್ಥಳೀಯ ಪ್ರಾಧಿಕಾರ ವ್ಯಾಪ್ತಿಯಲ್ಲಿ ಸೈಟ್‌ ಅಥವಾ ತುಂಡು ನಿವೇಶನದಲ್ಲಿ ರಸ್ತೆ ಪಂಚಾಯ್ತಿ ಅಥವಾ ನಗರ ಪಾಲಿಕೆಗೆ ಹಸ್ತಾಂತರಗೊಂಡಿರುವುದಿಲ್ಲ. ಇದಲ್ಲದೆ ಸರ್ಕಾರಿ ಜಾಗದಲ್ಲಿ ಡಾಂಬರು ಹಾಕುವಾಗ ಖಾಸಗಿಯವರ ಆಕ್ಷೇಪ. ಪಂಚಾಯ್ತಿ ಕ್ರಿಯಾಯೋಜನೆ ರೂಪಿಸುವಾಗ ಅಭಿವೃದ್ಧಿಪಡಿಸುವಂತಹ ಜಾಗ ಪಂಚಾಯ್ತಿಗೆ ಸೇರಿದೆಯೇ ಎಂದು ಅಡ್ಡಪರಿಶೀವಲನೆ ನಡೆಸದೇ ಇರುವುದು ಮೊದಲಾದ ಕಾರಣಗಳು ಆಸ್ತಿ, ಗಡಿ ತಕರಾರು ವಿವಾದಗಳು ಹೆಚ್ಚು ಹೆಚ್ಚು ಕಾಣಿಸಲು ಕಾರಣವಾಗಿದೆ ಎನ್ನುವುದು ನಾಗರಿಕರ ಅಭಿಪ್ರಾಯ.

..................ಪೊಲೀಸರ ಆಪತ್ಕಾಲೀನ ನಂಬರಿಗೆ ಜಮೀನು ತಕರಾರು ಕರೆಗಳು ಗರಿಷ್ಠ ಪ್ರಮಾಣದಲ್ಲಿ ಬರುವುದು ಕಂದಾಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇದರ ನಿವಾರಣೆಗೆ ಕಂದಾಯ ಇಲಾಖೆ, ಪಂಚಾಯ್ತಿರಾಜ್‌, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಮನ್ವಯದಲ್ಲಿ ಶ್ರಮಿಸಬೇಕು.

-ದಿನೇಶ್‌ ಭಟ್‌, ಸಾಮಾಜಿಕ ಕಾರ್ಯಕರ್ತ, ಪುತ್ತೂರು