ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಅ.೮ರಂದು ಬಾಳಂಬೀಡದಲ್ಲಿ ವಂದೇ ಮಾತರಂ ಗೋಶಾಲೆ ನೀಲನಕ್ಷೆ ಅನಾವರಣಗೊಳಿಸಿ, ಧರ್ಮಧ್ವಜ ಅಭಿಯಾನದ ಸಮಾರೋಪ, ಧರ್ಮ ರಕ್ಷಣೆ, ಕೃಷಿ ಸಂಗಮ ಕಾರ್ಯಕ್ರಮದ ಸಾನಿಧ್ಯವಹಿಸಿ ರೈತರಿಗಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ತಿಳಿಸಿದರು.
ಹಾನಗಲ್ಲ: ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಅ.೮ರಂದು ಬಾಳಂಬೀಡದಲ್ಲಿ ವಂದೇ ಮಾತರಂ ಗೋಶಾಲೆ ನೀಲನಕ್ಷೆ ಅನಾವರಣಗೊಳಿಸಿ, ಧರ್ಮಧ್ವಜ ಅಭಿಯಾನದ ಸಮಾರೋಪ, ಧರ್ಮ ರಕ್ಷಣೆ, ಕೃಷಿ ಸಂಗಮ ಕಾರ್ಯಕ್ರಮದ ಸಾನಿಧ್ಯವಹಿಸಿ ರೈತರಿಗಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ತಿಳಿಸಿದರು.
ಮಂಗಳವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ ವತಿಯಿಂದ ಅಕ್ಟೋಬರ್ ೮ರಂದು ಸಂಜೆ ೪ ಗಂಟೆಗೆ ಹಾನಗಲ್ಲ ತಾಲೂಕಿನ ಬಾಳಂಬೀಡದಲ್ಲಿ ನಡೆಯುವ ಸಮಾರಂಭದಲ್ಲಿ ಕೃಷಿ ಅವಲಂಬಿತ ಜಿಲ್ಲೆಯಾದ ಹಾನಗಲ್ಲ ತಾಲೂಕಿನಲ್ಲಿ ಸಾಂಪ್ರದಾಯಿಕ ಕೃಷಿ, ಗೋರಕ್ಷಣೆಗೆ ಹೆಚ್ಚಿನ ಅಧ್ಯತೆ ನೀಡಬೇಕಾಗಿದೆ. ಇಂತಹ ಜಾಗೃತಿಗಾಗಿ ಈ ಮಹಾಸಂಗಮ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಹಾವೇರಿ ಹುಕ್ಕೇರಿಮಠದ ಸದಾಶಿವಮಹಾಸ್ವಾಮಿಗಳು, ಕೂಡಲದ ಗುರುಮಹೇಶ್ವರ ಮಹಾಸ್ವಾಮಿಗಳು, ಅಕ್ಕಿಆಲೂರು ಶಿವಬಸವ ಮಹಾಸ್ವಾಮಿಗಳು, ಚಂದ್ರಶೇಖರ ಶಿವಾಚಾರ್ಯರು, ಬಮ್ಮನಹಳ್ಳಿ ಶಿವಯೋಗೀಶ್ವರ ಮಹಾಸ್ವಾಮಿಗಳು, ಅಗಡಿ ಗುರುಲಿಂಗ ಶ್ರೀಗಳು, ಗುಂಡೂರು ತಿಪ್ಪೇಶ್ವರ ಶ್ರೀಗಳು, ಹೇರೂರು ಪಂಡಿತಾರಾಧ್ಯ ಶಿವಾಚಾರ್ಯರು, ಕೂಸನೂರು ಜ್ಯೋತಿರ್ಲಿಂಗಾನಂದ ಶ್ರೀಗಳು, ಹೋತನಹಳ್ಳಿ ಶಂಕರಾನಂದ ಶ್ರೀಗಳು, ತಿಳವಳ್ಳಿ ಬಸವ ನಿರಂಜನ ಶ್ರೀಗಳು, ಬಾಳೂರು ಕುಮಾರಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ಆರ್‌ಎಸ್‌ಎಸ್ ಕಾರ್ಯವಾಹ ಎನ್. ತಿಪ್ಪೇಸ್ವಾಮಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಂ. ನಾಗರಾಜ, ಶಾಸಕ ಮಹೇಶ ಟೆಂಗಿನಕಾಯಿ, ಸಮಾಜ ಸೇವಕ ಮಂಜಣ್ಣ ಹೊಸಬಾಳೆ, ಚಲನಚಿತ್ರ ನಟರಾದ ದೊಡ್ಡಣ್ಣ, ಶ್ರೀನಿವಾಸಮೂರ್ತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ವಿಉರಪಾಕ್ಷಪ್ಪ ಬಳ್ಳಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಶಿವಯೋಗಿ ಕಂಬಾಳಿಮಠ ಆಶಯ ನುಡಿ ನುಡಿಯುವರು.
ಖ್ಯಾತ ಸಂಗೀತ ಕಲಾವಿದರಾದ ಸಂಧ್ಯಾ ಗಿರೀಶ, ಕಂಬದ ರಂಗಯ್ಯ ಅವರಿಂದ ಸಂಗೀತ ಕಾರ್ಯಕ್ರಮವೂ ನಡೆಯಲಿದೆ. ಇದೇ ದಿನ ಹಾನಗಲ್ಲ ತಾಲೂಕಿನ ೩ ಸಾವಿರ ಮಂದಿರಗಳ ಮೇಲೆ ಭಗವಾಧ್ವಜಾರೋಹಣ ನಡೆಯಲಿದೆ. ಗೋಸೇವಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಸಿದ್ದಲಿಂಗಣ್ಣ ಕಮಡೊಳ್ಳಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕಿರಣ ಮೂಡ್ಲಿ, ರಾಮು ಯಳ್ಳೂರ, ಮಹೇಶ ಹಿರೇಮಠ, ಸಿದ್ದಪ್ಪ ಹಿರಗಪ್ಪನವರ, ಶ್ರೀನಿವಾಸ ಶಿವಪೂಜಿ, ಬಸಣ್ಣ ಹಾದಿಮನಿ, ಚಂದ್ರಕಾಂತ ಕುಂದೂರ, ಮಾಲತೇಶ ಕಲ್ಲಿಕರೆಣ್ಣನವರ, ಶ್ರೀಕಾಂತ ದುಂಡಣ್ಣನವರ ಇದ್ದರು.