ಕನ್ನಡ ನಾಡು ಕವಿಗಳ ಬೀಡು: ಶಂಕರ್ ಶೇಟ್

| Published : Dec 05 2023, 01:30 AM IST

ಸಾರಾಂಶ

ಈ ಸಂದರ್ಭದಲ್ಲಿ ಬಸವ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಸಿ.ಪಿ. ಈರೇಶಗೌಡ, ತಾಲೂಕು ಯುವ ಬ್ರಿಗೇಡ್ ಅಧ್ಯಕ್ಷ ರಂಗನಾಥ ಮೊಗವೀರ, ಮಹೇಶ್ ಖಾರ್ವಿ, ಜಗದೀಶ್ ಬನವಾಸಿ, ಉಮೇಶ್ ಭಾಪಟ್, ಜಯಮ್ಮ, ಪಕ್ಕೀರಸ್ವಾಮಿ, ಪರಶುರಾಮ್, ವಿನೋದ್ ವಾಲ್ಮೀಕಿ, ಲೀಲಾವತಿ, ಅರುಣ್ ಆಚಾರ್, ಆಕಾಶ್ ಸೇರಿದಂತೆ ಮೊದಲಾದವರಿದ್ದರು.

ಸೊರಬ: ಪುರಾತನ ವಿವಿಧ ಭಾಷೆಗಳಲ್ಲಿ ಕನ್ನಡ ಇಂದಿಗೂ ಸಹ ತನ್ನ ನಾವಿನ್ಯತೆ ಕಾಪಾಡಿಕೊಂಡು, ಅತ್ಯಂತ ಸರಳ, ಸುಂದರ ಭಾಷೆಯಾಗಿ ತನ್ನತನ ಉಳಿಸಿಕೊಂಡಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಜನ ಸಂಗ್ರಾಮ ಪರಿಷತ್ತು ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.

ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಯುವಶಕ್ತಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಹಿರಿಯ-ಕಿರಿಯರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡು ಕವಿಗಳ ಬೀಡಾಗಿದೆ. ಭಾಷೆಯನ್ನು ಶ್ರೀಮಂತಗೊಳಿಸುವ ಮೂಲಕ ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರು ಜ್ಞಾನಪೀಠ ಪ್ರಶಸ್ತಿ ತಂದುಕೊಡುವಲ್ಲಿ ಸಾರ್ಥಕತೆ ಮೆರೆದಿದ್ದಾರೆ ಎಂದರು.

ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ ನಿತ್ಯ ಜೀವನದಲ್ಲಿ ಕನ್ನಡ ನಮ್ಮ ಉಸಿರಾಗಬೇಕು. ಯಾರು ಭಾಷೆ ಮತ್ತು ಧರ್ಮವನ್ನು ರಕ್ಷಿಸುತ್ತಾರೊ ಅವರನ್ನು ಧರ್ಮವು ರಕ್ಷಿಸುತ್ತದೆ. ಸಂಸ್ಕೃತಿ, ಪರಂಪರೆ ಉಳಿಸಲು ಎಲ್ಲರೂ ಸಹಭಾಗಿತ್ವದಿಂದ ಪ್ರಯತ್ನಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಸವ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಸಿ.ಪಿ. ಈರೇಶಗೌಡ, ತಾಲೂಕು ಯುವ ಬ್ರಿಗೇಡ್ ಅಧ್ಯಕ್ಷ ರಂಗನಾಥ ಮೊಗವೀರ, ಮಹೇಶ್ ಖಾರ್ವಿ, ಜಗದೀಶ್ ಬನವಾಸಿ, ಉಮೇಶ್ ಭಾಪಟ್, ಜಯಮ್ಮ, ಪಕ್ಕೀರಸ್ವಾಮಿ, ಪರಶುರಾಮ್, ವಿನೋದ್ ವಾಲ್ಮೀಕಿ, ಲೀಲಾವತಿ, ಅರುಣ್ ಆಚಾರ್, ಆಕಾಶ್ ಸೇರಿದಂತೆ ಮೊದಲಾದವರಿದ್ದರು.

- - -

-03ಕೆಪಿಸೊರಬ03: