ಕೊಡಗು ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ ಆಧ್ಯಾತ್ಮಿಕ ವಾಗಿ ಪ್ರಸಿದ್ಧಿ ವೀರರಾಜೇಂದ್ರ ಪೇಟೆಯ ಗೌರಿ ಗಣೇಶೋತ್ಸವ. ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ 60 ಸ್ಥಳಗಳಲ್ಲಿ ವಿಘ್ನ ನಿವಾರಕ ಗಣಪತಿ ಯ ಉತ್ಸವ ಮೂರ್ತಿ ಪ್ರತಿಪ್ಠಾನೆಗೊಂಡಿದೆ.

ಟಿ.ಎನ್. ಮಂಜುನಾಥ್ ವಿರಾಜಪೇಟೆ

ಕೊಡಗು ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ ಆಧ್ಯಾತ್ಮಿಕ ವಾಗಿ ಪ್ರಸಿದ್ಧಿ ವೀರರಾಜೇಂದ್ರ ಪೇಟೆಯ ಗೌರಿ ಗಣೇಶೋತ್ಸವ. ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ 60 ಸ್ಥಳಗಳಲ್ಲಿ ವಿಘ್ನ ನಿವಾರಕ ಗಣಪತಿ ಯ ಉತ್ಸವ ಮೂರ್ತಿ ಪ್ರತಿಪ್ಠಾನೆಗೊಂಡಿದೆ.ಕೊಡಗು ಜಿಲ್ಲೆ ವೀರ ರಾಜೇಂದ್ರ ಪೇಟೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಾದರೂ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಾರ್ವಜನಿಕ ಗೌರಿ ಗಣೇಶೋತ್ಸವದ ವಿಸರ್ಜನೆಯ ಮಹೋತ್ಸವ ಜಗತ್ ವಿಖ್ಯಾತವಾಗಿದೆ. ವೀರ ರಾಜೇಂದ್ರ ಪೇಟೆಯ ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವ ಕ್ಕೆ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ದ ಪ್ರದೇಶದ ಗೌರಿ ಬರುವಿಕೆಯೊಂದಿಗೆ ಚಾಲನೆ ನೀಡಲಾಯಿತು. ತೆಲುಗರ ಬೀದಿ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರ ಕೆರೆಯಲ್ಲಿ ಮೊದಲಿಗೆ ಭಾಗಿನ ಅರ್ಪಣೆ ಮಾಡಿದ ಬಸವೇಶ್ವರ ದೇವಾಲಯದ ಪುರೋಹಿತರು ಧಾರ್ಮಿಕ ವಿಧಿ ವಿಧಾನಗಳು ಗಳನ್ನು ನೆರೆವೇರಿಸಿದ ಬಳಿಕ ಭಾಗಿನ ಅರ್ಪಣೆ ಮಾಡಲಾಯಿತು. ನಂತರ ಮುಳುಗು ಹಾಕಿದ ನಂತರ ಮೇಲ್ ಬಂದು ಕೈಯಲ್ಲಿ ಬಂದ ವಸ್ತು ಒಂದು ವರ್ಷದ ಕಾಲ ನಿರ್ಣಯ ಮಾಡುತ್ತದೆ ಎಂಬುದು ದೈವ ಸಂದೇಶವಾಗಿದೆ. ಈಬಾರಿ ಮಂಗಳ ಮುಖವಾಗಿ ಕಾಡಿಗೆ ಬಂದಿರುವುದು ದೇವಿಗೆ ಸೌಂದರ್ಯ ವರ್ಧಕ ಎಂಬಂತೆ ಬಿಂಬಿಸಲಾಗಿದೆ. ಪ್ರದೇಶದ ಗೌರಮ್ಮನ ಅಲಂಕರಿಸಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಭಾಗಿನ ಅರ್ಪಿಸಿ ಮುತೈದ್ಯರಿಂದ ಪೂಜೆ ಕೈಗೊಂಡು ನಗರ ಪ್ರದಕ್ಷಿಣೆಯೊಂದಿಗೆ ಸಂಜೆ ವೇಳೆಗೆ ದೇಗುಲ ಪ್ರವೇಶವಾಗಿ ಮಾಹಾಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ವಿರಾಜಪೇಟೆ ನಗರ ವ್ಯಾಪ್ತಿಯಲ್ಲಿ 21 ಸ್ಥಳಗಳಲ್ಲಿ ಮತ್ತು ನಗರ ಠಾಣಾ ವ್ಯಾಪ್ತಿಯಲ್ಲಿ 09 ಸ್ಥಳಗಳಲ್ಲಿ ಶ್ರೀ ಗಣಪತಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಅಲ್ಲದೇ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ಸ್ಥಳಗಳಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ವಿವಿಧ ಧಾರ್ಮಿಕ ಉತ್ಸಾವಾದಿ ಕಾರ್ಯಕ್ರಮ ಗಳೊಂದಿಗೆ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.ಗಣಪತಿ ಪ್ರತಿಷ್ಠಾಪನೆ: ಅರಸು ನಗರ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸುವ ಗಜಮುಖನಿಗೆ ಮೂರು ದಶಕಗಳಿಂದ ಅರಸುನಗರದ ಸಮುದಾಯ ಭವನದಲ್ಲಿ ಚಲನಚಿತ್ರ ದ ಸೆಟ್ ಅಳವಡಿಸಿ ಅದ್ದೂರಿಯಾಗಿ ಸಾರ್ವಜನಿಕ ರಿಗೆ ಮುದ ನೀಡುವಂತೆ ವಾತಾವರಣ ಸೃಷ್ಟಿ ಮಾಡುವುದು ವಿಶೇಷ. ಈ ಬಾರಿ ಅಯೋಧ್ಯೆದ ರಾಮ ಲಲ್ಲಾನ ಭೌವ್ಯ ದೇಗುಲದ ಗರ್ಭಗುಡಿಯ ಮತ್ತು ಒಳ ಪ್ರಾಂಗಣದ ಮೇಲ್ಛಾವಣಿಯ ವಿನ್ಯಾಸ ಮಾಡಲಾಗಿದೆ. ನಗರದ ವಿವಿಧೆಡೆಗಳ 21 ಉತ್ಸವ ಸಮಿತಿಗಳ ಉತ್ಸವ ಮೂರ್ತಿಗಳು ಅನಂತ ಪದ್ಮನಾಭ ವೃತದಂದು ಅಂದರೆ ಸೆ.25ರಂದು ಮುಂಜಾನೆ ಸಾಮೂಹಿಕವಾಗಿ ನಗರದ ಇತಿಹಾಸ ಪ್ರಸಿದ್ಧ ಗೌರಿ ಕೆರೆಯಲ್ಲಿ ವಿಸರ್ಜನೆ ಯಾಗಲಿದೆ.

ಐತಿಹಾಸಿಕ ಗಣೇಶೋತ್ಸವವು ತುಂಬಾ ವಿಜೃಂಭಣೆಯಿಂದ ನಡೆಯುತ್ತಿದ್ದು ಶಾಸಕರು ಅಧ್ಯಕ್ಷರಾಗಿರುವುದರಿಂದ ಎಲ್ಲ ಸಮಿತಿಗಳಿಗ ಸಹಕಾರವನ್ನು ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟಿನ ಕೆಲವೊಂದು‌ ಅದೇಶ ಇರುವದರಿಂದ ಎಲ್ಲ ಸಮಿತಿಗಳು ಅದನ್ನು ಪಾಲಿಸಬೇಕು.

ಶಬರೀಶ್ ಶೆಟ್ಟಿ, ಕಾರ್ಯಾದಕ್ಷರು ಐತಿಹಾಸಿಕ ಗಣೇಶೋತ್ಸಹ ಸಮಿತಿ