ಧರ್ಮ, ಜಾತಿಯ ಆಧಾರದಲ್ಲಿ ದೇಶ ಒಡೆಯುವ ಹುನ್ನಾರ: ವಿಜಯಾನಂದ ಕಾಶಪ್ಪನವರ

| Published : Jan 27 2024, 01:16 AM IST

ಸಾರಾಂಶ

ಹುನಗುಂದ: ದೇಶದ ಕೆಲವಷ್ಟು ಪಟ್ಟಭದ್ರ ಹಿತಾಸಕ್ತಿಗಳು ಧರ್ಮ ಮತ್ತು ಜಾತಿಯ ಆಧಾರದಲ್ಲಿ ದೇಶವನ್ನು ಒಡೆಯುವ ಹುನ್ನಾರ ನಡೆಸಿವೆ. ಈ ದೇಶವನ್ನು ಧರ್ಮ ಮತ್ತು ಜಾತಿಯ ವ್ಯವಸ್ಥೆಯಲ್ಲಿ ಒಡೆಯಲು ಸಾಧ್ಯವಿಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ತಾಲೂಕು ಆಡಳಿತದಿಂದ ಟಿಸಿಎಚ್ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ದೇಶದ ಕೆಲವಷ್ಟು ಪಟ್ಟಭದ್ರ ಹಿತಾಸಕ್ತಿಗಳು ಧರ್ಮ ಮತ್ತು ಜಾತಿಯ ಆಧಾರದಲ್ಲಿ ದೇಶವನ್ನು ಒಡೆಯುವ ಹುನ್ನಾರ ನಡೆಸಿವೆ. 75ನೇ ಗಣರಾಜ್ಯೋತ್ಸವ ಈ ವರ್ಷದಲ್ಲಿ ವಿವಿಧತೆಯಲ್ಲಿ ಏಕತೆ ಬೆಳೆಸಿಕೊಂಡು ಎಲ್ಲರೂ ಒಂದಾಗಿ ಗಣರಾಜೋತ್ಸವ ಆಚರಿಸುತ್ತಿದ್ದೇವೆ. ಪಟ್ಟಭದ್ರ ಹಿತಾಶಕ್ತಿಗಳು ಈ ದೇಶವನ್ನು ಧರ್ಮ ಮತ್ತು ಜಾತಿಯ ವ್ಯವಸ್ಥೆಯಲ್ಲಿ ಒಡೆಯಲು ಸಾಧ್ಯವಿಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ತಾಲೂಕು ಆಡಳಿತದಿಂದ ಟಿಸಿಎಚ್ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 1949 ನವೆಂಬರ್ 26ರಂದು ಭಾರತ ದೇಶ ಪ್ರಜೆಗಳಾಗಿ ನಾವೆಲ್ಲ ಪ್ರಜಾತತ್ಮಾಕವಾಗಿ ಪವಿತ್ರವಾದ ಸಂವಿಧಾನವನ್ನು ಶಾಸನಬದ್ಧವಾಗಿ ಒಪ್ಪಕೊಂಡು. ಈ ದೇಶದ ಸಂವಿಧಾನ ರಚಿಸಿದ ಡಾ. ಅಂಬೇಡ್ಕರ್‌ ಅವರು ನ.26ರಂದು ಅಂಗೀಕಾರ ಪಡೆದು ಅಧಿಕೃತವಾಗಿ ಈ ರಾಷ್ಟ್ರವನ್ನು ಜ್ಯಾತ್ಯತೀತವಾಗಿ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಘೋಷಿಸಲಾಗಿದೆ. ಇದೀಗ 75 ವರ್ಷಗಳ ಗತಿಸಿವೆ. ವಿವಿಧ ಧರ್ಮ, ಜಾತಿಯಲ್ಲಿ ಜನಿಸಿದ ನಾವೆಲ್ಲ ಹೆಮ್ಮೆಯ ಭಾರತೀಯ ಪ್ರಜೆಗಳಾಗಿ ಒಗ್ಗಟ್ಟಿನಿಂದ ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ತಹಸೀಲ್ದಾರ್‌ ನಿಂಗಪ್ಪ ಬಿರಾದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವದ ಸುಭದ್ರ ಬುನಾದಿ ಹಾಕುವುದರ ಮೂಲಕ ಗಣರಾಜೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು.

ತಾಪಂ ಇಒ ಮುರಳಿ ದೇಶಪಾಂಡೆ, ಸಿಪಿಐ ಸುನೀಲ ಸವದಿ, ಪಿಎಸ್‌ಐ ಚನ್ನಯ್ಯ ದೇವೂರ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಶೇಖರಪ್ಪ ಬಾದವಾಡಗಿ, ಬಿಇಒ ಜಾಸ್ಮೀನ್ ಕಿಲ್ಲೇದಾರ, ಶಿವಾನಂದ ಕಂಠಿ, ಸಂಗಪ್ಪ ಹೂಲಗೇರಿ, ಯಮನಪ್ಪ ಬೆಣ್ಣೆ, ಶರಣಪ್ಪ ಹೂಲಗೇರಿ, ಭೂ ನ್ಯಾಯ ಮಂಡಳಿ ಸದಸ್ಯರಾದ ಅಮರೇಶ ನಾಗೂರ, ಮಹಾಂತೇಶ ಅವಾರಿ, ಸಂಗಣ್ಣ ಗಂಜೀಹಾಳ, ವಿಜಯಮಹಾಂತೇಶ ಗದ್ದನಕೇರಿ, ಪುರಸಭೆ ಸದಸ್ಯರಾದ ಶರಣು ಬೆಲ್ಲದ, ಮೈನು ಧನ್ನೂರ, ಪರವೇಜ್‌ ಖಾಜಿ, ಚಂದ್ರು ತಳವಾರ, ರಾಜಮ್ಮ ಬದಾಮಿ, ಶಾಂತಾ ಮೇಲಿನಮನಿ, ಬಸವರಾಜ ಗೋಣ್ಣಾಗರ, ಪಿಕೆಪಿಎಸ್ ಸದಸ್ಯ ಸಂಗಮೇಶ ಭದ್ರಶಟ್ಟಿ, ಮುತ್ತು ಲೋಕಾಪುರ, ಮುತ್ತಣ್ಣ ಗಂಜಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.