ಎನ್‌ಸಿಸಿ ಸೇರ್ಪಡೆಯಿಂದ ಭಾರತ ಬಗ್ಗೆ ಅಭಿಮಾನ ವೃದ್ಧಿಸಬಲ್ಲದು: ರುಕ್ಮಿಣಿಬಾಯಿ

| Published : Oct 03 2024, 01:23 AM IST

ಎನ್‌ಸಿಸಿ ಸೇರ್ಪಡೆಯಿಂದ ಭಾರತ ಬಗ್ಗೆ ಅಭಿಮಾನ ವೃದ್ಧಿಸಬಲ್ಲದು: ರುಕ್ಮಿಣಿಬಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ಇತಿಹಾಸ ಪ್ರಸಿದ್ಧ ಕೆಳದಿ ರಾಣಿ ಚನ್ನಮ್ಮ ಆಳಿದ ಕೋಟೆಯಲ್ಲಿ ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ. ಕೆಡೆಟ್‌ಗಳು ಬುಧವಾರ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮವನ್ನು ಚನ್ನಗಿರಿಯಲ್ಲಿ ನಡೆಸಿದ್ದಾರೆ.

- ಚನ್ನಗಿರಿ ಪಟ್ಟಣ ಕೋಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಇತಿಹಾಸ ಪ್ರಸಿದ್ಧ ಕೆಳದಿ ರಾಣಿ ಚನ್ನಮ್ಮ ಆಳಿದ ಕೋಟೆಯಲ್ಲಿ ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ. ಕೆಡೆಟ್‌ಗಳು ಬುಧವಾರ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮವನ್ನು ನಡೆಸಿದರು.

ತಹಸೀಲ್ದಾರ್ ರುಕ್ಮಿಣಿಬಾಯಿ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ವಿದ್ಯಾರ್ಥಿ ದಿಸೆಯಲ್ಲಿಯೇ ಎನ್‌ಸಿಸಿಯಂತಹ ಸಮಾಜ ಸೇವಾ ಸಂಸ್ಥೆಗಳಲ್ಲಿ ಸೇರಿಕೊಳ್ಳಬೇಕು. ಇದರಿಂದ ದೇಶಾಭಿಮಾನ ಮೂಡುವ ಜೊತೆಗೆ ಎಲ್ಲರೂ ಒಂದೇ ಎಂಬ ಭಾವನೆಗಳು ಮೂಡುತ್ತವೆ ಎಂದರು.

ತಾಪಂ ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ.ಉತ್ತಮ ಮಾತನಾಡಿ, ವಿದ್ಯಾರ್ಥಿಗಳು ಇರುವಾಗಲೇ ಸ್ವಚ್ಛತೆ ಮತ್ತು ಸಾಮಾಜಿಕ ಸೇವೆಗಳನ್ನು ಮಾಡಲು ತೊಡಗಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಜನ್ಮದಿನದಂದು ನೀವೆಲ್ಲರೂ ಇಂತಹ ಐತಿಹಾಸಿಕ ಕೋಟೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಉತ್ತಮ ಕೆಲಸವಾಗಿದೆ ಎಂದರು.

ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ನವೀನ್ ಕಿಶೋರ್ ಮಾತನಾಡಿ, ಕ್ಲೀನ್ ಅಂಡ್ ಗ್ರೀನ್ ಸ್ಟೂಡೆಂಡ್ಸ್ ಅಭಿಮಾನ ಮೂಲಕ ಕಾಲೇಜಿನ ಪರಿಸರ ಸ್ವಚ್ಚಗೊಳಿಸಲಾಗಿದೆ. ಕಾಲೇಜಿನ ಸುತ್ತಲೂ 150 ಗಿಡಗಳನ್ನು ನೆಡಲಾಗಿದೆ. ಸ್ವಚ್ಚತೆಗಾಗಿ ಎನ್.ಸಿ.ಸಿ. ಘಟಕದ ಎಲ್ಲ ವಿದ್ಯಾರ್ಥಿಗಳು ಸ್ವಚ್ಛತೆ ಮತ್ತು ಪರಿಸರದ ಹಸಿರೀಕರಣಕ್ಕಾಗಿ ಕೈ ಜೋಡಿಸುತ್ತೀರುವುದು ವಿದ್ಯಾರ್ಥಿಗಳಲ್ಲಿನ ಸೇವಾ ಭಾವನೆ ತೋರುತ್ತಿದೆ ಎಂದರು.

ಕಾಲೇಜಿನ ಉಪನ್ಯಾಸಕರಾದ ಶಂಕರ ನಾಯ್ಕ್, ಮಂಜುನಾಥ್, ದೀಪ ಡಿ.ಸವಣೂರು, ನಂದಿನಿ, ನಾಜೀಯಾ, ಭಾರತಿ, ಎನ್.ಸಿ.ಸಿ ಕೆಡೆಟ್‌ಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -2ಕೆಸಿಎನ್‌ಜಿ3:

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರುಕ್ಮಿಣಿ ಬಾಯಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.