ಸಾರಾಂಶ
ಪ್ರತಿಯೊಬ್ಬರು ಸತ್ಯದ ದಾರಿಯಲ್ಲಿ ನಡೆಯಬೇಕು ಎಂದು ಹೇಳಿರುವ ಏಸುವಿನ ಆದರ್ಶಗಳು ನಮಗೆಲ್ಲ ಸ್ಫೂರ್ತಿ. ಯಾರು ಹಸಿವಿನಲ್ಲಿ ಇರುತ್ತಾರೋ, ಯಾರು ಕಷ್ಟದಲ್ಲಿ ಇರುತ್ತಾರೋ ಅವರಿಗೆ ಹೆಗಲು ಕೊಟ್ಟು ಸಹಾಯಕ್ಕೆ ನಿಲ್ಲುವವರನ್ನು ನಿಜವಾದ ದೇವರ ಮಕ್ಕಳು, ಎಂದು ಏಸು ಕ್ರಿಸ್ತ ಸಂದೇಶ ಸಾರಿದ್ದಾರೆ.ಏಸುಕ್ರಿಸ್ತ ಹೇಳಿರುವುದು ಸತ್ಯದ ದಾರಿಯಲ್ಲಿ ಸಾಗಬೇಕು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಪ್ರಭು ಏಸು ಕ್ರಿಸ್ತನ ಜಯಂತಿಯನ್ನು ಕ್ರಿಸ್‌ಮಸ್ ಹಬ್ಬಎಂದು ಆಚರಿಸಲಾಗುತ್ತದೆ. ಪ್ರಭು ಏಸು ಕ್ರಿಸ್ತನು ಪ್ರತಿಯೊಂದು ಮನೆಯಲ್ಲೂ ಹುಟ್ಟಿ ಸಮಾಜವನ್ನು ಬೆಳಗುವ ಮೂಲಕ ದೇಶ ಕಟ್ಟುವಂತಹ ಕೆಲಸ ಮಾಡುತ್ತಾನೆ ಎಂಬ ನಂಬಿಕೆ ಇದೆ ಎಂದು ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಹೇಳಿದರು.ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯ ಎಚ್ - ಕ್ರಾಸ್ ರಸ್ತೆಯಲ್ಲಿ ಇರುವ ಚಿಕ್ಕವೀರಮ್ಮ ಪುಟ್ಟರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಶಿಡ್ಲಘಟ್ಟ ತಾಲೂಕು ಸಭಾ ಪಾಲಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಸ್ ಮಸ್ ಆಚರಣೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸತ್ಯದ ದಾರಿಯಲ್ಲಿ ನಡೆಯಬೇಕು ಎಂದು ಹೇಳಿರುವ ಏಸುವಿನ ಆದರ್ಶಗಳು ನಮಗೆಲ್ಲ ಸ್ಫೂರ್ತಿ. ಯಾರು ಹಸಿವಿನಲ್ಲಿ ಇರುತ್ತಾರೋ, ಯಾರು ಕಷ್ಟದಲ್ಲಿ ಇರುತ್ತಾರೋ ಅವರಿಗೆ ಹೆಗಲು ಕೊಟ್ಟು ಸಹಾಯಕ್ಕೆ ನಿಲ್ಲುವವರನ್ನು ನಿಜವಾದ ದೇವರ ಮಕ್ಕಳು, ಎಂದು ಏಸು ಕ್ರಿಸ್ತ ಸಂದೇಶ ಸಾರಿದ್ದಾರೆ.ಏಸುಕ್ರಿಸ್ತ ಹೇಳಿರುವುದು ಸತ್ಯದ ದಾರಿಯಲ್ಲಿ ನಾವು ನೀವು ನಡೆದರೆ ದೇವರು ಮೆಚ್ಚುವಂತಹ ಮಕ್ಕಳಾಗುತ್ತೇವೆ. ನಮಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ, ಏಸು ಕ್ರಿಸ್ತನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು .ಕ್ರಿಸ್ ಮಸ್ ಆಚರಣೆಯಲ್ಲಿ ಮಕ್ಕಳು, ಯುವಕ, ಯುವತಿಯರು ಹೊಸ ಬಟ್ಟೆ ಧರಿಸಿ, ಏಸು ಕ್ರಿಸ್ತನಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸೌಹಾರ್ದ ಮಿಲನ ಮತ್ತು ಜಾನಪದ ಸಂಗೀತ, ನೃತ್ಯ ಏಸುವಿನ ನಾಟಕ ಕಾರ್ಯಕ್ರಮ ನಡೆದವು.ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲೂಕು ಸಭಾ ಪಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ. ಸತ್ಯನಾರಾಯಣಪ್ಪ, ದೈವ ಸಂದೇಶಕ ಸ್ಟೀಫನ್ ಜಮಖಂಡಿ, ಕಾಂಗ್ರೆಸ್ ಮುಖಂಡರಾದ ನಾಗಮಂಗಲ ತಮ್ಮಣ್ಣ, ಶಶಿಕುಮಾರ್, ಸುಗಟೂರು ನಾಗೇಶ್, ದೊಡ್ಡ ದಾಸರಹಳ್ಳಿ ದೇವರಾಜ್, ಅಪ್ಪಾಜಿ ಗೌಡ , ದೇವರಾಜ್, ಬಳವನಹಳ್ಳಿ ಮೂರ್ತಿ, ಕಾಂಗ್ರೆಸ್ ಮುಖಂಡರು, ಪುಟ್ಟು ಅಭಿಮಾನಿಗಳು ಹಾಗೂ ಕ್ರೈಸ್ತ ಬಾಂಧವರು ಹಾಜರಿದ್ದರು.