ಸಾರಾಂಶ
ನರಗುಂದ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳು ಯಶ್ವಸಿಗೊಂಡ ನಂತರ ಇಡೀ ವಿಶ್ವದಲ್ಲಿ ಜನಮೆಚ್ಚುಗೆ ಪಡೆದಿದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್ಲ ತಿಳಿಸಿದರು.
ತಾಲೂಕಿನ ರಡ್ಡೆರನಾಗನೂರ ಗ್ರಾಪಂನಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ಸರ್ಕಾರದ ಚುನಾವಣಾಪೂರ್ವ ಪ್ರಣಾಳಿಕೆಯಲ್ಲಿ ಹೇಳಿದಂತೆ ಪಕ್ಷಭೇದ ಮರೆತು ಸರ್ವರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ವಿಶ್ವಮಟ್ಟದಲ್ಲಿ ಛಾಪು ಮೂಡಿಸಿವೆ ಹಾಗೂ ಯೋಜನೆಗಳ ಬಗ್ಗೆ ಜಾಗತಿಕವಾಗಿ ಚರ್ಚೆಗಳು ಸಹ ನಡೆದಿವೆ ಎಂದರು.ತಾಪಂ ಅಧಿಕಾರಿ ಇನಾಮದಾರ ಮಾತನಾಡಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಶೇ. 100ರಷ್ಟು ಹಾಗೂ ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗಳು ಶೇ. 99ರಷ್ಟು ಮತ್ತು ಯುವನಿಧಿ ಶೇ. 84ರಷ್ಟು ಪ್ರಗತಿ ಸಾಧಿಸಿದೆ. ಇದು ನಮ್ಮ ತಾಲೂಕಿನ ಜನತೆಗೆ ಸಂದ ನಮ್ಮೆಲ್ಲರ ಉತ್ತಮವಾದ ಸೇವೆಗೆ ಸಾಕ್ಷಿಯೆಂದರು.ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು ಮಾತನಾಡಿ, ನಮ್ಮ ಸಾರಿಗೆ ಸಂಸ್ಥೆಯಿಂದ 71 ಬಸ್ಸುಗಳ ಮೂಲಕ ಎಲ್ಲ ಮಾರ್ಗಗಳಲ್ಲಿ ಸುಲಭ ಸಾರಿಗೆ ಸೌಲಭ್ಯ ಕಲ್ಪಿಸಿದೇವೆ. ಆ ಮೂಲಕ ಸಂಸ್ಥೆಗೆ ಇಂದಿನವರೆಗೆ ₹61.39 ಕೋಟಿ ಆದಾಯ ಹರಿದು ಬಂದಿದೆ. ಪ್ರತಿ ತಿಂಗಳು ಸರಾಸರಿ ಶೇ. 64ರಷ್ಟು ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆಂದದರು.
ಆಹಾರ ಇಲಾಖೆಯ ಅಧಿಕಾರಿ ಮಾತನಾಡಿ, ತಾಲೂಕಿನ 23114 ಪಡಿತರ ಚೀಟಿದಾರರಿಗೆ ತಲಾ 10 ಕೆಜಿಯಂತೆ ಅಕ್ಕಿ ವಿತರಣೆ ಮಾಡಿದೆ. ಆ ಮೂಲಕ 78750 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಅನುಕೂಲ ಪಡೆದಿದ್ದಾರೆಂದು ತಿಳಿಸಿದರು.ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿ ಮಾತನಾಡಿ, ಜುಲೈವರೆಗೆ ಯುವನಿಧಿ ಯೋಜನೆಯಡಿ 670 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 454 ವಿದ್ಯಾರ್ಥಿಗಳಿಗೆ ₹13,53,000 ಪ್ರೋತ್ಸಾಹಧನವನ್ನು ಷರತ್ತುಗಳಿಗೆ ಒಳಪಟ್ಟು ಅರ್ಹರಿಗೆ ಡಿಬಿಟಿ ಮೂಲಕ ಹಣ ಸಂದಾಯಗೊಳಿಸಲಾಗಿದೆ. ಈ ಯೋಜನೆಯಡಿ ನೋಂದಣೆ ಕಾರ್ಯ ಪ್ರಗತಿಯಲ್ಲಿದೆ ಎಂದರು.ಹೆಸ್ಕಾಂ ಅಧಿಕಾರಿ ಮಾತನಾಡಿ, ತಾಲೂಕಿನ 25341 ಅರ್ಹ ಸ್ಥಾವರಗಳ ಪೈಕಿ ಇಂದಿನವರೆಗೆ 25099 ಸ್ಥಾವರಗಳ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು ಉಚಿತವಾಗಿ 200 ಯುನಿಟ್ ವಿದ್ಯುತ್ ಪೂರೈಸಲಾಗಿದೆ ಎಂದರು.ಶಿಶು ಅಭಿವೃದ್ಧಿ ಅಧಿಕಾರಿ ಮಾತನಾಡಿ, ತಾಲೂಕಿನ 24188 ಯಜಮಾನಿ ಹೆಸರಿನ ಪಡಿತರ ಚೀಟಿದಾರರಲ್ಲಿ ನೋಂದಣಿಯಾದ 24158 ಯಜಮಾನಿಯರಿಗೆ ಗೃಹಲಕ್ಷ್ಮೀ ಯೋಜನೆಯ ಮಾಸಿಕ ₹2000 ರಂತೆ ಜುಲೈವರೆಗೆ ಸರ್ಕಾರದಿಂದ ಹಣ ಸಂದಾಯ ಮಾಡಲಾಗಿದೆ ಎಂದರು.ಗ್ಯಾರಂಟಿ ಸಮಿತಿ ಸದಸ್ಯರಾದ ಟಿ.ಬಿ. ಶಿರಿಯಪ್ಪಗೌಡ್ರ, ಹಾಗೂ ಆರ್.ಐ. ನದಾಫ ಮಾತನಾಡಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸಾವಕ್ಕ ಮೇಟಿ, ಗ್ಯಾರಂಟಿ ಸಮಿತಿ ಸದಸ್ಯರಾದ ವೀರೇಶ ಚುಳಕಿ, ವಿನಾಯಕ ಹಡಗಲಿ, ದೇವಪ್ಪ ನಾಗನೂರ, ವೀರಯ್ಯ ಹುಚ್ಚಪ್ಪಯ್ಯನವರ, ಹನುಮಂತ ರಾಮಣ್ಣವರ, ಮೌಲಾಸಾಬ ಅರಬಜಮಾದಾರ, ಶೇಖರಗೌಡ ಮುದ್ನೂರ, ಚಂದ್ರಶೇಖರಗೌಡ ಪಾಟೀಲ, ಮೈಲಾರಪ್ಪ ಮದಗುಣಕಿ, ವೆಂಕನಗೌಡ ಮಲ್ಲನಗೌಡ್ರ, ಸಂಗಮೇಶ ಹೊನ್ನಟಗಿ, ಮಹಾಂತೇಶ ಜಾಲವಾಡಗಿ ಮತ್ತು ಶಾಂತವ್ವ ಮಾದರ, ಗಂಗವ್ವ ತಡಸಿ, ಅಭಿವೃದ್ಧಿ ಅಧಿಕಾರಿ ಎಸ್.ಡಿ. ಹಿರೇಮನಿ, ಪ್ರದೀಪ ಕದಂ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))